Film News

ಕೀರ್ತಿ ಸುರೇಶ್ ಜೊತೆಗಿರುವ ಆ ಹುಡುಗ ಯಾರು, ಆತನೆ ಕೀರ್ತಿ ಸುರೇಶ್ ಭಾವಿ ಪತಿಯೇ? ವೈರಲ್ ಆದ ಪೊಟೋ….!

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳ ವೈಯುಕ್ತಿಕ ವಿಚಾರಗಳನ್ನು ತಿಳಿಯಲು ಅವರ ಅಭಿಮಾನಿಗಳಿಗೆ ತುಂಬಾ ಆಸಕ್ತಿ ಇರುತ್ತದೆ. ಅದರಲ್ಲೂ ನಟಿಯರ ಬಗ್ಗೆ ತಿಳಿದುಕೊಳ್ಳಲು ಮತಷ್ಟು ಉತ್ಸುಕರಾಗಿರುತ್ತಾರೆ. ಈ ಹಾದಿಯಲ್ಲೇ ಸ್ಟಾರ್‍ ನಟಿ ಕೀರ್ತಿ ಸುರೇಶ್ ರವರ ವೈಯುಕ್ತಿಕ ವಿಚಾರಗಳು ಇದೀಗ ಜೋರಾಗಿಯೆ ಚರ್ಚೆಯಾಗುತ್ತಿದೆ. ಈ ನಡುವೆ ಕೀರ್ತಿ ಸುರೇಶ್ ಯುವಕನೊಬ್ಬನೊಂದಿಗೆ ಕಾಣಿಸಿಕೊಂಡಿದ್ದಾರೆ. ಆ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಪೊಟೋದಲ್ಲಿರುವ ಹುಡುಗನನ್ನೆ ಕೀರ್ತಿ ಸುರೇಶ್ ವರಿಸಲಿದ್ದಾರೆಯೇ ಎಂಬ ಅನುಮಾನಗಳನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ.

ನಟಿ ಕೀರ್ತಿ ಸುರೇಶ್ ಇದೀಗ ಮೂವತ್ತರ ವಯಸ್ಸಿನ ಗಡಿ ದಾಟಿದ್ದಾರೆ. ಈ ಕಾರಣದಿಂದ ಕೀರ್ತಿ ಸುರೇಶ್ ಮದುವೆಯ ಸುದ್ದಿಗಳು ಜೋರಾಗುತ್ತಿವೆ. ಕೆಲವು ದಿನಗಳಿಂದ ಕೀರ್ತಿ ಸುರೇಶ್ ಮದುವೆಯ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ಕೀರ್ತಿ ಸುರೇಶ್ ಯುವಕನೊಬ್ಬನೊಂದಿಗೆ ತುಂಬಾ ಕ್ಲೋಜ್ ಆಗಿ ಕಾಣಿಸಿಕೊಂಡಿದ್ದಾರೆ. ಆ ವ್ಯಕ್ತಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕೀರ್ತಿ ಸುರೇಶ್ ಸಹ ಭಾಗಿಯಾಗಿದ್ದಾರೆ. ಆತನೊಂದಿಗೆ ತೆಗೆಸಿದ ಪೊಟೊ ಅನ್ನು ಕೀರ್ತಿ ಸುರೇಶ್ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಶುಭಾಷಯಗಳನ್ನು ಸಹ ಕೋರಿದ್ದಾರೆ. ಇನ್ನೂ ಅವರಿಬ್ಬರ ಜೋಡಿ ನೋಡಲು ತುಂಬಾ ಚೆನ್ನಾಗಿದೆ. ಬೆಸ್ಟ್ ಪೈರ್‍ ಎಂದು ಹೇಳಲಾಗುತ್ತಿದೆ. ಆತನೇ ಕೀರ್ತಿ ಸುರೇಶ್ ರನ್ನು ಮದುವೆಯಾಗುವ ಹುಡುಗ ಎಂದು ಸೋಷಿಯಲ್ ಮಿಡಿಯಾದಲ್ಲಿ ಜೋರಾದ ಚರ್ಚೆಗಳು ನಡೆಯುತ್ತಿವೆ.

ಈ ಪೊಟೋದಲ್ಲಿ ಇಬ್ಬರೂ ತುಂಬಾ ಕ್ಲೋಜ್ ಆಗಿದ್ದಾರೆ. ಕೀರ್ತಿ ಸುರೇಶ್ ಮೇಲೆ ಅಷ್ಟೊಂದು ಪ್ರೀತಿ ತೋರಿಸುತ್ತಿರು ಆ ವ್ಯಕ್ತಿ ಯಾರು ಎಂಬ ಬಗ್ಗೆ ಸರ್ಚ್ ಮಾಡಿದ್ರೆ. ಆತನ ಹೆಸರು ಫರ್ಹಾನ್ ಬಿನ್ ಲಿಯಾಕತ್ ಎಂಬ ರಿಯಲ್ ಎಸ್ಟೇಟ್ ವ್ಯಾಪಾರಿ. ಆಸ್ತಿ ಪರವಾಗಿಯೂ ಕೀರ್ತಿ ಸುರೇಶ್ ರವರಿಗೆ ತಕ್ಕ ವ್ಯಕ್ತ ಎಂದು ಹೇಳಬಹುದಾಗಿದೆ. ಫರ್ಹಾನ್ ಹಾಗೂ ಕೀರ್ತಿ ಸುರೇಶ್ ಇಬ್ಬರೂ ಪ್ರೀತಿಸಿಕೊಳ್ಳುತ್ತಿದ್ದಾರಂತೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕೀರ್ತಿ ಸುರೇಶ್ ತಾಯಿ ಖಂಡಿಸಿದ್ದಾರೆ. ಅದೆಲ್ಲಾ ಸುಳ್ಳು ಸುದ್ದಿ, ಕೀರ್ತಿ ಸುರೇಶ್ ಸದ್ಯ ಸಿಂಗಲ್ ಆಗಿದ್ದಾರೆ. ಯಾರೋಂದಿಗೂ ರಿಲೇಷನ್ ನಲ್ಲಿ ಇಲ್ಲ. ಕೀರ್ತಿ ಸುರೇಶ್ ಆ ರೀತಿಯಲ್ಲಿ ಯಾರನ್ನಾದರೂ ಪ್ರೀತಿಸುತ್ತಿದ್ದರೇ ನಮಗೆ ಹೇಳು‌ತ್ತಾರೆ ಎಂದು ಕ್ಲಾರಿಟಿ ಕೊಟ್ಟಿದ್ದಾರೆ.

ಇನ್ನೂ ಕೀರ್ತಿ ಸುರೇಶ್ ಕೊನೆಯದಾಗಿ ದಸರಾ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಈ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡಿದೆ. ಇದೀಗ ಆಕೆ ಮೆಗಾಸ್ಟಾರ್‍ ಚಿರಂಜೀವಿಯವರ ಭೋಳಾಶಂಕರ್‍ ಸಿನೆಮಾದಲ್ಲಿ ಚಿರಂಜೀವಿಯವರ ತಂಗಿಯಾಗಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮಿಳಿನಲ್ಲಿ ಸೈರನ್ ಎಂಬ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಇದೀಗ ಕೀರ್ತಿ ಸುರೇಶ್ ರವರ ಮದುವೆಯದ್ದೆ ಜೋರಾದ ಚರ್ಚೆಯಾಗಿದೆ.

Most Popular

To Top