ಬಾಡಿಶೇಮಿಂಗ್ ಬಗ್ಗೆ ಬಾಯ್ಬಿಟ್ಟ ನಟಿ ಸಂಯುಕ್ತ ಮಿನನ್, ಅದು ಚಿಕ್ಕದಾಗಿದೆ ಎಂದು ಅವಮಾನಿಸಿದ್ದರಂತೆ…..!

Follow Us :

ಮಲಯಾಳಂ ಸಿನೆಮಾಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಯುಕ್ತಾ ಇದೀಗ ಸೌತ್ ನ ಬಹುಬೇಡಿಕೆ ನಟಿಯಾಗಿದ್ದಾರೆ. ತೆಲುಗಿನಲ್ಲಿ ಈಕೆ ಪವನ್ ಕಲ್ಯಾಣ್ ಅಭಿನಯದ ಭಿಮ್ಲಾ ನಾಯಕ್ ಸಿನೆಮಾದಲ್ಲಿ ನಟಿಸುವ ಮೂಲಕ ತೆಲುಗು ರಂಗಕ್ಕೆ ಎಂಟ್ರಿ ಕೊಟ್ಟರು. ಇದೀಗ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಗಳನ್ನು ಪಡೆದುಕೊಂಡು ತೆಲುಗು ಸಿನೆಮಾಗಳಿಗೆ ಗೋಲ್ಡನ್ ಲೆಗ್ ಆಗಿದ್ದಾರೆ ಎನ್ನಲಾಗುತ್ತಿದೆ. ಇದೀಗ ಸಂಯುಕ್ತ ಮಿನನ್ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಆಕೆಯನ್ನು ಆ ಭಾಗ ಸಣ್ಣದಾಗಿದೆ ಎಂದು ಅವಮಾನಿಸಿದ್ದರಂತೆ ಎಂಬ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಕೇರಳ ಮೂಲದ ನಟಿ ಸಂಯುಕ್ತಾ ಮಿನನ್ ಸದ್ಯ ಗೋಲ್ಡನ್ ಲೆಗ್ ಆಗಿ ಸಾಲು ಸಾಲು ಸಕ್ಸಸ್ ಕಾಣುತ್ತಿದ್ದಾರೆ. ಭೀಮ್ಲಾ ನಾಯಕ್ ಸಿನೆಮಾದ ಮೂಲಕ ಜೋರನ್ನು ಪಡೆದುಕೊಂಡ ಈಕೆ ಬಿಂಬಿಸಾರ, ಸಾರ್‍ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು. ಆ ಮೂಲಕ ಗೋಲ್ಡನ್ ಲೆಗ್ ಎಂಬ ಖ್ಯಾತಿಗೂ ಸಹ ಗುರಿಯಾದರು. ಇನ್ನೂ ಇತ್ತೀಚಿಗೆ ತೆರೆಕಂಡ ವಿರೂಪಾಕ್ಷ ಸಿನೆಮಾದಲ್ಲೂ ಸಹ ಸಂಯುಕ್ತಾ ಮಿನನ್ ನಟಿಸಿದ್ದು, ಈ ಸಿನೆಮಾ ಸಹ ಬಾಕ್ಸ್ ಆಫೀಸ್ ಲೂಟಿ ಹೊಡೆಯುತ್ತಿದೆ. ಮೆಗಾ ಕುಟುಂಬದ ಸುಪ್ರೀಂ ಹಿರೋ ಸಾಯಿ ಧರಮ್ ತೇಜ್ ಅಪಘಾತದಿಂದ ಚೇತರಿಸಿಕೊಂಡ ಬಳಿಕ ಬಿಡುಗಡೆಯಾದ ಸಿನೆಮಾ ಇದಾಗಿದ್ದು, ಬಿಡುಗಡೆಯಾದ ಐದು ದಿನಗಳಲ್ಲೇ ಸುಮಾರು 50 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಹಾರರ್‍ ಥ್ರಿಲ್ಲರ್‍ ಕಥನವುಳ್ಳ ಈ ಸಿನೆಮಾ ಭಾರಿ ಸಕ್ಸಸ್ ಕಂಡಿದೆ.

ಇನ್ನೂ ಸಂಯುಕ್ತಾ ಮಿನನ್ ಈಗಾಗಲೇ ನಾಲ್ಕು ಸೂಪರ್‍ ಹಿಟ್ ಸಿನೆಮಾಗಳನ್ನು ಪಡೆದುಕೊಂಡಿದ್ದು, ಇದೀಗ ಡಬಲ್ ಹ್ಯಾಟ್ರಿಕ್ ನತ್ತ ಸಾಗುತ್ತಿದ್ದಾರೆ. ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಬರುತ್ತಿದ್ದರೂ ಸಹ ಆತುರ ಪಡದೆ ಅಳೆದು ತೂಗಿ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಕಲ್ಯಾಣ್ ರಾಮ್ ಜೊತೆಗೆ ಆತ ಡೆವಿಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಸಂಯುಕ್ತಾ ಮಿನನ್ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಇತ್ತಿಚಿಗೆ ತೆರೆಕಂಡ ವಿರೂಪಾಕ್ಷ ಸಿನೆಮಾದ ಆಡಿಷನ್ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ನಾನು ತೆಲುಗಿನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದೆ. ಆದರೂ ಸಹ ನಾನು ಆಡಿಷನ್ ಗೆ ಒಪ್ಪಿಕೊಂಡೆ. ಆಡಿಷನ್ ಸಹ ಚೆನ್ನಾಗಿ ಮಾಡಿ‌ದ್ದರಂತೆ. ಆಕೆಯ ಕಣ್ಣುಗಳ ಬಗ್ಗೆ ಒಳ್ಳೆಯ ಮೆಚ್ಚುಗೆ ಸಹ ಪಡೆದುಕೊಂಡರಂತೆ. ಆದರೆ ಈ ಹಿಂದೆ ತನ್ನ ಕಣ್ಣುಗಳ ಬಗ್ಗೆ ವಿಮರ್ಶೆಗಳನ್ನು ಸಹ ಮಾಡಿದ್ದರಂತೆ.

ಕೆರಿಯರ್‍ ಆರಂಭದಲ್ಲಿ ತನ್ನ ಕಣ್ಣುಗಳನ್ನು ನೋಡಿ ತುಂಬಾ ಸಣ್ಣ ಇದೆ. ನನ್ನ ಕಣ್ಣುಗಳಲ್ಲಿ ಎಕ್ಸ್‌ಪ್ರೆಷನ್ಸ್ ಕಾಣಿಸುತ್ತಿಲ್ಲ ಎಂದು ಧಾರುಣವಾಗಿ ವಿಮರ್ಶೆ ಮಾಡಿದ್ದರಂತೆ. ಜೊತೆಗೆ ನೀವು ಹಿರೋಯಿನ್ ಆಗಲು ತುಂಬಾ ಕಷ್ಟ ಎಂದು ಸಹ ಹೇಳಿದ್ದರಂತೆ. ಆದರೆ ಇದೀಗ ಅದೇ ಕಣ್ಣುಗಳ ಎಕ್ಸ್‌ಪ್ರೆಷನ್ಸ್ ಕಾರಣದಿಂದ ನನಗೆ ಒಳ್ಳೆಯ ಆಫರ್‍ ಗಳು ಬರುತ್ತಿವೆ ಎಂದು ಹೇಳಿದ್ದಾರೆ.