Film News

ಮತ್ತೊಮ್ಮೆ ಸಿಕ್ಕಿಬಿದ್ದ ಸಿದ್ದಾರ್ಥ್-ಅದಿತಿ, ಕ್ಯೂಟ್ ಜೋಡಿ ಎಂದ ಕೂಡಲೇ ನಾಚಿದ ಅದಿತಿ, ವೈರಲ್ ಆದ ಪೊಟೋಸ್…..!

ಸುಮಾರು ದಿನಗಳಿಂದ ಸೌತ್ ಸಿನಿರಂಗದ ನಟ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಹೈದರಿ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ತೆಲುಗು ನಟ ಶರ್ವಾನಂದ್ ನಿಶ್ಚಿತಾರ್ಥ ಸಮಾರಂಭದಲ್ಲಿ ಸಿದ್ದಾರ್ಥ್ ಹಾಗೂ ಅದಿತಿ ಜೋಡಿಯಾಗಿ ಕಾಣಿಸಿಕೊಂಡಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಜೊತೆಗೆ ಹಾಡೊಂದಕ್ಕೆ ಇಬ್ಬರೂ ಡ್ಯಾನ್ಸ್ ಮಾಡಿದ್ದರು. ಆದರೆ ಅದೆಲ್ಲಾ ಸುಳ್ಳು ಸುದ್ದಿ ಎಂದು ಅದಿತಿ ಅನೇಕ ಬಾರಿ ಹೇಳಿಕೊಂಡೆ ಬರುತ್ತಿದ್ದಾರೆ. ಆದರೆ ರೂಮರ್‍ ಗಳು ಮಾತ್ರ ನಿಂತಿಲ್ಲ. ಇದೀಗ ಮತ್ತೊಮ್ಮೆ ಇಬ್ಬರೂ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಆ ಪೊಟೋಗಳು ವೈರಲ್ ಆಗುತ್ತಿವೆ.

ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿಗಳು ಸಿನಿವಲಯ ಹಾಗೂ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇದೆ. ಆದರೆ ಅವರಿಬ್ಬರೂ ಅದೆಲ್ಲಾ ಏನು ಇಲ್ಲ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳುತ್ತಿರುತ್ತಾರೆ. ಆದರೆ ಜೊತೆಯಲ್ಲೇ ಪಾರ್ಟಿಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತಾರೆ. ಇನ್ನೂ ಅವರಿಬ್ಬರೂ ಜೋಡಿಯಾಗಿ ಕಾಣಿಸಿಕೊಂಡಾಗ ಕೆಲವು ಅಭಿಮಾನಿಗಳು ಒಳ್ಳೆಯ ಜೋಡಿ ಬೇಗ ಮದುವೆಯಾಗಿ ಎಂದೂ ಹೇಳುತ್ತಿರುತ್ತಾರೆ. ಆದರೆ ಅನೇಕ ಬಾರಿ ಸಿದ್ದಾರ್ಥ್ ಹಾಗೂ ಅದಿತಿ ಸಹ ಸೊಷಿಯಲ್ ಮಿಡಿಯಾದಲ್ಲಿ ಬರುವುದೆಲ್ಲಾ ನಿಜವಲ್ಲ. ಎಲ್ಲವೂ ಸುಳ್ಳು ಪ್ರಚಾರಗಳು ಮಾತ್ರ ಎಂದು. ಕೆಲವೊಮ್ಮೆ ಸಿದ್ದಾರ್ಥ್ ಪಾಪರಾಜಿಗಳ ಮೇಲೆ ಆಕ್ರೋಷ ಗೊಂಡ ಸನ್ನಿವೇಶಗಳೂ ಸಹ ನಡೆದಿದೆ. ಇದೀಗ ಮತ್ತೊಂದು ಕಾರ್ಯಕ್ರಮದಲ್ಲಿ ಅವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಮುಂಬೈನಲ್ಲಿ ಜೂಬ್ಲಿ ವೆಬ್ ಸಿರೀಸ್ ಪ್ರೀಮಿಯರ್‍ ಗೆ ಸಿದ್ದಾರ್ಥ್ ಹಾಗೂ ಅದಿತಿ ಜೋಡಿಯಾಗಿ ಹಾಜರಾಗಿದ್ದರು. ಈ ವೇಳೆ ಅವರಿಬ್ಬರೂ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕ್ಯೂಟ್ ಸ್ಮೈಲ್ ಕೊಡುತ್ತಾ ಜೋಡಿಯಾಗಿ ಕ್ಯಾಮೆರಾಗಳಿಗೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಅಲ್ಲಿದ್ದವರು ಆ ಜೋಡಿಯನ್ನು ನೋಡಿ ಲವ್ಲಿ, ಕ್ಯೂಟ್ ಜೋಡಿ ಎಂದೆಲ್ಲಾ ಹೊಗಳಿದ್ದಾರೆ. ಈ ಹೊಗಳಿಗೆ ಅದಿತಿ ನಾಚಿ ನೀರಾಗಿದ್ದಾರೆ. ಇನ್ನೂ ಈ ಸಂಬಂಧ ವಿಡಿಯೋ ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಈ ವಿಡಿಯೋ ನೋಡಿದ ಅನೇಕರು ಇಬ್ಬರೂ ಒಳ್ಳೆಯ ಜೋಡಿ ಮದುವೆಯಾಗಿ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಮತ್ತೆ ಕೆಲವರು ಅವರಿಬ್ಬರದ್ದು ಪ್ರೀತಿಯಲ್ಲದೇ ಮತ್ತೇನು ಎಂದು ಅಭಿಪ್ರಾಯಗಳನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ಸಿದ್ದಾರ್ತ್ ಜೊತೆಗಿನ ಡೇಟಿಂಗ್ ರೂಮರ್‍ ಬಗ್ಗೆ ಅದಿತಿಗೆ ಪ್ರಶ್ನೆ ಎದುರಾಗಿತ್ತು. ಅಂತಹುದು ಏನಾದರೂ ಇದ್ದರೇ ನಾನೇ ನೇರವಾಗಿ ಹೇಳುತ್ತೇನೆ ಎಂದು ಉತ್ತರ ನೀಡಿದ್ದರು. ನಾನು ಏನೇ ಹೇಳಿದರೂ ನಿಮಗೆ ಇಷ್ಟಬಂದಂತೆ ನೀವು ಊಹಿಸಿ ಬರೆಯುತ್ತೀರಿ ಎಂದು ಕೌಂಟರ್‍ ಸಹ ಕೊಟ್ಟಿದ್ದರು. ಇನ್ನೂ ಈ ಜೋಡಿ ಯಾವಾಗ ಓಪೆನ್ ಆಗುತ್ತಾರೇ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top