ನಯನತಾರಾ ಮೇಲೆ ಲವ್ ಆಯ್ತಾ ಅಂದಿದಕ್ಕೆ ಶಾರುಕ್ ಖಾನ್ ಹೇಳೋದು ಹಂಗಾ, ಶಾಕ್ ಆದ ಫ್ಯಾನ್ಸ್….!

Follow Us :

ಬಾಲಿವುಡ್ ಬಾದ್ ಷಾ ಶಾರುಕ್ ಹಾಗೂ ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ಕಾಂಬಿನೇಷನ್ ನಲ್ಲಿ ಜವಾನ್ ಸಿನೆಮಾ ಸೆಟ್ಟೇರಿದ್ದು ಶೀಘ್ರದಲ್ಲೇ ತೆರೆಗೆ ಬರಲಿದೆ. ಸಾಮಾನ್ಯವಾಗಿ ಯಾವುದೇ ಒಂದು ಸಿನೆಮಾದ ಶೂಟಿಂಗ್ ವೇಳೆ ಸಿನೆಮಾದಲ್ಲಿನ ಕಲಾವಿದರ ನಡುವೆ ಸಲುಗೆ ಹೆಚ್ಚಾಗುತ್ತದೆ. ಕೆಲವರಿಗೆ ಪ್ರೀತಿ ಸಹ ಹುಟ್ಟುತ್ತದೆ. ಈ ಸಿನೆಮಾದಲ್ಲಿ ನಟಿಸಿದ ಶಾರುಕ್ ಹಾಗೂ ನಯನತಾರಾ ನಡುವೆ ಪ್ರೀತಿ ಹುಟ್ಟಿಕೊಂಡಿದೆಯೇ ಎಂಬ ಅನುಮಾನ ಕೆಲವರಿಗೆ ಇದೆ. ಇದೀಗ ಅಂತಹ ಗುಮಾನಿಗೆ ಶಾರುಕ್ ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ ಈ ಬಗ್ಗೆ ಶಾರುಖ್ ಹೇಳಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ದೇಶದ ಸಿನಿರಂಗದಲ್ಲಿ ಸ್ಟಾರ್‍ ನಟ ಶಾರುಕ್ ಖಾನ್ ರವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಆತ ಸಿನೆಮಾಗಳಲ್ಲಿ ಹಾಗೂ ವೈಯುಕ್ತಿಕ ಜೀವನದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಹ ಅಭಿಮಾನಿಗಳಿಗಾಗಿ ಕೊಂಚ ಸಮಯ ಮೀಸಲಿಡುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ನಡೆಸುತ್ತಾರೆ. ಚಿಟ್ ಚಾಟ್ ನಲ್ಲಿ ಅಭಿಮಾನಿಗಳಿಂದ ಬರುವಂತಹ ಅನೇಕ ಪ್ರಶ್ನೆಗಳಿಗೆ ಶಾರುಕ್ ಉತ್ತರ ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಶಾರುಖ್ ಇತ್ತಿಚಿಗೆ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ನಡೆಸಿದ್ದಾರೆ. ಈ ವೇಳೆ ಅಭಿಮಾನಿಯೋರ್ವ ವಿಚತ್ರ ಪ್ರಶ್ನೆಯೊಂದನ್ನು ಕೇಳಿದ್ದಾರೆ. ನಯನತಾರ ಜೊತೆಗೆ ನಿಮಗೆ ಲವ್ ಆಗಿದಯೇ ಎಂದು ಕೇಳಿದ್ದು, ಈ ಪ್ರಶ್ನೆಗೆ ಶಾರುಕ್ ನೀಡಿದ ಉತ್ತರ ಇದೀಗ ವೈರಲ್ ಆಗಿದೆ.

ಶಾರುಕ್ ಹಾಗೂ ನಯನತಾರಾ ಸದ್ಯ ಜವಾನ್ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆಯಿದೆ. ಈ ಸಿನೆಮಾದಲ್ಲಿ ಇಬ್ಬರೂ ನಟಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಪ್ರೀತಿ ಹುಟ್ಟಿರಬಹುದೇ ಎಂಬ ಅನುಮಾನ ಅನೇಕರಲ್ಲಿದೆ. ಈ ಕುರಿತು ಅಭಿಮಾನಿಯೋರ್ವ ಶಾರುಖ್ ರವರಿಗೆ ಟ್ವಿಟರ್‍ ನಲ್ಲಿ ನೇರವಾಗಿ ಪ್ರಶ್ನೆ ಕೇಳಿದ್ದಾರೆ. ನಯನತಾರಾ ಮೇಡಂ ಮೇಲೆ ನಿಮಗೆ ಪ್ರೀತಿ ಆಗಿದೆಯೇ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಶಾರುಕ್ ಶಾಕಿಂಗ್ ಉತ್ತರ ನೀಡಿದ್ದಾರೆ. ಸುಮ್ಮನೇ ಇರಿ ಅವರು ಇಬ್ಬರು ಮಕ್ಕಳ ತಾಯಿ ಎಂದಿದ್ದಾರೆ. ಇನ್ನೂ ಶಾರುಖ್ ನೀಡಿದ ಈ ಉತ್ತರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಜವಾನ್ ಸಿನೆಮಾ ವನ್ನು ತಮಿಳಿನ ನಿರ್ದೇಶಕ ಅಟ್ಲಿ ಸಾರಥ್ಯ ವಹಿಸಿ ನಿರ್ದೇಶನ ಮಾಡಿದ್ದಾರೆ. ಈ ಸಿನೆಮಾದಲ್ಲಿ ಶಾರುಕ್, ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ ಸಹ ನಟಿಸಿದ್ದಾರೆ. ಈ ಸಿಎನಮಾ ಸೆ.7 ರಂದು ಅದ್ದೂರಿಯಾಗಿ ತೆರೆಕಾಣಲಿದೆ. ಈ ಹಾದಿಯಲ್ಲೇ ಸಿನೆಮಾದ ಪ್ರಮೋಷನ್ ಸಹ ಜೋರಾಗಿ ನಡೆಯುತ್ತಿದೆ. ಈಗಾಗಲೇ ಬಿಡುಗಡೆಯಾದ ಹಾಡು, ಸಿನೆಮಾ ಪೋಸ್ಟರ್‍ ಗಳು ಸಿನೆಮಾದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ.