ನಾನು ಆ ಸ್ಟಾರ್ ನಟಿಯ ಬಿಂಬ ಎಂದ ಸೋನು, ನೆಗೆಟೀವ್ಸ್ ಹೇಗೆ ಎದುರಿಸಬೇಕು ಎಂದು ಅವರಿಂದ ಕಲಿತರಂತೆ ಸೋನು ಗೌಡ…..!

ಸೋಷಿಯಲ್ ಮಿಡಿಯಾ ಮೂಲಕ ಫೇಂ ಪಡೆದುಕೊಂಡ ಸೋನು ಗೌಡ ಬಿಗ್ ಬಾಸ್ ನಲ್ಲಿ ಹೋದ ಬಂದ ಬಳಿಕ ಮತಷ್ಟು ಫೇಂ ಪಡೆದುಕೊಂಡರು. ಸೋಷಿಯಲ್ ಮಿಡಿಯಾದಲ್ಲಿ ಆಕೆ ಎಷ್ಟು ಫೇಮಸ್ ಆದರೋ ಅದೇ ಮಾದರಿಯಲ್ಲಿ ಟ್ರೋಲ್…

ಸೋಷಿಯಲ್ ಮಿಡಿಯಾ ಮೂಲಕ ಫೇಂ ಪಡೆದುಕೊಂಡ ಸೋನು ಗೌಡ ಬಿಗ್ ಬಾಸ್ ನಲ್ಲಿ ಹೋದ ಬಂದ ಬಳಿಕ ಮತಷ್ಟು ಫೇಂ ಪಡೆದುಕೊಂಡರು. ಸೋಷಿಯಲ್ ಮಿಡಿಯಾದಲ್ಲಿ ಆಕೆ ಎಷ್ಟು ಫೇಮಸ್ ಆದರೋ ಅದೇ ಮಾದರಿಯಲ್ಲಿ ಟ್ರೋಲ್ ಸಹ ಆಗುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಮಾಲ್ಡೀವ್ಸ್ ನಲ್ಲಿ ಬೋಲ್ಡ್ ವಿಡಿಯೋ ಪೊಟೋಗಳ ಮೂಲಕ ಸದ್ದು ಮಾಡಿದ್ದ ಸೋನು ಇದೀಗ ಸಂದರ್ಶನವೊಂದರಲ್ಲಿ ನೀಡಿದ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಬಿಗ್ ಬಾಸ್ ಒಟಿಟಿ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಸೋನು ಗೌಡ ಸೋಷಿಯಲ್ ಮಿಡಿಯಾದಲ್ಲಿ ವಿವಿಧ ರೀತಿಯ ಹಾಟ್ ಅಂಡ್ ಬೋಲ್ಡ್ ಪೊಟೋಗಳು, ವಿಡಿಯೋಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಸೋನು ಗೌಡ ತಮ್ಮ ಬಗ್ಗೆ ಅನೇಕ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಆಕೆಯ ವಿಡಿಯೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಜೊತೆಗೆ ಅದೇ ಮಾದರಿಯಲ್ಲಿ ಟ್ರೋಲ್ ಸಹ ಆಗುತ್ತಿರುತ್ತವೆ. ಕೆಲವು ದಿನಗಳ ಹಿಂದೆಯಷ್ಟೆ ತನ್ನ ಇನ್ಸ್ಟಾ ಖಾತೆಯಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಪಡೆದುಕೊಂಡ ಹಿನ್ನೆಲೆಯಲ್ಲಿ ಮಾಲ್ಡಿವ್ಸ್ ನಲ್ಲಿ ಬೋಲ್ಡ್ ವಿಡಿಯೋ ಮೂಲಕ ಫಾಲೋವರ್ಸ್‌ಗೆ ಹಾಟ್ ಟ್ರೀಟ್ ಕೊಟ್ಟರು. ಈ ವಿಡಿಯೋ ಇಂದಿಗೂ ಸಹ ಜೋರಾಗಿಯೇ ಟ್ರೋಲ್ ಆಗುತ್ತಿದೆ.

ಇನ್ನೂ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಸೋನು ಗೌಡ ಕೆಲವೊಂದು ಕಾಮೆಂಟ್ಸ್ ಮಾಡಿದ್ದಾರೆ. ಸೋನು ಗೌಡ ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣ ರವರ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ರವರ ಕಿರಿಕ್ ಪಾರ್ಟಿ ಸಿನೆಮಾ ಎಂದರೇ ನನಗೆ ತುಂಬಾ ಇಷ್ಟ. ನಾನು ಅವರಿಂದ ತುಂಬಾನೆ ಕಲಿತಿದ್ದೇನೆ. ಯಾರೆಲ್ಲಾ ಅವರನ್ನು ಹೇಟ್ ಮಾಡುತ್ತಾರೆ ಅದು ನನಗೆ ಬೇಕಾಗಿಲ್ಲ. ರಶ್ಮಿಕಾ ರವರು ನನಗೆ ಇನ್ಸ್ಪಿರೇಷನ್ ಆಗಿದ್ದಾರೆ. ಅವರಿಂದಲೇ ನಾನು ನೆಗೆಟಿವಿಟಿಯನ್ನು ಹೇಗೆ ದೂರ ಇಡಬೇಕು ಎಂಬುದನ್ನು ಕಲಿತುಕೊಂಡಿದ್ದೇನೆ. ರಶ್ಮಿಕಾ ರವರಂತೆ ಬೆಳೆಯಲು ನನ್ನ ಆಸೆಯಾಗಿದೆ. ಅಮಿತಾಬ್ ರವರ ಜೊತೆಗೆ ಅನೇಕರು ನಟಿಸಿದ್ದಾರೆ. ಅದು ಅಷ್ಟು ಸುಲಭವಾದ ಕೆಲಸವಲ್ಲ.

ಇನ್ನೂ ಹೆಚ್ಚಾಗಿ ಹೇಳಬೇಕು ಅಂದರೇ ನಾನು ರಶ್ಮಿಕಾ ರವರ ಬಿಂಬ ಎಂದು ಸೋನು ಗೌಡ ಹೇಳಿದ್ದಾರೆ. ಇನ್ನೂ ಸೋನು ಗೌಡ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಸೋಷಿಯಲ್ ಮಿಡಿಯಾ ಹಾಗೂ ಬಿಗ್ ಬಾಸ್ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಸೋನು ಗೌಡ ಸೋಷಿಯಲ್ ಮಿಡಿಯಾಲ್ಲಿ ತುಂಬಾನೆ ಟ್ರೋಲ್ ಆಗುತ್ತಿರುತ್ತಾರೆ. ಶೀಘ್ರದಲ್ಲೇ ಸೋನು ಗೌಡ ಕ್ಯಾಡ್ಬರೀಸ್ ಎಂಬ ಸಿನೆಮಾದ ಮೂಲಕ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.