ಫಿಟ್ ನೆಸ್ ಗಾಗಿ ಹೆವಿ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡ ರಕುಲ್, ಆಕೆಯ ವರ್ಕೌಟ್ ಗೆ ಫಿದಾ ಆದ ಫ್ಯಾನ್ಸ್……!

ಸೌತ್ ಅಂಡ್ ನಾರ್ತ್ ಸಿನಿರಂಗದಲ್ಲಿ ಖ್ಯಾತಿ ಪಡೆದುಕೊಂಡ ನಟಿಯರಲ್ಲಿ ರಕುಲ್ ಪ್ರೀತ್ ಸಿಂಗ್ ಸ್ಯಾಂಡಲ್ ವುಡ್ ನ ಗಿಲ್ಲಿ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟರು. ಬಳಿಕ ಈಕೆ ಸಾಲು ಸಾಲು ಹಿಟ್ ಸಿನೆಮಾಗಳನ್ನು ಸಹ ನೀಡಿದ್ದಾರೆ. ಇನ್ನೂ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಬಳಿಕವಂತೂ ಆಕೆ ಮತಷ್ಟು ಹಾಟ್ ಆಗಿದ್ದಾರೆ.  ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಬ್ಯುಸಿಯಾಗಿದ್ದು, ಆಗಾಗ ವರ್ಕೌಟ್ ಮಾಡುತ್ತಾ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ. ಇದೀಗ ಆಕೆ ಫಿಟ್ ನೆಸ್ ಗಾಗಿ ಹೆವಿ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸ್ಟಾರ್‍ ನಟಿ ರಕುಲ್ ಪ್ರೀತ್ ಸಿಂಗ್ ಸ್ಯಾಂಡಲ್ ವುಡ್ ನ ಗಿಲ್ಲಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ತೆಲುಗು ತಮಿಳು ಹಾಗೂ ಹಿಂದಿ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡರು. ಅದರಲ್ಲೂ ಆಕೆ ಬಾಲಿವುಡ್ ನಲ್ಲೂ ತುಂಬಾನೆ ಕ್ರೇಜ್ ಪಡೆದುಕೊಂಡರು. ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ರಕುಲ್ ಪ್ರೀತ್ ಸಿಂಗ್ ಸದಾ ಕಠಿಣವಾದ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಕ್ರಮಶಿಕ್ಷಣದಿಂದ ಕೂಡಿರುವ ಜೀವನ ವಿಧಾನವನ್ನು ಸಹ ಫಾಲೋ ಆಗುತ್ತಾರೆ. ಆಕೆಯ ದಿನಚರಿಯಲ್ಲಿ ಕಡ್ಡಾಯವಾಗಿ ವ್ಯಾಯಾಮ ಹಾಗೂ ಯೋಗ ಇರುತ್ತದೆ. ಜೊತೆಗೆ ಡೈಯಟ್ ವಿಚಾರದಲ್ಲೂ ಸಹ ತುಂಬಾನೆ ಸ್ಟ್ರಿಕ್ಟ್ ಆಗಿರುತ್ತಾರೆ. ಇದೀಗ ಆಕೆಯ ವರ್ಕೌಟ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ಇನ್ನೂ ನಟಿ ರಕುಲ್ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಬ್ಯುಸಿಯಾಗಿರುತ್ತಾರೆ. ತನ್ನ ಸಿನೆಮಾ ಅಪ್ಡೇಟ್ ಗಳ ಜೊತೆಗೆ ವಿಡಿಯೋಗಳು, ಪೊಟೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಅದರಲ್ಲೂ ಆಕೆ ಆಗಾಗ ವರ್ಕೌಟ್ ಮಾಡುವಂತಹ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ರಕುಲ್ ಹೆವಿ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಜಿಮ್ ನಲ್ಲಿ ಭಾರಿ ತೂಕ ಎತ್ತುತ್ತಾ ಕಾಣಿಸಿಕೊಂಡಿದ್ದಾರೆ. ಅದನ್ನೂ ಹೊಟ್ಟೆಯ ಮೇಲೆ ತೂಕ ಇಟ್ಟುಕೊಂಡು ಕತ್ತನ್ನು ಟೇಬಲ್ ಮೇಲೆ ಇಟ್ಟು ಲಿಫ್ಟ್ ಮಾಡುತ್ತಿದ್ದಾರೆ. ಆಕೆಯ ವರ್ಕೌಟ್ ನೋಡಿದ ಅನೇಕರು ಶಾಕ್ ಆಗಿದ್ದಾರೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಆಕೆಯ ಈ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ರಕುಲ್ ಪ್ರೀತ್ ಸಿನೆಮಾಗಳ ಜೊತೆಗ ಆಗಾಗ ಕೆಲವೊಂದು ವೈಯುಕ್ತಿಕ ವಿಚಾರಗಳಿಂದಲೂ ಸಹ ಸುದ್ದಿಯಾಗುತ್ತಿರುತ್ತಾರೆ.  ರಕುಲ್ ಬಾಲಿವುಡ್ ನಟ ಜಾಕಿ ಭಗ್ನಾನಿ ಜೊತೆಗೆ ಪ್ರೀತಿಯಲ್ಲಿದ್ದು, ಈ ಸುದ್ದಿಯನ್ನು ಸೋಷಿಯಲ್ ಮಿಡಿಯಾದ ಮೂಲಕ ತಿಳಿಸಿದ್ದರು. ಸದ್ಯ ಆಕೆ ಕಮಲ್ ಹಾಸನ್ ರವರ ಇಂಡಿಯನ್-2 ಹಾಗೂ ಶಿವಕಾರ್ತಿಕೇಯನ್ ಜೊತೆಗೆ ನಟಿಸಿದ ಅಯಾಲಾನ್ ಸಿನೆಮಾ ಇದೇ ಜ.12 ರಂದು ತೆರೆಕಾಣಲಿದೆ.