ಸಿಂಗರ್ ಚಿನ್ಮಯಿ ವರ್ಜಿನ್ ಬಗ್ಗೆ ಬೋಲ್ಡ್ ಕಾಮೆಂಟ್ಸ್, ಟೈಟ್ ಆಗಿದ್ದರೇ, ನೋವು ಬಂದರೇ, ರಕ್ತ ಬಂದರೇ ವರ್ಜಿನ್ ಅಲ್ಲ…..!

ಸೌತ್ ಸಿನಿರಂಗದಲ್ಲಿ ಗಾಯಕಿಯಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ದೊಡ್ಡ ಮಟ್ಟದಲ್ಲೇ ಖ್ಯಾತಿ ಪಡೆದುಕೊಂಡವರಲ್ಲಿ ಸಿಂಗರ್‍ ಚಿನ್ಮಯಿ ಒಬ್ಬರಾಗಿದ್ದಾರೆ. ಮಲ್ಟಿ ಟ್ಯಾಲೆಂಟೆಡ್ ಕಲಾವಿದೆಯಾಗಿ ಈಕೆ ಒಳ್ಳೆಯ ಕ್ರೇಜ್ ದಕ್ಕಿಸಿಕೊಂಡಿದ್ದಾರೆ. ಜೊತೆಗೆ ಆಕೆ ಮಹಿಳೆಯರ ಮೇಲೆ ನಡೆಯುವಂತಹ ದೌರ್ಜನ್ಯಗಳ ಕುರಿತಂತೆ ಆಕೆ ಫೈರ್‍ ಬ್ರಾಂಡ್ ಆಗಿ ಮಾರ್ಪಾಡಾಗಿದ್ದಾರೆ. ಇನ್ನೂ ಮಿಟೂ ಉದ್ಯಮದಲ್ಲೂ ಆಕೆ ಭಾಗಿಯಾಗಿದ್ದರು. ಇದೀಗ ಆಕೆ ವರ್ಜಿನ್ ಬಗ್ಗೆ ವಿಡಿಯೋ ಒಂದನ್ನು ತನ್ನ ಇನ್ಸ್ಟಾ ದಲ್ಲಿ ಶೇರ್‍ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಮಲ್ಟಿ ಟ್ಯಾಲೆಂಟೆಡ್ ಚಿನ್ಮಯಿ ಸಿನೆಮಾಗಳಿಗಿಂತ ವಿವಾದಗಳಿಂದಲೇ ಹೆಚ್ಚು ಕ್ರೇಜ್ ಪಡೆದುಕೊಂಡಿದ್ದಾರೆ ಎಂದರೇ ತಪ್ಪಾಗಲಾರದು. ತಮ್ಮ ಸುತ್ತಮುತ್ತಲಿನಲ್ಲಿ ನಡೆಯುವಂತಹ ಹೆಂಗಸರ ಸಮಸ್ಯೆಗಳ ಬಗ್ಗೆ ತನ್ನದೇ ಆದ ಶೈಲಿಯಲ್ಲಿ ರಿಯಾಕ್ಟ್ ಆಗುತ್ತಿರುತ್ತಾರೆ. ಜೊತೆಗೆ ಕಾಮೆಂಟ್ ಗಳನ್ನೂ ಸಹ ಮಾಡುತ್ತಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಸೋಷಿಯಲ್ ಮಿಡಿಯಾ ವೇದಿಕೆಯಲ್ಲಿ ಸದಾ ಸ್ಪಂದಿಸುತ್ತಾ ಇರುತ್ತಾರೆ. ಇದು ಅನೇಕ ಮಹಿಳೆಯರಿಗೆ ಸ್ಪೂರ್ತಿಯಾಗಿದೆ ಎಂದೂ ಸಹ ಹೇಳಬಹುದಾಗಿದೆ. ಜೊತೆಗೆ ಮಹಿಳೆಯರು ಎದುರಿಸುವಂತಹ ಅನೇಕ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿಯೇ ಚರ್ಚೆ ಮಾಡುತ್ತಿರುತ್ತಾರೆ. ಇದೀಗ ಚಿನ್ಮಯಿ ವರ್ಜಿನ್ ಎಂಬುದರ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಮೊದಲ ಬಾರಿ ಗಂಡು ಹೆಣ್ಣು ಸೇರುವಾಗ ಇರುವಂತಹ ಅನೇಕ ಅಪಾರ್ಥಗಳ ಬಗ್ಗೆ, ಹುಡುಗಿಯರನ್ನು ಹುಡುಗರು ಟ್ರೀಟ್ ಮಾಡುವ ವಿಧಾನದ ಬಗ್ಗೆ ಸ್ಪಂಧಿಸಿದ್ದಾರೆ. ಈ ಸಂಬಂಧ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹುಡುಗಿಯರು ಮೊದಲ ಬಾರಿಗೆ ಲೈಂಗಿಕ ಕ್ರಿಯೇಯಲ್ಲಿ ಭಾಗಿಯಾದಾಗ ನೋವು ಎಂತಲೂ, ರಕ್ತ ಬಂದರೇ, ಅಥವಾ ಟೈಟ್ ಆಗಿದೆ ಎಂದರೇ ಮಾತ್ರ ವರ್ಜಿನ್ ಎಂಬ ಭಾವನೆ ಅನೇಕರಲ್ಲಿದೆ. ಆದರೆ ಅದೆಲ್ಲಾ ಕೇವಲ ತಪ್ಪು ಕಲ್ಪನೆ. ಒಂದು ಟ್ರೋಲ್ ವಿಡಿಯೋ ಶೇರ್‍ ಮಾಡಿ ಈ ವಿಚಾರವನ್ನು ಚಿನ್ಮಯಿ ಹೇಳಿದ್ದಾರೆ. ಇನ್ನೂ ಮದುವೆ ಗಂಡು ಈ ರೀತಿಯಲ್ಲಿ ಕಲ್ಪಿಸಿಕೊಳ್ಳುತ್ತಿರುತ್ತಾರೆ. ಆದರೆ ರಿಯಾಲಿಟಿ ಬೇರೆನೆ ಇರುತ್ತದೆ ಎಂದು ಎಂದು ಆಕ್ರೋಷಗೊಂಡು ಈ ವಿಡಿಯೋ ಶೇರ್‍ ಮಾಡಿದ್ದಾರೆ.

ಇನ್ನೂ ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆದಾಗ ನೋವು ಅಥವಾ ಬೇರೆ ಸಮಸ್ಯೆ ಬಂದರೇ ಅಂತಹವರು ಕೂಡಲೇ ವೈದ್ಯರನ್ನು ಸಂಪರ್ಕ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇಂತಹ ವಿಚಾರವನ್ನು ಹಂಚಿಕೊಳ್ಳಲು ನಾಚಿಕೆ ಪಡಬಾರದು ಎಂದು ಅನೇಕ ವಿಚಾರಗಳನ್ನು ಚಿನ್ಮಯಿ ವಿಡಿಯೋ ಮೂಲಕ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Previous articleನೀನು ಕನ್ಯೆಯೇ ಎಂಬ ನೆಟ್ಟಿಗನ ಪ್ರಶ್ನೆಗೆ ಮೈಂಡ್ ಬ್ಲಾಕ್ ಆಗುವಂತಹ ಉತ್ತರ ಕೊಟ್ಟ ಶ್ರುತಿ ಹಾಸನ್…!
Next articleಬನ್ನಿ ಕಾರಣದಿಂದ ಶೂಟಿಂಗ್ ಸೆಟ್ ಬೇಸರದಿಂದ ಹೊರಬಂದರಂತೆ ರಶ್ಮಿಕಾ, ಶಾಕಿಂಗ್ ಪೋಸ್ಟ್ ವೈರಲ್….!