Film News

ತನ್ನ ಬ್ಯೂಟಿ ಸೀಕ್ರೇಟ್ ರಿವೀಲ್ ಮಾಡಿದ ಪೂಜಾ ಹೆಗ್ಡೆ, ಆಕೆಗೆ ಆ ಮಸಾಜ್ ಅಂದ್ರೆ ತುಂಬಾ ಇಷ್ಟವಂತೆ..!

ಸಿನಿರಂಗದಲ್ಲಿ ಕೆಲ ನಟಿಯರು ಬ್ಯಾಕ್ ಟು ಬ್ಯಾಕ್ ಸೋಲನ್ನು ಕಂಡರೇ ಅವರು ಫೇಡ್ ಔಟ್ ಆಗಿ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಆದರೆ ಕೆಲವರು ಮಾತ್ರ ಸೋತರೂ ಗೆದ್ದರೂ ಸಿನೆಮಾಗಳಲ್ಲಿ ಮುನ್ನುಗ್ಗುತ್ತಿರುತ್ತಾರೆ. ಈ ಸಾಲಿಗೆ ಬುಟ್ಟಬೊಮ್ಮ ಪೂಜಾ ಹೆಗ್ಡೆ ಸಹ ಸೇರುತ್ತಾರೆ. ಆನ್ ಸ್ಕ್ರೀನ್ ಆಗಲಿ ಆಫ್ ಸ್ಕ್ರೀನ್ ಆಗಲು ಆಕೆ ತನ್ನ ಸೌಂದರ್ಯದ ಮೂಲಕ ಎಲ್ಲರನ್ನೂ ಸೆಳೆಯುತ್ತಾರೆ. ಇದೀಗ ಆಕೆ ತನ್ನ ಬ್ಯೂಟಿ ಸೀಕ್ರೇಟ್ ರಿವೀಲ್ ಮಾಡಿದ್ದಾರೆ.

ಸಾಮಾನ್ಯವಾಗಿ ಸಿನಿರಂಗದಲ್ಲಿ ಹಿರೋಯಿನ್ ಗಳಿಗೆ ಸೌಂದರ್ಯವೇ ಬಂಡವಾಳ ಎಂದು ಹೇಳಬಹುದಾಗಿದೆ. ಬ್ಯೂಟಿ ಇರುವವರೆಗೂ ಕೆರಿಯರ್‍ ಬುಲೆಟ್ ಟ್ರೈನ್ ನಂತೆ ಸಾಗುತ್ತದೆ. ಈ ಕಾರಣದಿಂದಲೇ ಅವರು ಎಷ್ಟೆ ಬ್ಯುಸಿಯಾಗಿದ್ದರೂ ಸೌಂದರ್ಯದ ಬಗ್ಗೆ ತುಂಬಾನೆ ಕಾಳಜಿ ವಹಿಸುತ್ತಾರೆ. ನಿರಂತರ ಯೋಗ, ವ್ಯಾಯಾಮ, ಜಿಮ್ ನಲ್ಲಿ ಕಸರತ್ತು ಗಳು ಸೇರಿದಂತೆ ಕೆಲವೊಂದು ಆಹಾರ ಪದ್ದತಿಗಳನ್ನು ಸಹ ಫಾಲೋ ಮಾಡುತ್ತಾರೆ. ಇದೀಗ ಸ್ಟಾರ್‍ ನಟಿ ಪೂಜಾ ಹೆಗ್ಡೆ ಗ್ಲಾಮರ್‍ ಕಾಪಾಡಿಕೊಳ್ಳಲು ಆಕೆ ಫಾಲೋ ಮಾಡುವಂತಹ ಟಿಪ್ಸ್ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆಕೆ ಸೌಂದರ್ಯಕ್ಕಾಗಿ ಅಷ್ಟೊಂದು ಕ್ಲಾಸಿಮೆಟಿಕ್ಸ್ ಬಳಸುವುದಿಲ್ಲವಂತೆ. ನ್ಯಾಚುರಲ್ ಆಗಿರುವಂತಹ ಹರಿಶಿಣ ಹಾಗೂ ಹಾಲಿನ ಕೆನೆಯೊಂದಿಗೆ ಮುಖಕ್ಕೆ ಫೇಸ್ ಪ್ಯಾಕ್ ಮಾಡಿಕೊಂಡು ಕೆಲವು ನಿಮಿಷಗಳ ಬಳಿಕ ತಣ್ಣೀರಿನೊಂದಿಗೆ ತೊಳೆದು ಬಿಡುತ್ತಾರಂತೆ. ಇದರಿಂದಾಗಿ ಮುಖ ತುಂಬಾ ಫ್ರೆಶ್ ಆಗಿ ಕಾಣಿಸಿಕೊಳ್ಳುತ್ತದೆಯಂತೆ.

ಅಷ್ಟೇ ಅಲ್ಲದೇ ಪ್ರತಿನಿತ್ಯ ಒಂದು ಟಿ ಸ್ಪೂನ್ ತುಪ್ಪ ತಿನ್ನುತ್ತಾರಂತೆ. ಕಾರ್ಬೋಹೈಡ್ರೇಟ್ ಹೆಚ್ಚಿರುವಂತಹ ತರಕಾರಿ, ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸುತ್ತಾರಂತೆ. ನೀರು ಹೆಚ್ಚಾಗಿ ಸೇವಿಸುವುದು, ನೀರಿನ ಅಂಶ ಹೆಚ್ಚಿರುವಂತಹ ತರಕಾರಿ ಸೇವಿಸುವುದು ಮಾಡುತ್ತಾರಂತೆ. ಇನ್ನೂ ಪೂಜಾಗೆ ಎಗ್ಜಿಮಾ ಎಂಬ ಸಮಸ್ಯೆಇರುವ ಕಾರಣ ಶರೀರ ಬೇಗ ಡ್ರೈ ಆಗುತ್ತದೆಯಂತೆ. ಈ ಕಾರಣದಿಂದಲೇ ಆಕೆ ನಿದ್ದೆಯಿಂದ ಎದ್ದ ಕೂಡಲೇ ಮುಖವನ್ನು ತೊಳೆದು ಮಾರ್ಶ್ಚರೈಜರ್‍ ಬಳಸುತ್ತಾರಂತೆ. ಶೂಟಿಂಗ್ ಇಲ್ಲದೇ ಇದ್ದಾಗ ಮೇಕಪ್ ನಿಂದ ದೂರವೇ ಉಳಿಯುತ್ತಾರಂತೆ. ಹೊರಗಿನ ವಾತಾವರಣದಲ್ಲಿ ಚರ್ಮಕ್ಕೆ ಸಮಸ್ಯೆಯಾಗದಂತೆ ಬ್ಯಾಗ್ ನಲ್ಲಿ ಮಾರ್ಶ್ಚರೈಜರ್‍, ಲಿಪ್ಸ್ಟಿಕ್, ಗ್ಲಾಸಸ್ ಸನ್ ಸ್ಕ್ರೀನ್ ಇಟ್ಟುಕೊಂಡಿರುತ್ತಾರೆ. ಸಮಯದ ದೊರೆತಾಗ ಸ್ಪಾಗೆ ಹೋಗುತ್ತಾರಂತೆ. ಡೀಪ್ ಟಿಷ್ಯೂ ಮಸಾಜ್ ಎಂದರೇ ಆಕೆಗೆ ತುಂಬಾನೆ ಇಷ್ಟವಂತೆ. ಜೊತೆಗೆ ಕೂದಲನ್ನು ಸಂರಕ್ಷಣೆ ಮಾಡಲು ಕೊಬ್ಬರಿ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತಾರಂತೆ. ಸ್ನಾನಕ್ಕೂ ಮುಂಚೆ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುತ್ತಾರಂತೆ. ಜೊತೆಗೆ ಮುಂಜಾನೆ ಎದ್ದ ಕೂಡಲೇ ಒಂದು ಟಿ ಸ್ಪೂನ್ ಕೊಬ್ಬರಿ ಎಣ್ಣೆ ಸಹ ಸೇವನೆ ಮಾಡುತ್ತಾರಂತೆ.

ಇನ್ನೂ ಪೂಜಾ ಹೆಗ್ಡೆಗೆ ಕಳೆದ ವರ್ಷ ಭಾರಿ ನಿರಾಸೆ ಮೂಡಿದೆ. ಆಕೆ ಅಭಿನಯದ ನಾಲ್ಕು ಸಿನೆಮಾಗಳು ಬಾಕ್ಸ್ ಆಫಿಸ್ ನಲ್ಲಿ ಕಲೆಕ್ಷನ್ ಮಾಡಲು ವಿಫಲವಾದವು.  ಇತ್ತೀಚಿಗಷ್ಟೆ ತೆರೆಕಂಡ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನೆಮಾದಲ್ಲಿ ಪೂಜಾ ಸಲ್ಮಾನ್ ಖಾನ್ ಜೊತೆಗೆ ನಟಿಸಿದ್ದರು. ಈ ಸಿನೆಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದರ ಜೊತೆಗೆ ಮಹೇಶ್ ಬಾಬು ಜೊತೆಗೆ SSMB28 ಸಿನೆಮಾದಲ್ಲೂ ಸಹ ಪೂಜಾ ಬಣ್ಣ ಹಚ್ಚಿದ್ದಾರೆ.

Most Popular

To Top