Film News

ಕಡಲ ತೀರದಲ್ಲಿ ಹಾಟ್ ಪೋಸ್ ಕೊಟ್ಟ ಕಿಯಾರಾ, ಮದುವೆಯಾದರೂ ಸಹ ಮತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡ ಹಾಟ್ ಬ್ಯೂಟಿ….!

ಸೌತ್ ಅಂಡ್ ನಾರ್ತ್ ನಲ್ಲೂ ನಟನೆ ಹಾಗೂ ಬ್ಯೂಟಿಯಿಂದ ಮುನ್ನುಗ್ಗುತ್ತಿರುವ ನಟಿ ಕಿಯಾರಾ ಅಡ್ವಾನಿ ಕೆಲವು ದಿನಗಳ ಹಿಂದೆಯಷ್ಟೆ ಮದುವೆಯಾದರು. ಬಾಲಿವುಡ್ ರಂಗದ ಈ ಬ್ಯೂಟಿ ಮದುವೆಯಾದರೂ ಸಹ ಮತಷ್ಟು ಹಾಟ್ ಆಗಿ ಪೋಸ್ ಗಳನ್ನು ಕೊಟ್ಟಿದ್ದಾರೆ. ಕಡಲ ತೀರದಲ್ಲಿ ಗ್ಲಾಮರಸ್ ಪೊಟೋಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಮದುವೆಯಾದ ಬಳಿಕವೂ ಸಹ ಕಿಯಾರಾ ಹಾಟ್ ಆಗಿ ಕಾಣಿಸಿಕೊಂಡಿದ್ದು, ಆಕೆಯ ಪೊಟೋಗಳು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಬಾಲಿವುಡ್ ಸಿನಿರಂಗದ ಸ್ಟಾರ್‍ ನಟಿ ಕಿಯಾರಾ ಅಡ್ವಾನಿ ಸೂಪರ್‍ ಸ್ಟಾರ್‍ ಮಹೇಶ್ ಬಾಬು ಜೊತೆಗೆ ಮಹರ್ಷಿ, ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ ಜೊತೆಗೆ ವಿನಯ ವಿಧೇಯ ರಾಮ್ ಎಂಬ ಸಿನೆಮಾಗಳಲ್ಲಿ ನಟಿಸಿ ಸೌತ್ ಪ್ರೇಕ್ಷಕರನ್ನೂ ಸಹ ರಂಜಿಸಿದ್ದರು. ಜೊತೆಗೆ ಬಾಲಿವುಡ್ ನಲ್ಲೂ ಸಹ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಸುಮಾರು ದಿನಗಳಿಂದ ಡೇಟಿಂಗ್ ನಡೆಸಿ ಸಿದ್ದಾರ್ಥ್ ಮೆಲ್ಹೋತ್ರಾ ರವರನ್ನು ಮದುವೆಯಾದರು. ಕಳೆದ ಫೆ.7 ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾದರು. ಇನ್ನೂ ಈ ಜೋಡಿಯ ಮದುವೆಗೆ ಅನೇಕ ಬಾಲಿವುಡ್ ಸ್ಟಾರ್‍ ಗಳು, ರಾಜಕಾರಣಿಗಳೂ ಸಹ ಭಾಗಿಯಾಗಿ ನೂತನ ವಧು ವರರನ್ನು ಆರ್ಶಿವದಿಸಿದ್ದರು. ಇನ್ನೂ ಕಿಯಾರಾ ಹಾಗೂ ಸಿದ್ದಾರ್ಥ್ ಅಭಿಮಾನಿಗಳೂ ಸಹ ಪುಲ್ ಖುಷಿಯಾಗಿ ಶುಭಾಷಯಗಳನ್ನು ಕೋರಿದ್ದರು.

ಸದ್ಯ ಮದುವೆಯ ಬಳಿಕ ಅವರವರ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಹಾದಿಯಲ್ಲೇ ಕಿಯಾರಾ ಸೋಷಿಯಲ್ ಮಿಡಿಯಾದಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ  ಕಿಯಾರಾ ತಮ್ಮ ಸಿನೆಮಾಗಳ ಬಗ್ಗೆ ಹಾಗೂ ವೈಯುಕ್ತಿಕ ವಿಚಾರಗಳ ಜೊತೆಗೆ ಗ್ಲಾಮರಸ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಇದೀಗ ಕಿಯಾರಾ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಮದುವೆಯಾದರೂ ಸಹ ಕಿಯಾರಾ ಬೀಚ್ ಬಳಿ ಸ್ಲೀವ್ ಲೆಸ್ ಟಾಪ್ ಧರಿಸಿ ಹಾಟ್ ಪೋಸ್ ಕೊಟ್ಟಿದ್ದಾರೆ. ಇನ್ನೂ ಆಕೆ ಈ ಬೋಲ್ಡ್ ಪೊಟೋಗಳನ್ನು ನೋಡಿದ ಅಭಿಮಾನಿಗಳು ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಕಿಯಾರಾ ಅಡ್ವಾನಿ ಪೊಟೋಗಳನ್ನು ಹಂಚಿಕೊಂಡ ಕಡಿಮೆ ಸಮಯದಲ್ಲೇ ಲಕ್ಷಗಟ್ಟಲೇ ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ ಲೈಕ್ಸ್ ಗಳ ಸುರಿಮಳೆಯಾಗುತ್ತಿದೆ. ಸದ್ಯ ಕಿಯಾರಾ ರಾಮ್ ಚರಣ್ ಜೊತೆಗೆ RC15 ಸಿನೆಮಾದ ಮೂಲಕ ಮತ್ತೊಮ್ಮೆ ಟಾಲಿವುಡ್ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಅದೇ ರೀತಿ ಬಾಲಿವುಡ್ ನಲ್ಲಿ ಸತ್ಯ ಪ್ರೇಮ ಕಿ ಕಥ ಎಂಬ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ.

Most Popular

To Top