ಮದುವೆಯಾಗೋಲ್ಲ, ಆದರೇ ರಿಲೇಷನ್ ಶಿಪ್ ಮುಂದುವರೆಸುತ್ತೇವೆ ಎಂದ ಮಿಲ್ಕಿ ಬ್ಯೂಟಿ, ವೈರಲ್ ಆದ ಕಾಮೆಂಟ್ಸ್…..!

ಗ್ಲಾಮರ್‍ ಮೂಲಕ ಸೌತ್ ಸಿನಿರಂಗವನ್ನು ಸುಮಾರು ವರ್ಷಗಳ ಕಾಲ ಆಳಿದಂತಹ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಇತ್ತಿಚಿಗೆ ಭಾರಿ ಸುದ್ದಿಯಾಗುತ್ತಿದ್ದಾರೆ. ಆಕೆ ಇತ್ತಿಚಿಗೆ ಎರಡು ವೆಬ್ ಸಿರೀಸ್ ಗಳಲ್ಲಿ ನಟಿಸಿದ್ದು, ಈ ಸಿರೀಸ್ ಗಳಲ್ಲಿ…

ಗ್ಲಾಮರ್‍ ಮೂಲಕ ಸೌತ್ ಸಿನಿರಂಗವನ್ನು ಸುಮಾರು ವರ್ಷಗಳ ಕಾಲ ಆಳಿದಂತಹ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಇತ್ತಿಚಿಗೆ ಭಾರಿ ಸುದ್ದಿಯಾಗುತ್ತಿದ್ದಾರೆ. ಆಕೆ ಇತ್ತಿಚಿಗೆ ಎರಡು ವೆಬ್ ಸಿರೀಸ್ ಗಳಲ್ಲಿ ನಟಿಸಿದ್ದು, ಈ ಸಿರೀಸ್ ಗಳಲ್ಲಿ ಆಕೆ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷದ ಆರಂಭದಿಂದ ಬಾಲಿವುಡ್ ನಟ ವಿಜಯ್ ವರ್ಮಾ ಹಾಗೂ ತಮನ್ನಾ ರವರ ಲವ್ ವಿಚಾರ ಕೇಳಿಬರುತ್ತಿದ್ದು, ಈಗಾಗಲೇ ಅವರಿಬ್ಬರು ತಮ್ಮ ರಿಲೇಷನ್ ಶಿಪ್ ಬಗ್ಗೆ ಒಪ್ಪಿಕೊಂಡಿದ್ದಾರೆ. ಇದೀಗ ಆಕೆ ಅವರ ಮದುವೆ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಮದುವೆಯಾಗೋಲ್ಲ ಆದರೆ ಡೇಟಿಂಗ್ ನಲ್ಲಿರುತ್ತೇವೆ ಎಂದು ಹೇಳುವ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ.

100% ಲವ್ ಸ್ಟೋರಿ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ತಮನ್ನಾ ಎರಡು ದಶಕಗಳಿಂದ ಸಿನಿರಂಗದಲ್ಲಿ ಬ್ಯುಸಿಯಾಗಿಯೇ ಇದ್ದಾರೆ. ಅನೇಕ ಹಿಟ್, ಬ್ಲಾಕ್ ಬ್ಲಸ್ಟರ್‍ ಸಿನೆಮಾಗಳ ಮೂಲಕ ತನ್ನದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಜೀ ಖರ್ದಾ ಹಾಗೂ ಲಸ್ಟ್ ಸ್ಟೋರೀಸ್-2 ಎಂಬ ವೆಬ್ ಸಿರೀಸ್ ಗಳಲ್ಲಿ ನಟಿಸಿದ್ದರು. ಈ ವೆಬ್ ಸಿರೀಸ್ ಗಳಲ್ಲಿ ಮೊದಲ ಬಾರಿಗೆ ಆಕೆ ಬೆಡ್ ರೂಂ ಸನ್ನಿವೇಶಗಳಲ್ಲಿ ನಟಿಸಿದ್ದರು. ಈ ಬಗ್ಗೆ ಸಹ ತಮನ್ನಾ ಭಾರಿ ಟ್ರೋಲ್, ವಿಮರ್ಶೆಗಳಿಗೆ ಗುರಿಯಾಗಿದ್ದರು. ಆ ವೇಳೆ ಆಕೆ ಪಾತ್ರ ಡಿಮ್ಯಾಂಡ್ ಮಾಡಿದಾಗ ನಟಿಸುವುದು ತಪ್ಪಲ್ಲ ಎಂಬ ಕ್ಲಾರಿಟಿ ಸಹ ಕೊಟ್ಟಿದ್ದರು. ಜೊತೆಗೆ ಆಕೆ ಬಾಲಿವುಡ್‌ ನಟಿ ವಿಜಯ್ ವರ್ಮಾ ಜೊತೆಗೆ ಡೇಟಿಂಗ್ ನಲ್ಲಿದ್ದು ಈ ಬಗ್ಗೆ ತಮನ್ನಾ ಹಾಗೂ ವಿಜಯ್ ವರ್ಮಾ ಸಹ ತಮ್ಮ ಸಂಬಂಧ ನಿಜ ಎಂದು ಒಪ್ಪಿಕೊಂಡಿದ್ದಾರೆ.

ಇತ್ತೀಚಿಗೆ ತಮನ್ನಾ ಸಿನೆಮಾಗಳ ಜೊತೆಗೆ ತಮ್ಮ ವೈಯುಕ್ತಿಕ ವಿಚಾರಗಳಿಂದಲೂ ಸುದ್ದಿಯಾಗುತ್ತಿದ್ದಾರೆ. ಲಸ್ಟ್ ಸ್ಟೋರಿಸ್-2 ವೆಬ್ ಸಿರೀಸ್ ಮೂಲಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಡೇಟಿಂಗ್ ನಲ್ಲಿರುವ ಈ ಜೋಡಿ ಕೆಲವು ದಿನಗಳ ಹಿಂದೆಯಷ್ಟೆ ಮಾಲ್ಡೀವ್ಸ್ ವೇಕೇಷನ್ ಗೆ ಹೋಗಿ ಬಂದರು. ಮೊದಲಿಗೆ ತಮ್ಮ ನಡುವೆ ಏನು ಇಲ್ಲಾ, ಎಲ್ಲಾ ಕೇವಲ ರೂಮರ್‍ ಎಂದು ಹೇಳಿದ ತಮನ್ನಾ ಬಳಿಕ ಅದು ಸತ್ಯ ಎಂದು ಒಪ್ಪಿಕೊಂಡರು. ಇದೀಗ ಮದುವೆ ಯಾವಾಗ ಎಂದು ಕೇಳಿದರೇ ಮದುವೆಯಾಗುವ ಉದ್ದೇಶ ಇಲ್ಲ ಎಂದು ಶಾಕ್ ಕೊಟ್ಟಿದ್ದಾರೆ. ಆದರೆ ವಿಜಯ್ ಎಲ್ಲಾ ರೀತಿಯಲ್ಲೂ ನನಗೆ ರಕ್ಷಣೆಯಾಗಿರುತ್ತಾನೆ ಎಂಬ ನಂಬಿಕೆ ಇದೆ. ಮೊದಲಿಗೆ ಮದುವೆ ವ್ಯವಸ್ಥೆ ಬಗ್ಗೆ ನನಗೆ ಪೂರ್ಣ ನಂಬಿಕೆಯಿತ್ತು. ಮದುವೆಯಾಗಬೇಕೆಂಬ ಉದ್ದೇಶ ಸಹ ಇತ್ತು. ಆದರೆ ಇದೀಗ ಮದುವೆಯಾಗುವ ಉದ್ದೇಶವಿಲ್ಲ. ಸದ್ಯ ನಟನೆಯನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ. ಮತಷ್ಟು ವಿಭಿನ್ನವಾದ ಪಾತ್ರಗಳಲ್ಲಿ ನಟಿಸುತ್ತೇನೆ ಎಂದು ತಮನ್ನಾ ಹೇಳಿದ್ದಾರೆ.

ಆಕೆಯ ಹೇಳಿಕೆಗಳು ಇದೀಗ ಸಖತ್ ವೈರಲ್ ಆಗುತ್ತಿದೆ. ಮದುವೆಯಾಗುವ ಉದ್ದೇಶವಿಲ್ಲ, ಆದರೆ ವಿಜಯ್ ಜೊತೆಗೆ ಡೇಟಿಂಗ್ ಮಾಡುತ್ತೇನೆ ಎಂದು ಹೇಳುವಂತಿದ್ದು, ವಿಜಯ್ ಜೊತೆಗೆ ಸಹಜೀವನ ಮಾತ್ರ ಮಾಡುತ್ತಾರಾ ಎಂಬ ಚರ್ಚೆ ಶುರುವಾಗಿದೆ. ಸದ್ಯ ತಮನ್ನಾ ಸೌತ್ ಅಂಡ್ ನಾರ್ತ್‌ನಲ್ಲೂ ಪುಲ್ ಬ್ಯುಸಿಯಾಗಿದ್ದಾರೆ.