ಶಾಕಿಂಗ್ ಕಾಮೆಂಟ್ಸ್ ಮಾಡಿದ ಸ್ಟಾರ್ ನಟಿ ದೀಪಿಕಾ, ಬಾಲಿವುಡ್ ಸಿನಿರಂಗದ ಬಗ್ಗೆ ದೀಪಿಕಾ ಹೇಳಿದ್ದು ಏನು ಗೊತ್ತಾ?

Follow Us :

ಬಾಲಿವುಡ್ ಸ್ಟಾರ್‍ ನಟಿ ದೀಪಿಕಾ ಪಡುಕೋಣೆ ಮದುವೆಯಾದ ಬಳಿಕವೂ ಸಹ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಸಿನೆಮಾಗಳಲ್ಲಿ ಬೋಲ್ಡ್ ಆಗಿಯೇ ನಟಿಸುತ್ತಿದ್ದಾರೆ. ಈ ಹಿಂದೆ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ಬಾಲಿವುಡ್ ನಲ್ಲಿ ನೆಪೊಟಿಸಂ ಸದ್ದು ಜೋರಾಗಿಯೇ ನಡೆದಿತ್ತು. ಬಳಿಕ ಕಾಸ್ಟಿಂಗ್ ಕೌಚ್ ಸದ್ದು ಸಹ ಜೋರಾಗಿತ್ತು. ಈ ಹಾದಿಯಲ್ಲೇ ನಟಿ ದೀಪಿಕಾ ಸಹ ಬಾಲಿವುಡ್ ನೆಪೊಟಿಸಂ ಬಗ್ಗೆ ಕಾಮೆಂಟ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಬಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ.

ಬಾಲಿವುಡ್ ನಲ್ಲಿ ಸ್ಟಾರ್‍ ಡಂ ಗಿಟ್ಟಿಸಿಕೊಂಡ ನಟಿ ದೀಪಿಕಾ ಪಡುಕೋಣೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಕನ್ನಡ ಸಿನಿರಂಗದ ನಟಿ ಬಾಲಿವುಡ್ ನಲ್ಲಿ ಸ್ಟಾರ್‍ ಡಂ ಗಿಟ್ಟಿಸಿಕೊಂಡ ಖ್ಯಾತಿ ದೀಪಿಕಾಗೆ ಸಲ್ಲುತ್ತದೆ. ಓಂ ಶಾಂತಿ ಓಂ ಸಿನೆಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಈಕೆ ಮೊದಲನೇ ಸಿನೆಮಾದ ಮೂಲಕವೇ ಸ್ಟಾರ್‍ ಆಗಿಬಿಟ್ಟರು. ಇದೀಗ ಸಂದರ್ಶನವೊಂದರಲ್ಲಿ ದೀಪಿಕಾ ಬಾಲಿವುಡ್ ನೆಪೊಟಿಸಂ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಬಾಲಿವುಡ್ ಗೆ ಒಂಟಿಯಾಗಿ ಬಂದು ಸ್ಟಾರ್‍ ಆಗಿರು ದೀಪಿಕಾ ಕೊನೆಯದಾಗಿ ಪಠಾನ್, ಜವಾನ್ ಸಿನೆಮಾಗಳ ಮೂಲಕ ಭಾರಿ ಹಿಟ್ ಪಡೆದುಕೊಂಡರು. ಶೀಘ್ರದಲ್ಲೇ ಪ್ರಭಾಸ್ ಜೊತೆಗೆ ಕಲ್ಕಿ ಸಿನೆಮಾದ ಮೂಲಕ ಸದ್ದು ಮಾಡಲಿದ್ದಾರೆ.

ಇನ್ನೂ ಸದಾ ಸುದ್ದಿಯಲ್ಲೇ ಇರುವಂತಹ ದೀಪಿಕಾ ಇದೀಗ ಬಾಲಿವುಡ್ ನೆಪೊಟಿಸಂ ಬಗ್ಗೆ ಮಾತನಾಡಿದ್ದಾರೆ.  ಬಾಲಿವುಡ್ ನಲ್ಲಿ ತಮ್ಮ ವಾರಸುದಾರರಿಗೆ ಸ್ಟಾರ್‍ ಎಲ್ಲಾ ಅವಕಾಶಗಳನ್ನು ಕೊಡುತ್ತಾರೆ. ಹೊಸಬರನ್ನು ತುಳಿದು ಹಾಕುತ್ತಿದ್ದಾರೆ. ನೆಪೊಟಿಸಂ ಹೆಚ್ಚಾಗಿದೆ ಎಂಬೆಲ್ಲಾ ಕಾಮೆಂಟ್ ಗಳನ್ನು ಕೆಲವರು ಆಗಾಗ ಮಾಡುತ್ತಲೇ ಇರುತ್ತಾರೆ. ಇದೀಗ ದೀಪಿಕಾ ಸಹ ಈ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ಅವಕಾಶಗಳು ಬರುವುದು ತುಂಬಾನೆ ಕಷ್ಟ. ನನ್ನ ಕುಟುಂಬದವರು ಸಿನಿರಂಗಕ್ಕೆ ಸೇರಿದವರಲ್ಲ. ನನಗೆ ಸಿನಿರಂಗದಲ್ಲಿ ಯಾರೂ ಗಾಡ್ ಫಾದರ್‍ ಇಲ್ಲ. ಬಾಲಿವುಡ್ ಎಂದರೇ ವಾರಸುದಾರರು ಹೆಚ್ಚು. ಸಿನಿರಂಗಕ್ಕೆ ಸೇರಿದ ಮಕ್ಕಳಿಗೆ ಹೆಚ್ಚು ಅವಕಾಶಗಳು ಬರುತ್ತಿತ್ತು. ಅದನ್ನು ಇದೀಗ ನೆಪೊಟಿಸಂ ಎನ್ನುತ್ತಿದ್ದಾರೆ. ಎಲ್ಲರೂ ಅದನ್ನು ಅಂಗೀಕರಿಸಬೇಕು ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಇದೀಗ ದೀಪಿಕಾ ನೀಡಿದ ಕಾಮೆಂಟ್ ಗಳು ಮಾತ್ರ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸುತ್ತಿವೆ.