Film News

ಮದುವೆಯಾದರು ಸಂಭಾವನೆ ವಿಚಾರದಲ್ಲಿ ತಗ್ಗೆದೇ ಲೇ ಎನ್ನುವಂತೆ ಭಾರಿ ಸಂಭಾವನೆ ಪಡೆದುಕೊಂಡ ಕಾಜಲ್ ಅಗರ್ವಾಲ್…!

ಸೌತ್ ಸಿನಿರಂಗದಲ್ಲಿ ಚಂದಮಾಮ ಎಂದೇ ಖ್ಯಾತಿ ಪಡೆದುಕೊಂಡ ಕಾಜಲ್ ಅಗರ್ವಾಲ್ ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡು ಬ್ಯಾಕ್ ಟು ಬ್ಯಾ‌ಕ್ ಆಫರ್‍ ಗಳನ್ನು ಪಡೆದುಕೊಂಡು ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದರು. ಆಕೆ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ತನ್ನ ಬಾಲ್ಯದ ಸ್ನೇಹಿತ ಗೌತಮ್ ಕಿಚ್ಲು ಎಂಬಾತನನ್ನು ಮದುವೆಯಾದರು. ಮದುವೆಯ ಬಳಿಕ ಆಕೆ ಸಿನೆಮಾಗಳಿಂದ ದೂರವಾದರು. ಇದೀಗ ಆಕೆಯನ್ನು ಮತ್ತೆ ದೊಡ್ಡಪರದೆಯ ಮೇಲೆ ಕಾಣಲು ಅಭಿಮಾನಿಗಳು ಈಗರ್‍ ಆಗಿ ಕಾಯುತ್ತಿದ್ದಾರೆ. ಇನ್ನೂ ಮದುವೆಯಾದರೂ ಸಹ ಕಾಜಲ್ ಭಾರಿ ಮೊತ್ತದ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಇದೀಗ ಹಾಟ್ ಟಾಪಿಕ್ ಆಗಿದೆ.

ನಟಿ ಕಾಜಲ್ ಅಗರ್ವಾಲ್ ಮದುವೆ, ಮಗು ಆದ ಬಳಿಕ ತನ್ನ ಕುಟುಂಬದೊಂದಿಗೆ ಸಂತೋಷದ ಜೀವನ ಕಳೆಯುತ್ತಿದ್ದರು. ಇನ್ನೂಕಾಜಲ್ ಅಭಿಮಾನಿಗಳು ಮಾತ್ರ ಆಖೆಯನ್ನು ಮತ್ತೆ ಸಿನೆಮಾಗಳಲ್ಲಿ ಕಾಣಲು ತುಂಬಾನೆ ಕಾಯುತ್ತಿದ್ದಾರೆ. ಇನ್ನೂ ಈ ಹಿಂದೆ ಆಕೆ ಕೊನೆಯದಾಗಿ ಆಚಾರ್ಯ ಸಿನೆಮಾದಲ್ಲಿ ನಟಿಲಿದ್ದಾರೆ ಎಂದು ಭಾವಿಸಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಈ ಸಿನೆಮಾದಿಂದ ಆಕೆ ದೂರವಾದರು. ಇನ್ನೂ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಆಕೆ ಕ್ರೇಜಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಮದುವೆಯಾದ ಬಳಿಕ ಮೊದಲ ಬಾರಿಗೆ ಆಕೆ ಕಾಲಿವುಡ್ ಸ್ಟಾರ್‍ ಡೈರೆಕ್ಟರ್‍ ಶಂಕರ್‍ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಇಂಡಿಯನ್-2 ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಇದೀಗ ಆಕೆ ಅನೀಲ್ ರಾವಿಪುಡಿ ಹಾಗೂ ಬಾಲಕೃಷ್ಣ ಕಾಂಬಿನೇಷನ್ ನ ಸಿನೆಮಾದಲ್ಲಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದು, ಈ ಸಿನೆಮಾಗಾಗಿ ಕಾಜಲ್ ಭಾರಿ ಮೊತ್ತದ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹಾಟ್ ಟಾಪಿಕ್ ಆಗಿ ಹರಿದಾಡುತ್ತಿದೆ.

ಇನ್ನೂ ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಕಾಜಲ್ ಅಗರ್ವಾಲ್ ಮೊದಲ ಬಾರಿಗೆ ನಂದಮೂರಿ ಬಾಲಕೃಷ್ಣ ರವರ NBK108 ಸಿನೆಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಸದ್ಯ ಬಾಲಕೃಷ್ಣ ಅಖಂಡ, ವೀರಸಿಂಹಾರೆಡ್ಡಿ ಸಿನೆಮಾಗಳ ಬಿಗ್ ಸಕ್ಸಸ್ ಜೋಷ್ ನಲ್ಲಿದ್ದಾರೆ. ಇದೀಗ ನಂದಮೂರಿ ಬಾಲಕೃಷ್ಣ ಸಿನೆಮಾದಲ್ಲಿ ಕಾಜಲ್ ಅಗರ್ವಾಲ್ ನಟಿಸಲಿದ್ದು, ಈ ಸಿನೆಮಾಗಾಗಿ ಆಕೆ ಭಾರಿ ಮೊತ್ತದ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರೆ ಎಂದು ಸುದ್ದಿ ಕೇಳಿಬರುತ್ತಿದೆ. ಮದುವೆಯಾದರೂ ಸಹ ಕಾಜಲ್ ಅಗರ್ವಾಲ್ ಮೊದಲಿನಂತೆ ಸಂಭಾವನೆ ಪಡೆದುಕೊಳ್ಳುತ್ತಿರುವುದು ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ. ಇದೀಗ ಕೇಳಿಬರುತ್ತಿರುವ ಸುದ್ದಿಯಂತೆ ಕಾಜಲ್ ಈ ಸಿನೆಮಾಗಾಗಿ ಕೋಟಿಗೂ ಅಧಿಕ ಮೊತ್ತದ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಕಾಜಲ್ ಅಗರ್ವಾಲ್ ಮದುವೆಗೂ ಮುಂಚೆ ಸಿನೆಮಾ ಒಂದಕ್ಕೆ ಕೋಟಿಗೂ ಅಧಿಕ ಮೊತ್ತದ ಸಂಭಾವನೆ ಪಡೆದುಕೊಳ್ಳುತ್ತಿದ್ದರು. ಇದೀಗ ಮದುವೆಯಾದರೂ ಸಹ ಆಕೆ ಅದೇ ಮಾದರಿಯಲ್ಲಿ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಇಂಡಿಯನ್-2 ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಬಾಲಕೃಷ್ಣ ರವರ ಸಿನೆಮಾದಲ್ಲೂ ಸಹ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top