ಎಷ್ಟು ಬೇಕು ಕೇಳು, ನನ್ನೊಂದಿಗೆ ಇರು ಎಂದು ಸಿಂಗರ್‍ ಚಿನ್ಮಯಿ ಬಗ್ಗೆ ವಲ್ಗರ್‍ ಕಾಮೆಂಟ್ ಮಾಡಿದ ನೆಟ್ಟಿಗ, ಫೈರ್‍ ಆದ ಸಿಂಗರ್….!

Follow Us :

ಸೌತ್ ಸಿನಿರಂಗದಲ್ಲಿ ಗಾಯಕಿಯಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ದೊಡ್ಡ ಮಟ್ಟದಲ್ಲೇ ಖ್ಯಾತಿ ಪಡೆದುಕೊಂಡವರಲ್ಲಿ ಸಿಂಗರ್‍ ಚಿನ್ಮಯಿ ಒಬ್ಬರಾಗಿದ್ದಾರೆ. ಮಲ್ಟಿ ಟ್ಯಾಲೆಂಟೆಡ್ ಕಲಾವಿದೆಯಾಗಿ ಈಕೆ ಒಳ್ಳೆಯ ಕ್ರೇಜ್ ದಕ್ಕಿಸಿಕೊಂಡಿದ್ದಾರೆ. ಜೊತೆಗೆ ಆಕೆ ಮಹಿಳೆಯರ ಮೇಲೆ ನಡೆಯುವಂತಹ ದೌರ್ಜನ್ಯಗಳ ಕುರಿತಂತೆ ಆಕೆ ಫೈರ್‍ ಬ್ರಾಂಡ್ ಆಗಿ ಮಾರ್ಪಾಡಾಗಿದ್ದಾರೆ. ಇನ್ನೂ ಮಿಟೂ ಉದ್ಯಮದಲ್ಲೂ ಆಕೆ ಭಾಗಿಯಾಗಿದ್ದರು. ಇದೀಗ ನೆಟ್ಟಿಗನೋರ್ವ ಆಕೆಯ ಬಗ್ಗೆ ವಲ್ಗರ್‍ ಆಗಿ ಕಾಮೆಂಟ್ ಮಾಡಿದ್ದು, ಆಕೆ ಮೈಂಡ್ ಬ್ಲಾಕ್ ಆಗುವಂತಹ ಕೌಂಟರ್‍ ಕೊಟ್ಟಿದ್ದಾರೆ.

ಮಲ್ಟಿ ಟ್ಯಾಲೆಂಟೆಡ್ ಚಿನ್ಮಯಿ ಸಿನೆಮಾಗಳಿಗಿಂತ ವಿವಾದಗಳಿಂದಲೇ ಹೆಚ್ಚು ಕ್ರೇಜ್ ಪಡೆದುಕೊಂಡಿದ್ದಾರೆ ಎಂದರೇ ತಪ್ಪಾಗಲಾರದು. ತಮ್ಮ ಸುತ್ತಮುತ್ತಲಿನಲ್ಲಿ ನಡೆಯುವಂತಹ ಹೆಂಗಸರ ಸಮಸ್ಯೆಗಳ ಬಗ್ಗೆ ತನ್ನದೇ ಆದ ಶೈಲಿಯಲ್ಲಿ ರಿಯಾಕ್ಟ್ ಆಗುತ್ತಿರುತ್ತಾರೆ. ಜೊತೆಗೆ ಕಾಮೆಂಟ್ ಗಳನ್ನೂ ಸಹ ಮಾಡುತ್ತಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಸೋಷಿಯಲ್ ಮಿಡಿಯಾ ವೇದಿಕೆಯಲ್ಲಿ ಸದಾ ಸ್ಪಂದಿಸುತ್ತಾ ಇರುತ್ತಾರೆ. ಇದು ಅನೇಕ ಮಹಿಳೆಯರಿಗೆ ಸ್ಪೂರ್ತಿಯಾಗಿದೆ ಎಂದೂ ಸಹ ಹೇಳಬಹುದಾಗಿದೆ. ಜೊತೆಗೆ ಮಹಿಳೆಯರು ಎದುರಿಸುವಂತಹ ಅನೇಕ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿಯೇ ಚರ್ಚೆ ಮಾಡುತ್ತಿರುತ್ತಾರೆ. ಜೊತೆಗೆ ಮಹಿಳೆಯರ ಬಗ್ಗೆ ಅಸಭ್ಯಕರವಾಗಿ ಮಾತನಾಡುವವರಿಗೂ ಸಹ ಆಕೆ ತನ್ನದೇ ಆದ ಸ್ಟೈಲ್ ನಲ್ಲಿ ಕೌಂಟರ್‍ ಕೊಡುತ್ತಿರುತ್ತಾರೆ.

ಇತ್ತೀಚಿಗಷ್ಟೆ ಓರ್ವ ನೆಟ್ಟಿಗ ನೀವು ಮಹಿಳೆಯರಿಗೆ ಬೆಂಬಲವಾಗಿ ಮಾತನಾಡುವುದು, ಅವರಿಗೆ ಸಹಾಯ ಮಾಡುವುದು ನನಗೆ ತುಂಬಾ ಇಷ್ಟವಾಗಿದೆ. ನೀವು ಸದಾ ಅದೇ ಮಾದರಿಯಲ್ಲಿ ಸಹಾಯ ಮಾಡಿ ಎಂದು ಕಾಮೆಂಟ್ ಮಾಡಿದ್ದರು. ಆದರೆ ಆ ಕಾಮೆಂಟ್ ಗೆ ಚಿನ್ಮಯಿ ಕಡೆಯಿಂದ ಯಾವುದೇ ವಿಧವಾದ ರಿಪ್ಲೆ ಬಾರದ ಕಾರಣ ಆ ವ್ಯಕ್ತಿ ತನ್ನ ನಿಜ ಸ್ವರೂಪವನ್ನು ಹೊರಹಾಕಿದ್ದಾರೆ. ಆತ ಮತ್ತೊಮ್ಮೆ ಆಕೆಗೆ ಕಾಮೆಂಟ್ ಮಾಡಿ ನಿನಗೆ ಎಷ್ಟು ಹಣ ಬೇಕು ನಾನು ಕೊಡುತ್ತೇನೆ. ನನ್ನ ಜೊತೆ ಸ್ಪಲ್ಪ ಸಮಯ ಕಳೆಯುತ್ತೀಯಾ, ನಿನಗೆ ಏನು ಬೇಕಾದರೂ ಕೊಡುತ್ತೇನೆ, ದುಬಾರಿ ಲೈಫ್ ಕೊಡುತ್ತೇನೆ ಎಂಬ ಅರ್ಥ ಬರುವಂತೆ ಕಾಮೆಂಟ್ ಮಾಡಿದ್ದಾನೆ. ಇನ್ನೂ ಆತನ ಕಾಮೆಂಟ್ ಗೆ ಚಿನ್ಮಯಿ ತನ್ನದೇ ಆದ ಶೈಲಿಯಲ್ಲಿ ಕೌಂಟರ್‍ ಕೊಟ್ಟಿದ್ದಾರೆ.

ನೆಟ್ಟಿಗನ ಕಾಮೆಂಟ್ ಗೆ ಫೈರ್‍ ಆದ ಚಿನ್ಮಯಿ, ನಾನು ಅವನಿಗೆ ರಿಪ್ಲೆ ಕೊಡದೇ ಇದಿದ್ದಕ್ಕೆ ಅವನ ಈಗೋ ಪೆಟ್ಟುತಿಂದಂತಿದೆ. ಅಂತಹ ವ್ಯಕ್ತಿಯನ್ನು ಏನು ಮಾಡಬೇಕು. ತಪ್ಪು ಅವನದ್ದು ಅಲ್ಲ, ಅವನನ್ನು ಆ ರೀತಿಯಾಗಿ ಬೆಳೆಸಿದ ತಂದೆಯದ್ದು. ಸಮಾಜದಲ್ಲಿ ಇಂತಹ ಕೆಟ್ಟ ವ್ಯಕ್ತಿಗಳು ತುಂಬಾನೆ ಇದ್ದಾರೆ. ಮಹಿಳೆಯರು ಎಚ್ಚರಿಕೆಯಿಂದ ಇರಿ ಎಂದು ಆಕೆ ಫೈರ್‍ ಆಗಿದ್ದಾರೆ. ಸದ್ಯ ಆಕೆಯ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.