News

ತಾಯಿಯ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಮಗ, ಅತ್ಯಾಚಾರ ವಿರೋಧಿಸಿದಕ್ಕೆ ಕತ್ತು ಹಿಸುಕಿ ತಾಯಿಯನ್ನೆ ಕೊಂದ ಪಾಪಿ ಮಗ….!

ಸಮಾಜದಲ್ಲಿ ಆಗಾಗ ತಲೆತಗ್ಗಿಸುವಂತಹ ಘಟನೆಗಳು ನಡೆಯುತ್ತಿರುತ್ತವೆ. ಅದರಲ್ಲೂ ಕೆಲ ಕಾಮಾಂಧರು ಮಹಿಳೆಯರ ಮೇಲೆ ನಾಯಿಗಳಂತೆ ಎರಗಿ ಅತ್ಯಾಚಾರ ಮಾಡುವ ನೀಚ ಕೃತ್ಯಗಳನ್ನು ಎಸಗುತ್ತಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಗನೇ ತಾಯಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಂತಹ ನೀಚ ಕೃತ್ಯವೊಂದು ನಡೆದಿದೆ. ಅತ್ಯಾಚಾರಕ್ಕೆ ತಾಯಿ ಒಪ್ಪದೇ ಇದ್ದಾಗ ಆಕೆಯ ಕತ್ತು ಹಿಸುಕಿ ಕೊಲೆ ಸಹ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಕೊಂಡೇಲಾ ಎಂಬ ಗ್ರಾಮದಲ್ಲಿ ಈ ವಿಕೃತ ಘಟನೆ ನಡೆದಿದೆ. ಅ.26 ರಂದು ಈ ಘಟನೆ ನಡೆದಿದ್ದು, ಮೂರು ದಿನಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಮೃತ ಪಟ್ಟ ದುರ್ದೈವಿಯನ್ನು ರತ್ನ ಶೆಟ್ಟಿ (62) ಎಂದು ಗುರ್ತಿಸಲಾಗಿದೆ. ಆಕೆಯನ್ನು ಕೊಂದ ವ್ಯಕ್ತಿ ಬೇರೆ ಯಾರೂ ಅಲ್ಲ ಆಕೆಯ ಮಗ ರವಿರಾಜ್ ಶೆಟ್ಟಿ. ತಾಯಿಯನ್ನು ಕೊಂದು ಪರಾರಿಯಾಗಿದ್ದ ರವಿರಾಜ್ ಶೆಟ್ಟಿಯನ್ನು ಅ.30ರ ಸಂಜೆ ಬಜಪೆ ಪೊಲೀಸರು ಬಂಧಿಸಿದ್ದಾರೆ. ತಾಯಿಯನ್ನು ಕೊಲೆ ಮಾಡಿ, ಮನೆಗೆ ಬೀಗ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ. ಮೂರು ದಿನಗಳ ಬಳಿಕ ಶವಕ್ಕೆ ನೊಣಗಳು ಮುತ್ತಿಕೊಂಡಿದ್ದು, ದುರ್ವಾಸನೆ ಬೀರುತ್ತಿದ್ದನ್ನು ಗಮನಿಸಿದ ಸ್ಥಳೀಯರ ನೀಡಿದ ದೂರಿನ ಮೇರೆಗೆ ಘಟನೆ ಬೆಳಕಿಗೆ ಬಂದಿದೆ.

ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನು ತಾಯಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದಾಗ ಆಕೆ ಒಪ್ಪದೇ ತೀವ್ರ ವಿರೋಧ ಮಾಡಿದಳಂತೆ. ಆದ್ದರಿಂದ ಕೋಪಗೊಂಡ ಆರೋಪಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎನ್ನಲಾಗಿದೆ.

Most Popular

To Top