Film News

ಕೋಣೆಯಲ್ಲಿ ತಿಂಗಳುಗಳ ಕಾಲ ಒಂಟಿಯಾಗಿ ಅತ್ತಿದ್ದೇನೆ, ಮಾನಸಿಕ ದುಃಖ ಹೊರಹಾಕಿದ ನಟಿ ಮಮತಾ ಮೋಹನ್ ದಾಸ್…..!

ನಟಿ ಮಮತಾ ಮೋಹನ್ ದಾಸ್ ನಟಿಯಾಗಿ, ಪ್ಲೇ ಬ್ಯಾಕ್ ಸಿಂಗರ್‍ ಆಗಿ, ಪ್ರೊಡ್ಯೂಸರ್‍ ಆಗಿಯೂ ಸಹ ಮಲ್ಟಿ ಟ್ಯಾಲೆಂಟೆಡ್ ನಟಿಯಾಗಿ ಖ್ಯಾತಿ ಪಡೆದುಕೊಂಡಿದ್ದಾರೆ. ಮಲಯಾಳಂ, ತಮಿಳು, ತೆಲುಗು ಸಿನೆಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅನೇಕ ಹಾಡುಗಳನ್ನು ಹಾಡಿದ್ದಾರೆ ಸ್ಪೇಷಲ್ ಸಾಂಗ್ ಗಳಲ್ಲೂ ಸಹ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಇದೀಗ ಆಕೆ ತಾನು ಅನುಭವಿಸಿದ ಮಾನಸಿಕ ವ್ಯಥೆಯ ಕುರಿತು ಹೇಳಿಕೊಂಡಿದ್ದಾರೆ. ಕೋಣೆಯಲ್ಲಿ ತಿಂಗಳುಗಳ ಗಟ್ಟಲೇ ಅತ್ತಿದ್ದೇನೆ ಎಂದು ಮಮತಾ ಮೋಹನ್ ದಾಸ್ ತನ್ನ ನೋವನ್ನು ಹಂಚಿಕೊಂಡಿದ್ದಾರೆ.

ಬಣ್ಣದ ಲೋಕದಲ್ಲಿ ಅನೇಕರನ್ನು ರಂಜಿಸುವಂತಹ ಕಲಾವಿದರಲ್ಲಿ ನೋವುಗಳು ಸಹ ತುಂಬಿರುತ್ತವೆ. ಕೆಲವೊಂದು ಸಮಯದಲ್ಲಿ ಅವು ಹೊರ ಬರುತ್ತವೆ. ಈ ಹಾದಿಯಲ್ಲೇ ನಟಿ ಮಮತಾ ಮೋಹನ್ ದಾಸ್ ಸಹ ತುಂಬಾನೆ ನೋವುಗಳನ್ನು ಎದುರಿಸಿದ್ದಾರೆ. ಈ ಹಿಂದೆ ಆಕೆ ಕ್ಯಾನ್ಸರ್‍ ವ್ಯಾಧಿಗೆ ತುತ್ತಾಗಿದ್ದರು. ಸುಮಾರು ವರ್ಷಗಳ ಕಾಲ ಈ ವ್ಯಾಧಿಯಿಂದ ಬಳಲಿದ್ದರು. ತುಂಬಾ ಹೋರಾಟ ಮಾಡಿ ಈ ವ್ಯಾದಿಯಿಂದ ಆಕೆ ಹೊರಬಂದರು. ಆಹಾರ ನಿಯಮಗಳ ಜತೆಗೆ ವ್ಯಾಯಾಮಗಳ ಮೂಲಕ ತಾನು ಕ್ಯಾನ್ಸರ್‍ ಕಾಯಿಲೆಯನ್ನು ಜಯಿಸಿದ್ದಾಗಿ ಈ ಹಿಂದೆ ಆಕೆ ಹೇಳಿಕೊಂಡಿದ್ದರು. ಕ್ಯಾನ್ಸರ್‍ ನಿಂದ ಹೊರಬಂದ ಮಮತಾ ಇದೀಗ ಮತ್ತೊಂದು ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದಾರೆ. ಚರ್ಮ ಸಂಬಂಧಿ ಕಾಯಿಲೆಯಿಂದ ಆಕೆ ಬಳಲುತ್ತಿದ್ದಾರಂತೆ. ಈ ವಿಚಾರವನ್ನು ಆಕೆ ಹೊರಹಾಕಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಮಮತಾ ಮೋಹನ್ ದಾಸ್ ಆಟೋ ಇಮ್ಯೂನಿಟಿಗೆ ಸಂಬಂಧಿಸಿದ ಕಾಯಿಲೆಗೆ ತುತ್ತಾಗಿದ್ದಾರಂತೆ. ಇದರಿಂದ ಆಕೆಗೆ ಚರ್ಮ ಸಮಸ್ಯೆಗಳು ಹೆಚ್ಚಾಗಿದೆಯಂತೆ. ಸಿನೆಮಾ ಒಂದರ ಶೂಟಿಂಗ್ ಸಮಯದಲ್ಲಿ ಆಕೆ ತನ್ನ ದೇಹದ ಮೇಲಿನ ಮಚ್ಚೆಗಳನ್ನು ಗಮನಿಸಿದ್ದರಂತೆ. ಮುಖ, ಕೈ, ಕತ್ತಿನ ಮೇಲೆ ಮಚ್ಚೆಗಳು ಕಾಣಿಸಿಕೊಂಡಿತ್ತಂತೆ. ವೈದ್ಯರ ಬಳಿಕ ಪರೀಕ್ಷೆ ಮಾಡಿಸಿದರೇ ಅದು ಚರ್ಮ ವ್ಯಾಧಿ ಎಂದು ಹೇಳಿದ್ದರಂತೆ. ಕ್ಯಾನ್ಸರ್‍ ಬಂದಾಗ ನನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದೆ. ಆದರೆ ಈ ವ್ಯಾದಿಯ ಬಗ್ಗೆ ಹೊರಗೆ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಒಂಟಿಯಾದೆ. ಮನೆಯ ಕೋಣೆಯಲ್ಲಿ ಕುಳಿತು ಒಂಟಿಯಾಗಿ ತುಂಬಾನೆ ಅತ್ತಿದ್ದೇನೆ. ಸದಾ ಕ್ಯಾಮೆರಾ ಮುಂದೆ ಇದ್ದ ನಾನು ಒಂಟಿಯಾಗಿದ್ದ ಕಾರಣ ತುಂಬಾನೆ ಮನನೊಂದಿದ್ದೆ. ಸತ್ತು ಹೋಗುತ್ತೇನೋ ಎಂದು ಸಹ ಭಯಪಟ್ಟಿದ್ದೆ.

ಬಳಿಕ ನನ್ನ ವ್ಯಾದಿಯ ಬಗ್ಗೆ ಎಲ್ಲರಿಗೂ ತಿಳಿಸಿದೆ. ಆ ನನಗೆ ಕೊಂಚ ಮನಃಶಾಂತಿ ದೊರೆಯಿತು. ಯಾರಾದರೂ ನಿನಗೆ ಏನಾಗಿದೆ ಎಂದು ಕೇಳಿದರೇ ಇನ್ಸ್ಟಾಗ್ರಾಂ ನೋಡಿ ಎಂದು ಹೇಳುತ್ತೇನೆ. ಸದ್ಯ ಮಮತಾ ಮೋಹನ್ ದಾಸ್ ತನ್ನ ಮನಸ್ಸಿನಲ್ಲಿನ ನೋವನ್ನು ಹೊರಹಾಕಿದ್ದು ಆಕೆಯ ಅಭಿಮಾನಿಗಳು ಬೇಗ ಗುಣಮುಖರಾಗಿ ಎಂದು ಕೋರುವ ಜೊತೆಗೆ ಧೈರ್ಯ ಸಹ ತುಂಬುತ್ತಿದ್ದಾರೆ.

Most Popular

To Top