Film News

ಚಿರಂಜೀವಿ ಸಿನೆಮಾದಲ್ಲಿ ನಟಿಸಬೇಕಾದ್ರೆ ನರಕ ಅನುಭವಿಸಬೇಕು ಎಂದ ಕಾಜಲ್ ಅಗರ್ವಾಲ್, ಶಾಕಿಂಗ್ ಕಾಮೆಂಟ್ಸ್ ವೈರಲ್……!

ಸ್ವಂತ ಪ್ರತಿಭೆಯಿಂದ ಸಿನಿರಂಗದಲ್ಲಿ ದೊಡ್ಡ ಮಟ್ಟದ ಸ್ಟಾರ್‍ ಡಂ ಪಡೆದುಕೊಂಡ ಮೆಗಾಸ್ಟಾರ್‍ ಚಿರಂಜೀವಿ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ವಯಸ್ಸಾದರೂ ಸಹ ಅವರು ಯಂಗ್ ನಟರನ್ನು ಸೈಡ್ ಗಿಟ್ಟು ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಅವರ ಡ್ಯಾನ್ಸಿಂಗ್ ಸ್ಟೆಪ್ಸ್ ಗಳು ಯಂಗ್ ನಟರ ಕೈಯಲ್ಲೂ ಸಹ ಹಾಕಲು ಕಷ್ಟ ಎಂದೇ ಹೇಳಬಹುದು. ಇದೀಗ ಸಂದರ್ಶನವೊಂದರಲ್ಲಿ ನಟಿ ಕಾಜಲ್ ಅಗರ್ವಾಲ್ ಮೆಗಾಸ್ಟಾರ್‍ ಚಿರು ರವರ ಸಿನೆಮಾದಲ್ಲಿ ನಟಿಸಬೇಕಾದ್ರೆ ನರಕ ಅನುಭವಿಸಬೇಕೆಂದು ಕಾಮೆಂಟ್ ಮಾಡಿದ್ದು, ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸೌತ್ ಸಿನಿರಂಗದ ಸ್ಟಾರ್‍ ನಟಿ ಕಾಜಲ್ ಅಗರ್ವಾಲ್ ಕೆರಿಯರ್‍ ಆರಂಭದಿಂದಲೂ ಒಳ್ಳೆಯ ಸಕ್ಸಸ್ ಗ್ರಾಫ್ ಮೈಂಟೈನ್ ಮಾಡಿದ್ದರು. ಮದುವೆ ಹಾಗೂ ಮಗು ಕಾರಣದಿಂದ ಸಿನೆಮಾಗಳಿಂದ ದೂರವೇ ಉಳಿದಿದ್ದರು. ಆದರೆ ಇದೀಗ ಆಕೆ ಮತ್ತೆ ಸಿನೆಮಾಗಳತ್ತ ಮುಖ ಮಾಡಿದ್ದಾರೆ.  ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಕಾಜಲ್ ಅಗರ್ವಾಲ್ ಭಾರಿ ಪ್ರಾಜೆಕ್ಟ್ ಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಕೊನೆಯದಾಗಿ ಆಕೆ ನಂದಮೂರಿ ಬಾಲಕೃಷ್ಣ ರವರ ಭಗವಂತ್ ಕೇಸರಿ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಸದ್ಯ ಆಕೆಯ ಕೈಯಲ್ಲಿ ಅನೇಕ ಸಿನೆಮಾಗಳಿವೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಮೆಗಾಸ್ಟಾರ್‍ ಚಿರಂಜೀವಿಯವರ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ನಟಿ ಕಾಜಲ್ ಅಗರ್ವಾಲ್ ಹಾಗೂ ಚಿರಂಜೀವಿ ಕಾಂಬಿನೇಷನ್ ನಲ್ಲಿ ಖೈದಿ ನಂಬರ್‍ 150 ಸಿನೆಮಾ ತೆರೆಗೆ ಬಂದಿದ್ದು, ಒಳ್ಳೆಯ ಸಕ್ಸಸ್ ಪಡೆದುಕೊಂಡಿತ್ತು. ಈ ಸಿನೆಮಾದಲ್ಲಿ ಕಾಜಲ್ ಹಾಗೂ ಮೆಗಾಸ್ಟಾರ್‍ ರವರ ನೃತ್ಯ ಸಹ ಎಲ್ಲರನ್ನೂ ರಂಜಿಸಿತ್ತು. ಮೆಗಾಸ್ಟಾರ್‍ ರವರ ಜೊತೆಗೆ ಅನೇಕ ಈ ಹಿಂದಿನ ಸೀನಿಯರ್‍ ನಟಿಯರು ನೃತ್ಯ ಮಾಡಲು ತುಂಬಾನೆ ಸಮಸ್ಯೆ ಅನುಭವಿಸುತ್ತಿದ್ದರು. ಅಂದರೇ ಚಿರಂಜೀವಿಯವರು ಒಂದೇ ಟೇಕ್ ನಲ್ಲಿ ಸ್ಟೆಪ್ಸ್ ಹಾಕುತ್ತಿದ್ದರು. ಅಂತಹುದರಲ್ಲಿ ಈಗಿನ ನಟಿಯರು ಅವರೊಂದಿಗೆ ನೃತ್ಯ ಮಾಡಲು ಕಷ್ಟ ಎದುರಿಸುತ್ತಾರೆ ಎಂದೇ ಹೇಳಬಹುದಾಗಿದೆ. ಇದೇ ವಿಚಾರವನ್ನು ಕಾಜಲ್ ಸಂದರ್ಶನದಲ್ಲಿ ಹೊರಹಾಕಿದ್ದಾರೆ.

ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಕಾಜಲ್, ನಾನು ಸುಮಾರು ಹಿರೋಗಳ ಜೊತೆಗೆ ನೃತ್ಯ ಮಾಡಿದ್ದೇನೆ. ಆದರೆ ಚಿರಂಜೀವಿ ಸರ್‍ ಜೊತೆಗೆ ಡ್ಯಾನ್ಸ್ ಮಾಡಲು ನನಗೆ ಭಯ ಆಗುತ್ತಿತ್ತು. ಅವರು ಎಂತಹುದೇ ಶಾಟ್ ಆದರೂ ಒಂದೆ ಸಿಂಗಲ್ ಟೇಕ್ ನಲ್ಲಿ ಪೂರ್ಣಗೊಳಿಸುತ್ತಿದ್ದರು. ನಾನು ಸುಮಾರು ಆರೇಳು ಟೇಕ್ ಗಳನ್ನು ತೆಗೆದುಕೊಳ್ಳುತ್ತಿದ್ದೆ. ಆ ಸಮಯದಲ್ಲಿ ಅವರು ಏನಾದರೂ ಅನ್ನುತ್ತಾರೇನೋ ಎಂಬ ಭಯ ನನಗೆ ಕಾಡುತ್ತಿತ್ತು. ಆ ಮೂಲಕ ನಾನು ನರಕ ಅನುಭವಿಸುತ್ತಿದ್ದೆ ಎಂದು ಕಾಜಲ್ ಹೇಳಿದ್ದಾರೆ. ಸದ್ಯ ಕಾಜಲ್ ಕಾಮೆಂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top