HomeFilm Newsಸಂಚಲನಾತ್ಮಕ ಹೇಳಿಕೆ ಕೊಟ್ಟ ಚಿರು, ನಾನು ಸಹ ಕ್ಯಾನ್ಸರ್ ವ್ಯಾಧಿಗೆ ಗುರಿಯಾಗಿದ್ದೆ ಎಂದ ಮೆಗಾಸ್ಟಾರ್……!

ಸಂಚಲನಾತ್ಮಕ ಹೇಳಿಕೆ ಕೊಟ್ಟ ಚಿರು, ನಾನು ಸಹ ಕ್ಯಾನ್ಸರ್ ವ್ಯಾಧಿಗೆ ಗುರಿಯಾಗಿದ್ದೆ ಎಂದ ಮೆಗಾಸ್ಟಾರ್……!

ತೆಲುಗು ಸಿನಿರಂಗದಲ್ಲಿ ಸ್ವಂತ ಪ್ರತಿಭೆಯಿಂದ ಅಗ್ರ ಸ್ಥಾನ ಪಡೆದುಕೊಂಡ ನಟರಲ್ಲಿ ಮೆಗಾಸ್ಟಾರ್‍ ಚಿರಂಜೀವಿ ಒಬ್ಬರಾಗಿದ್ದಾರೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ತೆಲುಗು ರಾಷ್ಟ್ರಗಳಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇದೀಗ ತಾವು ಕ್ಯಾನ್ಸರ್‍ ವ್ಯಾಧಿಗೆ ತುತ್ತಾಗಿದ್ದಾಗಿ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದು, ಅವರ ಹೇಳಿಕೆಗಳು ವೈರಲ್ ಆಗುತ್ತಿವೆ.

ಟಾಲಿವುಡ್ ಮೆಗಾಸ್ಟಾರ್‍ ಚಿರಂಜೀವಿ ಈ ಹಿಂದೆ ಕ್ಯಾನ್ಸರ್‍ ವ್ಯಾಧಿಗೆ ಗುರಿಯಾಗಿದ್ದರಂತೆ. ಸುಮಾರು ವರ್ಷಗಳ ಹಿಂದೆ ಕ್ಯಾನ್ಸರ್‍ ವ್ಯಾಧಿಗೆ ಗುರಿಯಾಗಿದ್ದು, ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರಂತೆ. ಈ ಆಸ್ಪತ್ರೆಯಲ್ಲಿ ಅವರು ಕೊಲನೋಸ್ಕೊಪಿ ಸಹ ಮಾಡಿಸಿಕೊಂಡಿದ್ದರಂತೆ. ಆ ರಿಪೋರ್ಟ್ ನಲ್ಲಿ ಅವರ ದೇಹದಲ್ಲಿ ಪಾಲಿಪ್ಸ್ ಇರುವ ಬಗ್ಗೆ ವೈದ್ಯರು ಪತ್ತೆ ಹಚ್ಚಿದ್ದರಂತೆ. ಅದನ್ನು ಅದೇ ರೀತಿಯಲ್ಲಿ ಬಿಟ್ಟರೇ ಮೆಲಾಗ್ಲೀನ್ ಆಗಿ ಬದಲಾಗುವುದಾಗಿ ವೈದ್ಯರು ಹೇಳಿದ್ದರಂತೆ. ಮುಂಚೆಯೇ ಇದನ್ನು ಗುರ್ತಿಸಿದ ಕಾರಣದಿಂದ ದೊಡ್ಡ ಪ್ರಮಾದದಿಂದ ಹೊರಬಂದರಂತೆ. ಇನ್ನೂ ಈ ಅವಗಾಹನೆ ಇಲ್ಲದೇ ಇದ್ದಿದ್ದರೇ ಆತ ಮತಷ್ಟು ಸಮಸ್ಯೆಗೆ ಸಿಲುಕುತ್ತಿದ್ದರಂತೆ.

ಇನ್ನೂ ತನಗೆ ಕ್ಯಾನ್ಸರ್‍ ಇದೆ ಎಂದು ಹೇಳಲು ಭಯಪಡುತ್ತಿಲ್ಲ ಎಂದು ಚಿರು ಹೇಳಿದ್ದಾರೆ. ಇನ್ನೂ ಚಿರಂಜೀವಿ ನೀಡಿದ ಹೇಳಿಕೆಯನ್ನು ಕೇಳಿದ ಅನೇಕರು ಶಾಕ್ ಆಗಿದ್ದಾರೆ. ಚಿರಂಜೀವಿಯವರು ಖಾಸಗಿ ಆಸ್ಪತ್ರೆಯಲ್ಲಿನ ಕ್ಯಾನ್ಸರ್‍ ಸೆಂಟರ್‍ ಪ್ರಾರಂಭೋತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ಕ್ಯಾನ್ಸರ್‍ ವ್ಯಾಧಿಗೆ ಗುರಿಯಾಗಿದ್ದಾಗಿ ಹೇಳಿದ್ದಾರೆ. ಇನ್ನೂ ಕ್ಯಾನ್ಸರ್‍ ರೋಗದ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಚಿಕಿತ್ಸೆ ಪಡೆದುಕೊಂಡರೇ ಅದೇನು ಅಷ್ಟೊಂದು ಮಾರಣಾಂತಿಕ ಕಾಯಿಲೆಯಲ್ಲ. ಆ ದೇವರು ನೀಡಿದರೇ ಏನೂ ಮಾಡಲಾಗುವುದಿಲ್ಲ. ಆದರೆ ಧೂಮಪಾನ, ಗುಟ್ಕಾಗಳಂತಹ ವಸ್ತುಗಳನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್‍ ಕಾಯಿಲೆ ಹೆಚ್ಚಾಗಿ ಬರುತ್ತದೆ. ಅವುಗಳಿಂದ ದೂರವಿರಬೇಕೆಂದು ಸಲಹೆ ಸಹ ನೀಡಿದ್ದಾರೆ.

ಇನ್ನೂ ಚಿರು ಹೇಳಿಕೆಗಳು ಇದೀಗ ತಮ್ಮ ಅಭಿಮಾನಿಗಳನ್ನು ಭಯಪಡುವಂತೆ ಮಾಡಿದ್ದು, ಇದಕ್ಕೆ ಚಿರು ಮತ್ತೊಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಕೆಲವೊಂದು ಮಿಡಿಯಾಗಳು ನಾನು ಹೇಳಿದ ವಿಚಾರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ನಾನು ಕ್ಯಾನ್ಸರ್‍ ಗೆ ಗುರಿಯಾಗಿದ್ದಾಗಿ ಹೇಳಿದ್ದಾರೆ. ಜೊತೆಗೆ ಚಿಕಿತ್ಸೆಯಿಂದ ಬದುಕಿದೆ ಎಂದೂ ಸಹ ಪ್ರಕಟಿಸಿದ್ದಾರೆ. ಇದರಿಂದಾಗಿ ಅನವಶ್ಯಕವಾದ ಗೊಂದಲ ಸೃಷ್ಟಿಯಾಗಿದೆ. ವರದಿಗಾರರು ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸುದ್ದಿ ಬರೆಯಿರಿ. ನೀವು ತಪ್ಪಾಗಿ ಬರೆದರೇ ಅನೇಕರು ತಪ್ಪಾಗಿಯೇ ಅರ್ಥ ಮಾಡಿಕೊಳ್ಳುತ್ತಾರೆ. ಅನೇಕರು ಭಯಪಡುವಂತೆ ಮಾಡುವವರಾಗುತ್ತೀರಿ ಎಂದು ಚಿರು ಟ್ವೀಟ್ ಮಾಡಿದ್ದಾರೆ.

You May Like

More