Uncategorized

ಜೈಲಿನಲ್ಲಿನ ಕರಾಳ ಅನುಭವವನ್ನು ಹಂಚಿಕೊಂಡ ಬಿಗ್ ಬಾಸ್ ಬ್ಯೂಟಿ ಸೋನು ಗೌಡ, 23 ವರ್ಷಕ್ಕೆ ಸೆರೆಮನೆ ನೋಡಿದೆ ಎಂದ ಬ್ಯೂಟಿ…!

ರೀಲ್ಸ್ ರಾಣಿ ಎಂದೇ ಫೇಮಸ್ ಆದ ಸೋನು ಗೌಡ ಹೆಣ್ಣು ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಕಾರಣದಿಂದ ಜೈಲು ಸೇರಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಜಾಮೀನು ಮೇಲೆ ಹೊರಬಂದಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ನಲ್ಲಿ 11 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಇದೀಗ ಆಕೆ ಜೈಲಿನಲ್ಲಿ ಆಕೆ ಅನುಭವಿಸಿದ ಕರಾಳ ದಿನಗಳ ಬಗ್ಗೆ ಮಾತನಾಡಿದ್ದಾರೆ. ಈ ಸಂಬಂಧ ಆಕೆ ತನ್ನ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಫೇಂ ಸೋನು ಗೌಡ ಜೈಲಿನಿಂದ ಹೊರಬಂದ ಬಳಿಕ ಜೈಲಿನಲ್ಲಿ ಕಳೆದ ದಿನಗಳ ಬಗ್ಗೆ ವಿಡಿಯೋ ಮಾಡುವಂತೆ ಕೇಳಿದ್ದರಂತೆ. ಈ ಕಾರಣದಿಂದ ಆಕೆ ಈ ವಿಡಿಯೋ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ವಿಡಿಯೋದಲ್ಲಿ ಆಕೆ ಮಾತನಾಡುತ್ತಾ, ನನ್ನನ್ನು ಕಾನೂನಾತ್ಮಕವಾಗಿ ವಿಚಾರಣೆ ಮಾಡಿದ್ದರು. ಪೊಲೀಸ್ ಸ್ಟೇಷನ್ ಬಳಿಕ ನ್ಯಾಯಂಗ ಬಂಧನಕ್ಕೆ ಕೋರ್ಟ್ ನೀಡಿತ್ತು. ಸೆಂಟ್ರಲ್ ಜೈಲಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ದಿನಗಳನ್ನು ಕಳೆದ ಬಳಿಕ ನನಗೆ ಅನಿಸಿದ್ದು, ನನಗೆ ಇದೆಲ್ಲಾ ಬೇಕಿತ್ತಾ ಎಂದು ಅನ್ನಿಸಿತ್ತು. ನನ್ನ ಪ್ರಕರಣ ಬೇರೆ ಅವರ ಪ್ರಕರಣ ಬೇರೆ, ಪುಲ್ ಮರ್ಡರ್‍, ಹಾಫ್ ಮರ್ಡರ್‍ ಮಾಡಿದವರೆಲ್ಲಾ ಇದ್ದರು. ಹಲವು ಜನಗಳ ಜೊತೆ ಇರೋದು ನನಗೆ ತುಂಬಾ ಕಷ್ಟ ಅನ್ನಿಸಿತ್ತು. ಮೂರು ದಿನಕ್ಕೊಮ್ಮೆ ಪೋನ್ ಕೊಡ್ತಾ ಇದ್ರು, 3-4 ನಿಮಿಷ ಮಾತನಾಡಲು ಮೂರು ದಿನ ಕಾಯಬೇಕಾಗಿತ್ತು. ಇದರಿಂದ ನನಗೆ ವ್ಯಕ್ತಿಯ ಬೆಲೆ ಗೊತ್ತಾಯ್ತು ಎಂದಿದ್ದಾರೆ.

ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಇದ್ದು ನಾನು ತುಂಬಾನೆ ಕಲಿತುಕೊಂಡೆ. ಜೈಲಿನಲ್ಲಿ ತುಂಬಾ ಸೊಳ್ಳೆ ಕಾಟ, ನಾನು ಫ್ಯಾನ್ ಇಲ್ಲದೇ ಇರೊದಿಲ್ಲ. ಅಲ್ಲಿ ಫ್ಯಾನ್ ಇತ್ತು ಆದರೆ ನಮ್ಮ ಲೈಪ್ ಸ್ಟೈಲ್ ಬೇರೆ, ಅಲ್ಲಿನ ಜೀವನ ಬೇರೆ. 23 ವರ್ಷಕ್ಕೆ ನಾನು ಜೈಲು ನೋಡಿದೆ ಅನ್ನೋದೇ ನನಗೆ ಬೇಸರದ ವಿಚಾರ. ಈ ಸಮಯದಲ್ಲಿ ನನಗೆ ಯಾಕೆ ಈ ರೀತಿ ಆಯ್ತು ಎಂದು ಯೋಚನೆ ಮಾಡಿದೆ. ನನ್ನ ಜೀವನ ಮತ್ತೆ ನೆಗೆಟೀವ್ ಆಯ್ತಲ್ಲ ಎಂದು ಬೇಸರವಾಯ್ತು. ನನ್ನವರು ಯಾರೂ ಇಲ್ಲ ಎಂದು ತುಂಬಾ ನೋವು ಪಟ್ಟೆ. ಅದರ ನಡುವೆ ಖುಷಿಯ ವಿಚಾರ ಒಂದು ತಿಳಿಯಿತು. ಟ್ರೋಲ್ ಪೇಜ್ ಗಳು ನನ್ನನ್ನು ಸಪೋರ್ಟ್ ಮಾಡಿದ್ದಾರೆ. ಜೈಲಿನಿಂದ ಬಂದ ಮೊದಲ ದಿನ ನಾನು ಪೋನ್ ನೋಡಿಲ್ಲ. ಬಳಿಕ ನೋಡಿದೆ. ನನ್ನದು ಸಣ್ಣ ಸರ್ಕಲ್, ನಮ್ಮ ಮನೆಯವರು, ನನ್ನ ಅಣ್ಣ, ರಾಕೇಶ್ ಅಡಿಗ ಎಲ್ಲರೂ ನನ್ನ ಬೆಂಬಲಕ್ಕೆ ನಿಂತರು. ಈ ಪ್ರಕರಣದ ಬಗ್ಗೆ ಹೆಚ್ಚು ಮಾತನಾಡೊಲ್ಲ. ಇನ್ನು ಮುಂದೆ ಎಂದಿನಂತೆ ವಿಡಿಯೋ ಮಾಡುತ್ತೇನೆ. ನಿಮ್ಮ ಬೆಂಬಲ ನನಗೆ ಬೇಕು ಎಂದು ಸೋನು ಗೌಡ ಹೇಳಿದ್ದಾರೆ. ಆಕೆಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Most Popular

To Top