ದೇಹದ ಭಾಗಗಳನ್ನು ಜೂಮ್ ಮಾಡಿ ಟ್ರೋಲ್ ಮಾಡುತ್ತಾರೆ, ಬಾಡಿಶೇಮಿಂಗ್ ಬಗ್ಗೆ ಫೈರಿಂಗ್ ಕಾಮೆಂಟ್ಸ್ ಮಾಡಿದ ನಟಿ ಮೃಣಾಲ್….!

Follow Us :

ಸೀತಾರಾಮಂ ಎಂಬ ಸಿನೆಮಾದ ಮೂಲಕ ಕ್ರೇಜಿ ನಟಿಯಾಗಿರುವ ಮೃಣಾಲ್ ಠಾಕೂರ್‍ ಸೋಷಿಯಲ್ ಮಿಡಿಯಾದಲ್ಲಂತೂ ಭಾರಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಈ ಸಿನೆಮಾದಲ್ಲಿ ಆಕೆ ತುಂಬಾ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಆಕೆ ಸೀತಾ ಮಹಾಲಕ್ಷ್ಮೀ ಎಂಬ ಪಾತ್ರದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ತುಂಬಾನೆ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಮೃಣಾಲ್ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡುತ್ತಿರುತ್ತಾರೆ. ಇದೀಗ ಆಕೆ ಬಾಡಿ ಶೇಮಿಂಗ್ ಬಗ್ಗೆ ಫೈರಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿದೆ.

ಬಹುಬೇಡಿಕೆ ನಟಿ ಮೃಣಾಲ್ ಠಾಕೂರ್‍ ಸೋಷಿಯಲ್ ಮಿಡಿಯಾದ ಪೋಸ್ಟ್ ಗಳು, ಬಾಡಿ ಪಾರ್ಟ್‌ಗಳ ಬಗ್ಗೆ ಹರಿದಾಡುವ ಟ್ರೋಲ್ ಗಳ ವಿರುದ್ದ ಫೈರ್‍ ಆಗಿದ್ದಾರೆ. ನಟಿಯರ ಪೊಟೊಗಳನ್ನು ಹಾಗೂ ವಿಡಿಯೋಗಳಿಗೆ ಕೆಟ್ಟ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದೀಗ ಬಾಡಿ ಶೆಮಿಂಗ್ ಬಗ್ಗೆ ಮೃಣಾಲ್ ಮಾತನಾಡಿದ್ದಾರೆ. ಕೆಲವು ನಟಿಯರನ್ನು ವಸ್ತುಗಳಂತೆ ನೋಡುತ್ತಾರೆ. ಕೆಲವರು ಹಿರೋಯಿನ್ ಗಳ ಖಾಸಗಿ ಭಾಗಗಳನ್ನು ಪೋಕಸ್ ಮಾಡಿ ಅವುಗಳನ್ನು ಜೂಮ್ ಮಾಡಿ ಕಾಮೆಂಟ್ ಗಳನ್ನು ಮಾಡುತ್ತಿರುತ್ತಾರೆ. ಜೊತೆಗೆ ಪೊಟೋಗಳನ್ನು ಅವರಿಗೆ ಇಷ್ಟ ಬಂದಂತೆ ಬದಲಿಸಿ ಶೇರ್‍ ಮಾಡುತ್ತಿರುತ್ತಾರೆ. ಈ ರೀತಿಯಲ್ಲಿ ನನಗೂ ಸಹ ನಡೆದಿದೆ. ಇವು ನನಗೆ ತುಂಬಾನೆ ನೋವು ತಂದುಕೊಟ್ಟಿವೆ ಎಂದು ಮೃಣಾಲ್ ಹೇಳಿದ್ದಾರೆ. ಅಂತಹವರ ವಿರುದ್ದ ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇನ್ನೂ ನಟಿ ಮೃಣಾಲ್ ಠಾಕೂರ್‍ ರವರಿಗೆ ಈ ಹಿಂದೆ ಸಹ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದರು. ನಾನು ಸೆಕ್ಸಿಯಾಗಿರೊಲ್ಲ, ಹಳ್ಳಿ ಹುಡುಗಿಯಂತೆ ಇರುತ್ತೀಯಾ, ತೂಕ ಕಡಿಮೆಯಾಗಬೇಕೆಂದು ಅನೇಕರು ಸಲಹೆಗಳನ್ನು ನೀಡಿದ್ದರು. ಅದಕ್ಕೂ ಸಹ ಆಕೆ ಸರಿಯಾಗಿಯೇ ಕೌಂಟರ್‍ ಕೊಟ್ಟಿದ್ದರಂತೆ. ನಟಿ ಮೃಣಾಲ್ ತುಂಬಾ ಕಷ್ಟಪಟ್ಟು ಸ್ಟಾರ್‍ ನಟಿಯಾಗಿದ್ದಾರೆ. ಡಾಕ್ಟರ್‍ ಆಗಬೇಕೆಂಬ ಗುರಿಯನ್ನು ಹೊಂದಿದ್ದ ಮೃಣಾಲ್ ಇದೀಗ ನಟಿಯಾಗಿದ್ದಾರೆ. ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಇದೀಗ ಬಹುಬೇಡಿಕೆ ನಟಿಯಾಗಿದ್ದಾರೆ. ತೆಲುಗಿನಲ್ಲಿ ಸೀತಾರಾಮಂ ಸಿನೆಮಾದ ಮೂಲಕ ಆಕೆಯ ಕ್ರೇಜ್ ತುಂಬಾನೆ ಹೆಚ್ಚಾಯ್ತು ಎಂದು ಹೇಳಬಹುದು. ಇದೀಗ ಆಕೆ ವಿಜಯ್ ದೇವರಕೊಂಡ ಜತೆಗೆ ಫ್ಯಾಮಿಲಿ ಸ್ಟಾರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಸಿನೆಮಾದ ಪ್ರಮೋಷನ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಆಕೆ ಕಲ್ಕಿ 2898ಎಡಿ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹಿಂದಿ ಹಾಗೂ ತಮಿಳಿನಲ್ಲಿ ಸಹ ಕೆಲವೊಂದು ಸಿನೆಮಾಗಳನ್ನು ಮಾಡುತ್ತಿದ್ದಾರೆ.