Film News

ನಂದಮೂರಿ ತಾರಕರತ್ನ ದೈವಾದೀನ, ತಾರಕ ಮೂರು ಮಕ್ಕಳ ಜವಾಬ್ದಾರಿ ವಹಿಸಿಕೊಂಡ ಬಾಲಯ್ಯ….!

ನಂದಮೂರಿ ಕುಟುಂಬದ ನಟ ಹಾಗೂ ರಾಜಕಾರಣಿ ತಾರಕರತ್ನ ಎರಡು ದಿನಗಳ ಹಿಂದೆಯಷ್ಟೆ ಇಹಲೋಕ ತ್ಯಜೆಸಿದ್ದಾರೆ. ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯಿಂದ ಆತ ಬೆಂಗಳೂರಿನ ನಾರಾಯಣಹೃದಯಾಲಯದಲ್ಲಿ 23 ದಿನಗಳ ಕಾಲ ಮೃತ್ಯವಿನ ಜೊತೆಗೆ ಹೋರಾಟ ನಡೆಸಿ ಶಿವರಾತ್ರಿ ಹಬ್ಬದಂದು ಶಿವನಲ್ಲಿ ಐಕ್ಯರಾಗಿದ್ದಾರೆ. ಇನ್ನೂ ಆತನ ಮರಣದಿಂದ ನಂದಮೂರಿ ಕುಟುಂಬದ ಜೊತೆಗೆ ಸಿನಿರಂಗ ಶೋಕಸಾಗರದಲ್ಲಿ ಮುಳುಗಿದೆ.

ಇನ್ನೂ ತಾರಕರತ್ನ ಆಸ್ಪತ್ರೆಗೆ ದಾಖಲಾದಾಗಿನಿಂದ ಬಾಲಕೃಷ್ಣರವರೇ ಅವರ ಆರೋಗ್ಯ ನೋಡಿಕೊಳ್ಳುತ್ತಿದ್ದರು. ತಾರಕರತ್ನರನ್ನು ಉಳಿಸಿಕೊಳ್ಳಲು ಕೊನೆಯ ನಿಮಿಷದವರೆಗೂ ತುಂಬಾನೆ ಹೋರಾಟ ನಡೆಸಿದರು. ಚಿಕಿತ್ಸೆಯ ಜೊತೆಗೆ ಯಗ್ನಯಾಗಾದಿಗಳನ್ನು ಸಹ ಮಾಡಿಸಿದ್ದರು. ವಿದೇಶದಿಂದ ವೈದ್ಯರನ್ನೂ ಸಹ ಕರೆತಂದರು. ಅಪಾರ ಸಂಖ್ಯೆಯ ನಂದಮೂರಿ ಅಭಿಮಾನಿಗಳೂ ಸಹ ತಾರಕರತ್ನ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಗಳನ್ನು ಮಾಡಿದ್ದರು. ಆದರೆ ಆ ಪ್ರಾರ್ಥನೆ ವಿಫಲವಾಗಿದೆ. ಫೆ.18 ಶಿವರಾತ್ರಿ ಹಬ್ಬದಂದು ತಾರಕರತ್ನ ಇಹಲೋಕ ತ್ಯೆಜಿಸಿ ಶಿವನಲ್ಲಿ ವಿಲೀನರಾಗಿದ್ದಾರೆ.

ಇನ್ನೂ ತಾರಕರತ್ನ ಮೃತಪಟ್ಟಿದ್ದು, ಆತನ ಮೂರು ಮಕ್ಕಳೂ ತಂದೆಯಿಲ್ಲದ ತಬ್ಬಲಿಯಾಗಿದ್ದಾರೆ. ನಿಷಿಕಾ, ತನಯ್ ರಾಯ್, ರೇಯಾ ಮೂರು ಮಕ್ಕಳು ತಂದೆಯಿಲ್ಲದೇ ತಬ್ಬಲಿಗಳಾಗಿದ್ದಾರೆ. ಇದೀಗ ಬಾಲಕೃಷ್ಣ ಈ ಮೂರು ಮಕ್ಕಳ ಬಗ್ಗೆ ಪ್ರಮುಖ ನಿರ್ಣಯವೊಂದನ್ನು ತೆಗೆದುಕೊಂಡಿದ್ದಾರೆ. ಇನ್ನೂ ಈ ಮೂವ್ವರು ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಬಾಲಕೃಷ್ಣರವರೇ ವಹಿಸಿಕೊಳ್ಳಲಿದ್ದಾರಂತೆ. ತಾರಕರತ್ನ ಮಕ್ಕಳನ್ನು ಅನಧಿಕೃತವಾಗಿ ದತ್ತು ತೆಗೆದುಕೊಳ್ಳಲಿದ್ದಾರಂತೆ. ಜೊತೆಗೆ ತಾರಕರತ್ನ ಪತ್ನಿಗೂ ಸಹ ಅಗತ್ಯ ಸಹಕಾರ ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಇದೀಗ ಟಾಲಿವುಡ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಇನ್ನೂ ತಾರಕರತ್ನ ಕಳೆದ ಜ.27 ರಂದು ನಾರಾ ಲೋಕೇಶ್ ಪಾದಯಾತ್ರೆಯ ವೇಳೆ ಕುಸಿದು ಬಿದ್ದಿದ್ದರು. ಬಳಿಕ ಆತನನ್ನು ಹತ್ತಿರದ ಆಸ್ಪತ್ರೆಯಲ್ಲಿ ದಾಖಲು ಮಾಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಾಯದಲ್ಲಿ ದಾಖಲು ಮಾಡಲಾಗಿತ್ತು. ಸುಮಾರು 23 ದಿನಗಳ ಕಾಲ ತಾರಕರತ್ನ ರವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಾರಕರತ್ನ ಮೃತಪಟ್ಟರು. ಇನ್ನೂ ಇಂದು ಸಂಜೆ ಅವರ ಅಂತ್ಯಕ್ರಿಯೆಗಳು ನೆರವೇರಿದ್ದು, ಬಾಲಕೃಷ್ಣ ಸೇರಿದಂತೆ ಇತರೆ ಕುಟುಂಬಸ್ಥರು ಹಾಗೂ ಅನೇಕರು ಭಾಗಿಯಾಗಿದ್ದರು.

Most Popular

To Top