ಯುವರಾಣಿಯಂತೆ ಕಾಣಿಸಿಕೊಂಡ ಸ್ಟಾರ್ ನಟಿ ಆಲಿಯಾ, ಮತ್ತೇರಿಸುವ ಲುಕ್ಸ್ ಮೂಲಕ ಸದ್ದು ಮಾಡಿದ ಆಲಿಯಾ ಭಟ್……!

Follow Us :

ಬಾಲಿವುಡ್ ಸಿನಿರಂಗದ ಕ್ಯೂಟ್ ಬ್ಯೂಟಿ ಎಂತಲೇ ಕ್ರೇಜ್ ಪಡೆದುಕೊಂಡಿರುವ ಸ್ಟಾರ್‍ ನಟಿ ಆಲಿಯಾ ಮದುವೆಯಾಗಿ ತಾಯಿಯಾದರೂ ಸಹ ಯಂಗ್ ನಟಿಯರನ್ನೂ ಸಹ ಮೀರಿಸುವಂತಹ ದೇಹದ ಮೈಮಾಟ ಹೊಂದಿದ್ದಾರೆ. ಆಕೆಯ ಪೊಟೋಗಳನ್ನು ನೋಡಿದರೇ ಆಕೆಯನ್ನು ತಾಯಿಯ ಮಗು ಎನ್ನಲು ಸಾಧ್ಯವೇ ಇಲ್ಲ ಎಂದು ಹೇಳಬಹುದಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಮತಷ್ಟು ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಯುವರಾಣಿಯಂತೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ವೈರಲ್ ಆಗಿದೆ.

ಬಾಲಿವುಡ್ ನಲ್ಲಿ ಕ್ಯೂಟ್ ಅಂಡ್ ಹಾಟ್ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡ ಆಲಿಯಾ ಕಳೆದ ವರ್ಷ ಏಪ್ರಿಲ್ 14 ರಂದು ರಣಬೀರ್‍ ಕಪೂರ್‍ ಜೊತೆಗೆ ಅದ್ದೂರಿಯಾಗಿ ಮದುವೆಯಾದರು. ಮುಂಬೈನಲ್ಲಿ ಇವರ ವಿವಾಹ ಮಹೋತ್ಸವ ಅದ್ದೂರಿಯಾಗಿ ನಡೆದಿತ್ತು. ನಟಿ ಆಲಿಯಾ ಭಟ್ ಕಳೆದ ನವೆಂಬರ್‍ 6 ರಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಇದೀಗ ಆಕೆ ಮತ್ತೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಇದೀಗ ಆಕೆ ಫಿಟ್ ನೆಸ್ ಕಡೆ ಮುಖ ಮಾಡಿದ್ದಾರೆ. ಮಾನಸಿಕವಾಗಿ ಹಾಗೂ ಶಾರೀರಿಕವಾಗಿಯೂ ಸದೃಢವಾಗಲು ಜಿಮ್, ಯೋಗ ಗಳತ್ತ ಮುಖ ಮಾಡಿದ್ದಾರೆ. ಇನ್ನೂ ಸಾಮಾನ್ಯವಾಗಿ ತಾಯಿಯಾದ ಬಳಿಕ ಮಹಿಳೆಯರ ದೇಹದಲ್ಲಿ ಅನೇಕ ವ್ಯತ್ಯಾಸಗಳಾಗುತ್ತವೆ. ಆದರೆ ಆಲಿಯಾ ಮಾತ್ರ ಫಿಟ್ ನೆಸ್ ಹಾಗೂ ಹೊಳೆಯುವ ಸ್ಕಿನ್ ಹೊಂದಿದ್ದಾರೆ. ಮಗುವಾದರೂ ಸಹ ಆಕೆ ಮೊದಲಿನಂತೆ ಇರುವುದು ಅನೇಕರಿಗೆ ಆಶ್ಚರ್ಯ ಬರುವಂತೆ ಮಾಡಿದೆ.

ಇದೀಗ ಆಲಿಯಾ ಸಿನೆಮಾಗಳಲ್ಲಿ ಮತ್ತೆ ಆಕ್ಟೀವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ ಗಳ ಮೂಲಕ ಬ್ಯುಸಿಯಾಗುತ್ತಿದ್ದಾರೆ. ಸದ್ಯ ಆಕೆ ರಾಖಿ ಔರ್‍ ರಾಣಿ ಕಿ ಪ್ರೇಮ್ ಕಹಾನಿ ಎಂಬ ಸಿನೆಮಾದಲ್ಲಿ ರಣಬೀರ್‍ ಕಪೂರ್‍ ಜೊತೆಗೆ ನಟಿಸಿದ್ದಾರೆ. ಈ ಸಿನೆಮಾ ಇನ್ನೇನೂ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಈ ಸಿನೆಮಾದ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿವೆ. ಪ್ರಮೋಷನ್ ನಿಮಿತ್ತ ಆಲಿಯಾ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಲಿಯಾ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಯೂಟಿಪುಲ್ ಲುಕ್ಸ್ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಲೆಹಂಗಾ ದುಪ್ಪಟ್ಟ ಧರಿಸಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ.

ಇನ್ನೂ ಆಲಿಯಾ ಹಂಚಿಕೊಂಡ ಲೇಟೆಸ್ಟ್ ಪೊಟೋ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಟ್ರೆಡಿಷನಲ್ ಲುಕ್ಸ್ ನಲ್ಲೂ ಆಲಿಯಾ ತುಂಬಾ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಶೀಘ್ರದಲ್ಲೇ ಆಲಿಯಾ ಅಭಿನಯದ ಹಾಲಿವುಡ್ ಸಿನೆಮಾ ಹಾರ್ಟ್ ಆಫ್ ಸ್ಟೋನ್ಸ್ ಸಿನೆಮಾ ಸಹ ಬಿಡುಗಡೆಯಾಗಲಿದೆ.