ಬ್ಲಾಕ್ ಟಾಪ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟ ಶ್ರಿಯಾ ರೆಡ್ಡಿ, ಕಿಲ್ಲಿಂಗ್ ಲುಕ್ಸ್ ಮೂಲಕ ಬಿಸಿಯನ್ನೇರಿಸಿದ ಬ್ಯೂಟಿ……!

Follow Us :

ಇತ್ತೀಚಿಗೆ ಬಹುತೇಕ ಎಲ್ಲಾ ನಟ-ನಟಿಯರು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಅದರಲ್ಲೂ ಕೆಲವರಂತೂ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾ ಮೂಲಕ ತುಂಬಾನೆ ಫೇಂ ಪಡೆದುಕೊಳ್ಳುತ್ತಿರುತ್ತಾರೆ. ಅದರಲ್ಲೂ ನಟಿಯರಂತೂ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಭಾರಿ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಕಾಲಿವುಡ್ ನಟಿ ಶ್ರೀಯಾ ರೆಡ್ಡಿ ಸಹ ಬ್ಲಾಕ್ ಡ್ರೆಸ್ ನಲ್ಲಿ ಇಂಟರ್‍ ನೆಟ್ ಶೇಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದು ಪೊಟೋಗಳು ವೈರಲ್ ಆಗುತ್ತಿವೆ.

ಕಾಲಿವುಡ್ ನಲ್ಲಿ ಪವರ್‍ ಪುಲ್ ಲೇಡಿ ಎಂದೇ ಕರೆಯಲಾಗುವ ಶ್ರಿಯಾರೆಡ್ಡಿ ಹಲವು ತಮಿಳು ಸಿನೆಮಾಗಳ ಮೂಲಕ ಒಳ್ಳೆಯ ಖ್ಯಾತಿ ಪಡೆದುಕೊಂಡಿದ್ದಾರೆ. ಸಮುರೈ, ಬ್ಲಾಕ್ ತಿಮಿರು, ಕಂಚಿವರಂ ಸೇರಿದಂತೆ ಹಲವು ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡರು. ಜೊತೆಗೆ ತೆಲುಗುನಲ್ಲೂ ಸಹ ಅಪ್ಪುಡಪ್ಪುಡು, ಅಮ್ಮ ಚೆಪ್ಪಿಂದಿ ಸಿನೆಮಾಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೂ ಸಹ ಪರಿಚಯವಾದರು. ಬಳಿಕ ಮತ್ತೆ ಕಾಲಿವುಡ್ ಹಾಗೂ ಮಾಲಿವುಡ್ ಸಿನೆಮಾಗಳಲ್ಲೇ ಹೆಚ್ಚಾಗಿ ನಟಿಸಿದರು. ಇದೀಗ ಆಕೆ ಭಾರಿ ನಿರೀಕ್ಷೆ ಹುಟ್ಟಿಸಿರುವ ಪ್ಯಾನ್ ಇಂಡಿಯಾ ಸಿನೆಮಾ ಸಲಾರ್‍ ನಲ್ಲಿ ನಟಿಸುತ್ತಿದ್ದಾರೆ.

ಇನ್ನೂ ಬೇರೆ ನಟಿಯರಂತೆ ಶ್ರಿಯಾರೆಡ್ಡಿ ಸಹ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿರುತ್ತಾರೆ. ಸಿನೆಮಾ ಅಪ್ಡೇಟ್ ಗಳು, ವೈಯುಕ್ತಿಕ ವಿಚಾರಗಳ ಜೊತೆಗೆ ಆಕೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ. ಹೆಚ್ಚಾಗಿ ವರ್ಕೌಟ್ ವಿಡಿಯೋಗಳು, ಟ್ರಾವೆಲಿಂಗ್ ಪೋಸ್ಟ್ ಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಬ್ಲಾಕ್ ಔಟ್ ಫಿಟ್ ನಲ್ಲಿ ಕಿಲ್ಲಿಂಗ್ ಲುಕ್ಸ್ ನೊಂದಿಗೆ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ. ಮತ್ತೇರಿಸುವಂತಹ ಲುಕ್ಸ್ ಕೊಟ್ಟು ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಬ್ಲಾಕ್ ಟಾಪ್ ನಲ್ಲಿ ಬ್ಯಾಕ್ ಸೌಂದರ್ಯ ಪ್ರದರ್ಶನ ಮಾಡುತ್ತಾ ಬ್ಯೂಟಿಪುಲ್ ಸ್ಟಿಲ್ಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಶ್ರಿಯಾರೆಡ್ಡಿ ಸಲಾರ್‍ ಸಿನೆಮಾದ ಜೊತೆಗೆ ಪವನ್ ಕಲ್ಯಾಣ್ ರವರ OG ಸಿನೆಮಾದಲ್ಲೂ ಸಹ ಪವರ್‍ ಪುಲ್ ರೋಲ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದೀಗ ಆಕೆ ಬಿಗ್ ಬಜೆಟ್ ಸಿನೆಮಾಗಳ ಮೂಲಕ ಸದ್ದು ಮಾಡಲಿದ್ದಾರೆ. ಈಗಾಗಲೇ ಕಾಲಿವುಡ್ ವಲಯದಲ್ಲಿ ಒಳ್ಳೆಯ ಫೇಂ ಪಡೆದುಕೊಂಡ ಶ್ರಿಯಾ ರೆಡ್ಡಿ ಕ್ರೇಜ್ ಮತಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.