ನಮಗಿಲ್ಲದ ಆಸಕ್ತಿ ನಿಮಗೇಕೆ ಎಂದ ನಟಿ ಕೀರ್ತಿ ಸುರೇಶ್, ನನ್ನ ಮದುವೆ ಮೇಲೆ ನಿಮಗೆ ಏಕೆ ಅಷ್ಟೊಂದು ಆಸಕ್ತಿ ಎಂದ ನಟಿ?

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳ ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳು ಅನೇಕರಿಗೆ ತುಂಬಾನೆ ಆಸಕ್ತಿಯಿರುತ್ತದೆ. ಅದರಲ್ಲೂ ಮದುವೆಯಾಗದ ನಟಿಯರು ಸಿಕ್ಕರೇ ಸಾಕು ಮದುವೆಯ ಬಗ್ಗೆ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ. ಕೆಲವು ದಿನಗಳಿಂದ ಸೌತ್ ಸ್ಟಾರ್‍ ನಟಿ ಕೀರ್ತಿ ಸುರೇಶ್ ಮದುವೆಯ ಬಗ್ಗೆ ಸಹ ಅನೇಕ ರೂಮರ್‍ ಗಳು ಕೇಳಿಬರುತ್ತಲೇ ಇದೆ. ಇದೀಗ ಮತ್ತೊಮ್ಮೆ ಆಕೆಗೆ ಮದುವೆಯ ಬಗ್ಗೆ ಪ್ರಶ್ನೆ ಎದುರಾಗಿದ್ದು, ಅದಕ್ಕೆ ಕೀರ್ತಿ ಸುರೇಶ್ ಅಸಮಧಾನದಿಂದಲೇ ನನ್ನ ಮದುವೆ ಮೇಲೆ ನಮಗಿಂತ ನಿಮಗೆ ತುಂಬಾ ಆಸಕ್ತಿ ಏಕೆ ಎಂದು ಫೈರ್‍ ಆಗಿದ್ದಾರೆ.

ನಟಿ ಕೀರ್ತಿ ಸುರೇಶ್ ಮಹಾನಟಿ ಸಿನೆಮಾದ ಮೂಲಕ ಖ್ಯಾತಿ ಪಡೆದುಕೊಂಡು ಬಳಿಕ ಆಕೆಯ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಂಡಿರಲಿಲ್ಲ. ಆದರೆ ಮಹೇಶ್ ಬಾಬು ರವರ ಸರ್ಕಾರು ವಾರಿ ಪಾಠ ಸಿನೆಮಾದ ಮೂಲಕ ಮತ್ತೆ ಸಕ್ಸಸ್ ಹಾದಿಯನ್ನು ಕಂಡುಕೊಂಡರು. ಬಳಿಕೆ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಗಳನ್ನು ಸಹ ಪಡೆದುಕೊಂಡರು. ಇತ್ತಿಚಿಗಷ್ಟೆ ಆಕೆ ದಸರಾ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು ಈ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಕೆರಿಯರ್‍ ಆರಂಭದಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಕೀರ್ತಿ ಸುರೇಶ್ ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇನ್ನೂ ಕೆಲವು ದಿನಗಳಿಂದ ಕೀರ್ತಿ ಸುರೇಶ್ ರವರ ಮದುವೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ.

ನಟಿ ಕೀರ್ತಿ ಸುರೇಶ್ ಇದೀಗ ಮಮನ್ನನ್ ಎಂಬ ತಮಿಳು ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದಲ್ಲಿ ಉದಯನಿಧಿ ಸ್ಟಾಲಿನ್ ಜೊತೆಗೆ ಕೀರ್ತಿ ಸುರೇಶ್ ನಟಿಸಿದ್ದಾರೆ. ಈ ಸಿನೆಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಇತ್ತಿಚಿಗಷ್ಟೆ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಖ್ಯಾತ ಸ್ಟಾರ್‍ ನಟ ಕಮಲ್ ಹಾಸನ್ ಹಾಜರಾಗಿದ್ದರು. ಇನ್ನೂ ಈ ಕಾರ್ಯಕ್ರಮದಲ್ಲಿ ಕೀರ್ತಿ ಸುರೇಶ್ ಗೆ ಮದುವೆಯ ಬಗ್ಗೆ ಪ್ರಶ್ನೆ ಎದುರಾಗಿದೆ. ಕೀರ್ತಿ ಸುರೇಶ್ ಮದುವೆಯಾಗಲಿದ್ದಾರೆ. ವರ ಸಹ ಸಿದ್ದವಾಗಿದ್ದಾನೆ ಎಂಬ ಸುದ್ದಿಗಳು ಕೇಳಿಬರುತ್ತಿವೆಯಲ್ಲ. ಅದಕ್ಕೆ ನಿಮ್ಮ ರಿಯಾಕ್ಷನ್ ಏನು ಎಂದು ಮಿಡಿಯಾದವರು ಕೇಳಿದ್ದಾರೆ. ಅದಕ್ಕೆ ಕೀರ್ತಿ ಸುರೇಶ್ ಕೊಂಚ ಅಸಮಧಾನ ಹೊರಹಾಕಿದ್ದಾರೆ.

ಈ ಹಿಂದೆ ನಾನು ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಸದ್ಯ ನನಗೆ ಮದುವೆಯ ಆಲೋಚನೆಯಿಲ್ಲ ಎಂದು ಹೇಳಿದ್ದೇನೆ. ಆದರೂ ಸಹ ಪದೇ ಪದೇ ಮದುವೆಯ ಬಗ್ಗೆ ಕೇಳುತ್ತಿದ್ದೀರಾ. ನನ್ನ ಮದುವೆಯ ಬಗ್ಗೆ ನಿಮಗೇಕೆ ಅಷ್ಟೊಂದು ಆಸಕ್ತಿ ಎಂದು ಪ್ರಶ್ನೆ ಸಹ ಮಾಡಿದ್ದಾರೆ. ಮದುವೆ ಫಿಕ್ಸ್ ಆದರೇ ನಾನೆ ತಪ್ಪದೇ ಹೇಳುತ್ತೇನೆ ಎಂದಿದ್ದಾರೆ. ಇನ್ನೂ ಈಗಲಾದರೂ ಕೀರ್ತಿ ಸುರೇಶ್ ಮದುವೆಯ ಬಗ್ಗೆ ಪ್ರಶ್ನೆಗಳು ನಿಲ್ಲುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಕೀರ್ತಿ ಸುರೇಶ್ ಮೆಗಾಸ್ಟಾರ್‍ ಚಿರಂಜೀವಿ ಅಭಿನಯದ ಭೋಳಾಶಂಕರ್‍ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ.