Film News

ಪ್ರಿಯಕರನಿಗೆ ಮುತ್ತಿಡುತ್ತಾ ರೊಮ್ಯಾಂಟಿಕ್ ಆಗಿ ದೀಪಾವಳಿ ಆಚರಿಸಿದ ಶ್ರುತಿ ಹಾಸನ್, ಟ್ರೆಡಿಷನಲ್ ಆಗಿ ಕಾಣಿಸಿಕೊಂಡ ಜೋಡಿ…..!

ಸ್ಟಾರ್‍ ನಟಿ ಶ್ರುತಿ ಹಾಸನ್ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳಿಂದಲೂ ಸಹ ಸಖತ್ ಸುದ್ದಿಯಾಗುತ್ತಿರುತ್ತಾರೆ. ಸುಮಾರು ಎರಡು ವರ್ಷಗಳಿಂದ ಶ್ರುತಿ ಹಾಸನ್ ಡೂಡಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದಾರೆ. ಸುಮಾರು ದಿನಗಳಿಂದ ಇಬ್ಬರೂ ಸಹಜೀವನ ಸಹ ನಡೆಸುತ್ತಿದ್ದಾರೆ. ಜೊತೆಗೆ ಮುಂಬೈನಲ್ಲಿ ಪ್ಲಾಟ್ ಒಂದನ್ನು ಖರಿದೀಸಿ ಅದರಲ್ಲೇ ಒಟ್ಟಿಗೆ ಜೀವನ ಸಾಗಿಸುತ್ತಿದ್ದಾರೆ. ‌ಇದೀಗ ದೀಪಾವಳಿ ಹಬ್ಬದಂದು ಸಂಪ್ರದಾಯಬದ್ದವಾಗಿ ರೊಮ್ಯಾಂಟಿಕ್ ಆಗಿ ಇಬ್ಬರೂ ಕಾಣಿಸಿಕೊಂಡಿದ್ದು, ಸಂಭ್ರಮದಿಂದ ಹಬ್ಬ ಆಚರಿಸಿದ್ದಾರೆ.

ಬಣ್ಣದ ಲೋಕದಲ್ಲಿ ಅನೇಕ ನಟಿಯರು ತಮ್ಮ ರಿಲೇಷನ್ ಶಿಪ್ ಬಗ್ಗೆ ಸೀಕ್ರೇಟ್ ಆಗಿಯೇ ಇಡುತ್ತಾರೆ. ಆದರೆ ಶ್ರುತಿ ಹಾಸನ್ ಮಾತ್ರ ಎಲ್ಲರಿಗಿಂತಲೂ ವಿಭಿನ್ನ ಎಂದೇ ಹೇಳಬಹುದು. ಆಕೆ ಪಾಶ್ವಾತ್ಯ ಸಂಸ್ಕೃತಿಯನ್ನು ಫಾಲೋ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ರಿಲೇಷನ್ಸ್, ಅಫೈರ್‍ ಬಗ್ಗೆ ಒಪೆನ್ ಆಗಿಯೇ ಮಾಡುತ್ತಿದ್ದಾರೆ. ಆಕೆ ತನ್ನ ಅಫೈರ್‍ ಬಗ್ಗೆ ಯಾವುದೇ ರೀತಿಯಲ್ಲೂ ನಿಗೂಡವಾಗಿ ಇಡಲಿಲ್ಲ. ಸುಮಾರು ದಿನಗಳ ಕಾಲ ಲಂಡನ್ ಮೂಲದ ಮೈಖಲ್ ಕೊರ್ಸ್ಲೆ ಎಂಬಾತನೊಂದಿಗೆ ಡೇಟಿಂಗ್ ನಡೆಸಿದರು. ಆತನೊಂದಿಗೆ ಸಹಜೀವನ ಸಹ ನಡೆಸಿದ್ದರು. ಬಳಿಕ ಆಕೆ ಆತನೊಂದಿಗೆ ಬ್ರೇಕಪ್ ಮಾಡಿಕೊಂಡರು. ಬಳಿಕ ಆಕೆ ಖ್ಯಾತ ಡೂಡಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಎಂಬಾತನೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ. ಸದಾ ಅವರಿಬ್ಬರೂ ಕ್ಲೋಜ್ ಆಗಿ ಪೊಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ದೀಪಾವಳಿ ಹಬ್ಬವನ್ನು ಶ್ರುತಿ ಹಾಸನ್ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಶ್ರುತಿ ಹಾಸನ್ ಹಾಗೂ ಆಕೆಯ ಪ್ರಿಯಕರ ಶಾಂತಾನು ಹಜಾರಿಕಾ ಇಬ್ಬರೂ ಸಂಪ್ರದಾಯ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ದೀಪಾವಳಿಯನ್ನು ರೊಮ್ಯಾಂಟಿಕ್ ಆಗಿ ಆಚರಿಸಿಕೊಂಡಿದ್ದಾರೆ. ತನ್ನ ಪ್ರಿಯಕರನನ್ನು ಮುದ್ದಾಡುತ್ತಾ ಸಂಭ್ರಮಿಸಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಶಾಂತಾನು ನನ್ನು ಹಗ್ ಮಾಡಿಕೊಂಡು ಪ್ರೀತಿಯನ್ನು ಶೋ ಮಾಡುತ್ತಾ ಶ್ರುತಿ ಪುಲ್ ಹ್ಯಾಪಿಯಾಗಿದ್ದಾರೆ. ಈ ಪೊಟೋಗಳನ್ನು ನೋಡಿದ ಅಭಿಮಾನಿಗಳೂ ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ವರ್ಷದ ಆರಂಭದಲ್ಲೇ ವಾಲ್ತೇರು ವೀರಯ್ಯ ಹಾಗೂ ವೀರಸಿಂಹಾರೆಡ್ಡಿ ಸಿನೆಮಾಗಳ ಮೂಲಕ ಸೂಪರ್‍ ಹಿಟ್ ಪಡೆದುಕೊಂಡ ಶ್ರುತಿ ಹಾಸನ್ ಸದ್ಯ ಸಲಾರ್‍ ಸಿನೆಮಾಗಾಗಿ ಕಾಯುತ್ತಿದ್ದಾರೆ. ಈ ಸಿನೆಮಾ ಇನ್ನೇನು ಕೆಲವೇ ದಿನಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ. ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಪ್ರಭಾಸ್ ಜೊತೆಗೆ ಶ್ರುತಿ ತೆರೆಹಂಚಿಕೊಂಡಿದ್ದಾರೆ.

Most Popular

To Top