ಸಿನಿರಂಗದಲ್ಲಿ ಕೆಲವರು ಬ್ಯಾಕ್ ಸಪೋರ್ಟ್, ಸ್ಟಾರ್ ಕಿಡ್ ಎಂಬ ವಾರಸತ್ವ ಇದ್ದರೂ ಸಹ ಅದನ್ನು ಬಳಸಿಕೊಳ್ಳದೇ ಸ್ವಂತ ಪ್ರತಿಭೆಯಿಂದ ಸ್ಟಾರ್ ಗಳಾಗಿದ್ದಾರೆ. ಈ ಸಾಲಿಗೆ ಕಾಲಿವುಡ್ ಸ್ಟಾರ್ ನಟ ಧನುಷ್ ಒಬ್ಬರಾಗಿದ್ದಾರೆ. ತಮಿಳಿನ ಜೊತೆಗೆ ತೆಲುಗಿನಲ್ಲಿ ಸಹ ಧನುಷ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಹೊಸ ಹೊಸ ಕಥೆಗಳುಳ್ಳ ಸಿನೆಮಾಗಳ ಮೂಲಕ ಸಿನಿರಸಿಕರನ್ನು ರಂಜಿಸುತ್ತಿರುತ್ತಾರೆ. ಆ ಮೂಲಕ ಭಾರತ ಸಿನಿರಂಗದಲ್ಲಿ ಮೋಸ್ಟ್ ಟ್ಯಾಲೆಂಟೆಡ್ ನಟನಾಗಿ ಧನುಷ್ ಖ್ಯಾತಿ ಪಡೆದುಕೊಂಡಿದ್ದಾರೆ. ಇದೀಗ ಅವರು ಒಂಟಿತನ ತುಂಬಾನೆ ಕಷ್ಟ ಎಂದು ಹೇಳಿದ್ದು, ಆತನ ಹೇಳಿಕೆಗಳು ವೈರಲ್ ಆಗುತ್ತಿವೆ.
ದಿ ಮೋಸ್ಟ್ ಟ್ಯಾಲೆಂಟೆಡ್ ನಟ ಧನುಷ್ ಕೇವಲ ನಟನಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿ, ನಿರ್ದೇಶಕರಾಗಿ ಹಾಗೂ ಸಿಂಗರ್ ಆಗಿಯೂ ಸಹ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ. ನಟ ಧನುಷ್ ಇತ್ತೀಚಿಗಷ್ಟೆ ಸಾರ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಒಳ್ಳೆಯ ಹಿಟ್ ಪಡೆದುಕೊಂಡಿತ್ತು. ಸದ್ಯ ಆತ ಕೆಲವೊಂದು ಪ್ಯಾನ್ ಇಂಡಿಯಾ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಒಳ್ಳೆಯ ಕಥೆಯುಳ್ಳ ಸಿನೆಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇನ್ನೂ ಹಣ, ಹೆಸರು ಎಲ್ಲಾ ಇದ್ದರು ಅವರಲ್ಲಿ ಒಂದು ಕೊರತೆ ತುಂಬಾನೆ ಕಾಡುತ್ತಿದೆಯಂತೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಧನುಷ್ ತಮ್ಮ ಮನಸ್ಸಿನಲ್ಲಿರುವ ಮಾತುಗಳನ್ನು ಹೊರಹಾಕಿದ್ದಾರೆ.
ಸಂದರ್ಶನದಲ್ಲಿ ಆಂಕರ್ ನೀವು ಸಿನೆಮಾಗಳಲ್ಲಿ ನಟಿಸುವ ಕಾರಣದಿಂದ ಏನಾದರೂ ಮಿಸ್ ಆಗುತ್ತಿದ್ದಿರಾ ಎಂದು ಧನುಷ್ ಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಧನುಷ್ ಎಮೋಷನಲ್ ಆಗಿ ರಿಯಾಕ್ಟ್ ಆಗಿದ್ದಾರೆ. ನಾನು ಎಷ್ಟು ಸಂಪಾದನೆ ಮಾಡಿದರೂ, ಹಿರೋ ಆಗಿ ಡೈರೆಕ್ಟರ್ ಆಗಿ ಇರುವ ಕಾರಣ ನನ್ನ ಕುಟುಂಬದೊಂದಿಗೆ ಸಮಯ ಕಳೆಯೋಕೆ ಆಗ್ತಾ ಇಲ್ಲ. ನನ್ನ ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಾರೆ. ನಾನು ಸದಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುತ್ತೇನೆ. ಆದ್ದರಿಂದ ನನ್ನ ಮಕ್ಕಳೊಂದಿಗೆ ಸಮಯ ಕಳೆಯೋಕೆ ಆಗ್ತಾ ಇಲ್ಲ. ವಯಸ್ಸಾದ ಬಳಿಕ ಕಷ್ಟಪಡೋಕೂ ಸಹ ಆಗೋದಿಲ್ಲ. ನಾನು ಎಷ್ಟು ಸಂಪಾದನೆ ಮಾಡಿದರು ಅದು ನನ್ನ ಮಕ್ಕಳಿಗಾಗಿ ಆದ್ದರಿಂದ ನನಗೆ ನಾನೆ ಸಮಾಧಾನ ಹೇಳಿಕೊಳ್ಳುತ್ತೇನೆ ಎಂದು ಎಮೋಷನಲ್ ಆಗಿದ್ದಾರೆ.
ಇನ್ನೂ ಧನುಷ್ ಅನೇಕ ಸೂಪರ್ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. 50 ಸಿನೆಮಾಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಇನ್ನೂ ಆತ ಒಂದು ಫಿಲಂ ಫೇರ್ ಅವಾರ್ಡ್, ಏಳು ಸೌತ್ ಫಿಲಿಂ ಫೇರ್ ಅವಾರ್ಡ್, ಹದಿಮೂರು ಸೈಮಾ ಅವಾರ್ಡ್ ಸೇರಿದಂತೆ ಅನೇಕ ಅವಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಧನುಷ್ ಕ್ಯಾಪ್ಟನ್ ಮಿಲ್ಲರ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
