ಕಲ್ಯಾಣ್ ದೇವ್ ಮನೆಯಲ್ಲಿ ಶುಭ ಕಾರ್ಯಕ್ರಮ, ಕಾರ್ಯಕ್ರಮದಲ್ಲಿ ಹೈಲೈಟ್ ಆದ ಶ್ರೀಜಾ ಕೊಣಿದೆಲಾ ಪುತ್ರಿ, ವೈರಲ್ ಆದ ಪೊಟೋಸ್…..!

Follow Us :

ಕೆಲವು ದಿನಗಳಿಂದ ಮೆಗಾಸ್ಟಾರ್‍ ಚಿರಂಜೀವಿ ಪುತ್ರಿ ಶ್ರೀಜಾ ಹಾಗೂ ಆಕೆಯ ಪತಿ ಕಲ್ಯಾಣ್ ದೇವ್ ನಡುವೆ ವಿಬೇದಗಳು ಏರ್ಪಟ್ಟು ಇಬ್ಬರೂ ಬೇರೆಯಾಗಿದ್ದಾರೆ. ಶೀಘ್ರದಲ್ಲೇ ವಿಚ್ಚೇದನ ಸಹ ಪಡೆದುಕೊಳ್ಳಲಿದ್ದಾರೆ ಎಂದು ಸಹ ಸುದ್ದಿಗಳು ಕೇಳಿಬಂದವು. ಆದರೆ ಈ ಬಗ್ಗೆ ಮೆಗಾ ಫ್ಯಾಮಿಲಿ ಸಹ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇನ್ನೂ ಮೆಗಾ ಕುಟುಂಬದಿಂದ ಕಲ್ಯಾಣ್ ದೇವ್ ದೂರವೇ ಇದ್ದಾರೆ. ಆದರೆ ಕಲ್ಯಾಣ್ ದೇವ್ ತನ್ನ ಮುದ್ದಿನ ಪುತ್ರಿಯೊಂದಿಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಶ್ರೀಜಾ ಜೊತೆಗೆ ಯಾವುದೇ ಪೊಟೋಸ್ ಹಂಚಿಕೊಳ್ಳುತ್ತಿಲ್ಲ.

ಮೆಗಾಸ್ಟಾರ್‍ ಚಿರಂಜೀವಿಯವರ ಪುತ್ರಿ ಶ್ರೀಜಾ ಇದೀಗ ಎರಡನೇ ಪತಿಗೆ ವಿಚ್ಚೇದನ ನೀಡಿದ್ದಾರೆ ಎಂಬ ಸುದ್ದಿಗಳು ಸುಮಾರು ದಿನಗಳಿಂದ ಕೇಳಿಬರುತ್ತಲೇ ಇದೆ. ಶ್ರೀಜಾ ತನ್ನ ಪತಿಯಿಂದ ದೂರವೇ ಇದ್ದಾರೆ. ಇಬ್ಬರೂ ಬೇರೆ ಬೇರೆಯಾಗಿದ್ದು, ಅವರಿಬ್ಬರೂ ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದೆ. ಆದರೆ ಈ ಬಗ್ಗೆ ಮೆಗಾ ಕುಟುಂಬದಿಂದ ಯಾವುದೇ ಸ್ಪಷ್ಟನೆ ಮಾತ್ರ ದೊರೆತಿಲ್ಲ. ಇನ್ನೂ ಶ್ರೀಜಾ ಪತಿಯಿಂದ ದೂರವಿದ್ದು, ಮಕ್ಕಳೊಂದಿಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ.  ಆದರೆ ಕಲ್ಯಾಣ್ ದೇವ್ ಮಾತ್ರ ತಮ್ಮ ಮಕ್ಕಳನ್ನು ನೆನಪಿಸಿಕೊಂಡು ಆಗಾಗ ಎಮೋಷನಲ್ ಪೋಸ್ಟ್ ಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಶ್ರೀಜಾ ಹಾಗೂ ಕಲ್ಯಾಣ್ ದೇವ್ ಇಬ್ಬರಿಗೂ ಒರ್ವ ಪುತ್ರಿಯಿದ್ದಾರೆ. ಕಲ್ಯಾಣ್ ದೇವ್ ಬಳಿ ಒಂದು ವಾರ ಅವರು ಪುತ್ರಿ ಇರುತ್ತಾರೆ. ಉಳಿದ ದಿನ ಶ್ರೀಜಾ ಬಳಿಯಿರುತ್ತಾರೆ ಎನ್ನಲಾಗಿದೆ.

ಇನ್ನೂ ಕಲ್ಯಾಣ್ ದೇವ್ ಮನೆಯಲ್ಲಿ ಶುಭ ಕಾರ್ಯವೊಂದು ನಡೆದಿದೆ. ಕಲ್ಯಾಣ್ ದೇವ್ ಸಹೋದರಿಯ ಸೀಮಂತ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಶ್ರೀಜಾ ಪುತ್ರಿ ಸ್ಪೇಷಲ್ ಅಟ್ರಾಕ್ಷನ್ ಆಗಿದ್ದರು ಎನ್ನಲಾಗಿದೆ. ಅವರ ಪುತ್ರಿ ನವಿಷ್ಕಾ ತುಂಬಾ ಸಂತೋಷದಿಂದ ಕಾಣಿಸಿಕೊಂಡಿದ್ದಾರೆ. ಕಲ್ಯಾಣ್ ದೇವ್ ಅಕ್ಕ ಭಾವ, ತಂದೆ ತಾಯಿ ಜೊತೆಗೆ ನವಿಷ್ಕಾ ತುಂಬಾನೆ ಸಂತೋಷದಿಂದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಪೊಟೊಗಳು ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗಿದೆ. ಅನೇಕರು ವಿವಿಧ ರೀತಿಯಲ್ಲಿ ಈ ಪೊಟೋಗಳಿಗೆ ಕಾಮೆಂಟ್ಸ್ ಹಾಕುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಕಲ್ಯಾಣ್ ದೇವ್ ಮತ್ತೆ ಸಿನೆಮಾಗಳಲ್ಲಿ ನಟಿಸಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ.