Film News

ಯಾವುದೇ ಸಂಬಂಧವಿಲ್ಲದವರಿಗೆ ಸಹಾಯ ಮಾಡಿದ ಸೀನಿಯರ್ ನಟಿ ಶಕೀಲಾ, ಎಲ್ಲರ ಮೆಚ್ಚುಗೆಗೆ ಪಾತ್ರವಾದ ನಟಿ…..!

ಸೌತ್ ಸಿನಿರಂಗದಲ್ಲಿ ಶಕೀಲಾ ಎಂಬ ಹೆಸರನ್ನು ಕೇಳದೇ ಇರುವವರು ಯಾರೂ ಇರೊಲ್ಲ. ಒಂದು ಕಾಲದಲ್ಲಿ ಶಕೀಲಾ ಅನೇಕ ಸಿನೆಮಾಗಳಲ್ಲಿ ನಟಿಸಿ ಒಳ್ಳೆಯ ಫೇಂ ಪಡೆದುಕೊಂಡಿದ್ದರು. ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸಿದ ಈಕೆ ಇದೀಗ ಸಿನಿರಂಗದಿಂದ ದೂರವೇ ಉಳಿದಿದ್ದಾರೆ. ಜೊತೆಗೆ ಒಂದು ಕಾಲದಲ್ಲಿ ಅಡಲ್ಟ್ ಸಿನೆಮಾಗಳಲ್ಲಿ ಸಹ ಹೆಚ್ಚಾಗಿ ನಟಿಸಿದ್ದ ಶಕೀಲಾ ಅಂತಹ ಸಿನೆಮಾಗಳಿಂದಲೂ ದೂರ ಉಳಿದರು. ಬಳಿಕೆ ಕೆಲವೊಂದು ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ಆಕೆ ತನಗೆ ಯಾವುದೇ ಸಂಬಂಧವಿಲ್ಲದವರ ಬೆಂಬಲಕ್ಕೆ ಬಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಟಿ ಶಕೀಲಾ ಸಿನೆಮಾಗಳ ಜೊತೆಗೆ ಕೆಲವೊಂದು ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ಮಾಡುತ್ತಿರುತ್ತಾರೆ. ಎಲ್ಲಿಯಾದರೂ ಸಮಸ್ಯೆ, ಕಷ್ಟ ಇದೆ ಎಂದು ತಿಳಿದರೇ ಅಲ್ಲಿದ್ದವರಿಗೆ ಸಹಾಯ ಮಾಡಲು ಮುಂದಾಗುತ್ತಿರುತ್ತಾರೆ. ಅವರ ಸಮಸ್ಯೆಯನ್ನೇ ತನ್ನ ಸಮಸ್ಯೆಯೆಂದು ಭಾವಿಸಿ ಅವರಿಗೆ ಬೆಂಬಲವಾಗಿ ನಿಲ್ಲುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಇತ್ತೀಚಿಗೆ ಚೆನೈನಲ್ಲಿ ಕೆಲವರಿಗೆ ಬೆಂಬಲವಾಗಿ ನಿಂತಿದ್ದಾರೆ. ಚೆನೈನಲ್ಲಿನ ಚುಲ್ತೆ ಮೇಡುಲೋ ಚಿತ್ರ ರೆಸಿಡೆನ್ಷಿಯಲ್ ಅಪಾರ್ಟ್ ಮೆಂಟ್ ಬಳಿ ಸುಮಾರು ಮಂದಿ ವಾಸ ಮಾಡುತ್ತಿದ್ದಾರೆ. ಆದರೆ ಈ ಅಪಾರ್ಟ್‌ಮೆಂಟ್ ನ ಮಾಲೀಕರು ಒಂದೊಂದು ಕುಟುಂಬದಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆಗ್ರಹಿಸಿ ಅಪಾರ್ಟ್‌ಮೆಂಟ್ ವಾಸಿಗಳು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂ ಅವರಿಗೆ ನೀರನ್ನು ಪೂರೈಕೆ ಮಾಡದೇ ಕೆಲವು ದಿನಗಳ ಕಾಲ ಸಮಸ್ಯೆ ನೀಡಿದ್ದಾರೆ. ಇದರಿಂದ ಅಪಾರ್ಟ್‌ಮೆಂಟ್ ವಾಸಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ ಅವರಿಗೆ ಬೆಂಬಲವಾಗಿ ಶಕೀಲಾ ಸಹ ನಿಂತಿದ್ದಾರೆ.

ಇನ್ನೂ ಅಧಿಕವಾಗಿ ಹಣ ವಸೂಲಿ ಮಾಡುತ್ತಿದ್ದ ಚುಲ್ತೆ ಮೇಡುಲೋ ಚಿತ್ರ ರೆಸಿಡೆನ್ಷಿಯಲ್ ಅಪಾರ್ಟ್ ಮೆಂಟ್ ಮಾಲಿಕರ ವಿರುದ್ದ ಅಲ್ಲಿನ ಕೆಲ ನಿವಾಸಿಗಳು ಆಗ್ರಹ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನೂ ಈ ವಿಚಾರ ತಿಳಿಯುತ್ತಿದ್ದಂತೆ ಅಲ್ಲಿ ಶಕೀಲಾ ಭೇಟಿ ನೀಡಿದ್ದಾರೆ. ಅಲ್ಲಿನ ಪ್ರತಿಭಟನಾಕಾರರೊಂದಿಗೆ ಸೇರಿ ಆಕೆ ಸಹ ಮಾಲೀಕರ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ. ಇನ್ನೂ ಈ ಸಂಬಂಧ ಕೆಲವೊಂದು ವಿಡಿಯೋಗಳು ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನೂ ಶಕೀಲಾ ರವರ ಈ ಕಾಳಜಿಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾವುದೇ ಸಂಬಂಧವಿಲ್ಲದ ಸಾಮಾನ್ಯರಿಗಾಗಿ ಶಕೀಲಾ ರವರೇ ನೇರವಾಗಿ ಬಂದು ಬೆಂಬಲ ನೀಡುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಆಕೆಯ ಈ ಕಾರ್ಯಕ್ಕೆ ಎಲ್ಲರಿಂದ ಹೊಗಳಿಕೆ ಬರುತ್ತಿದೆ.

Most Popular

To Top