Film News

ಪೋಲ್ ಡ್ಯಾನ್ಸ್ ಮಾಡುತ್ತಾ ಕಾಣಿಸಿಕೊಂಡ ಕನ್ನಡ ನಟಿ ಭೂಮಿ ಶೆಟ್ಟಿ, ಬಿಂದಾಸ್ ಬ್ಯೂಟಿಯ ವಿಡಿಯೋ ವೈರಲ್…..!

ಮಾಜಿ ಬಿಗ್ ಬಾಸ್ ಬ್ಯೂಟಿ ಹಾಗೂ ಕಿರುತೆರೆ ನಟಿ ಭೂಮಿ ಶೆಟ್ಟಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದು, ವಿವಿಧ ರೀತಿಯ ಪೊಟೋಗಳು, ವಿಡಿಯೋಗಳನ್ನು ಹಂಚಿಕೊಂಡು ತುಂಬಾನೆ ಸುದ್ದಿಯಾಗುತ್ತಿರುತ್ತಾರೆ. ಕಿರುತೆರೆಯ ಮೂಲಕ ಫೇಂ ಪಡೆದುಕೊಂಡ ಭೂಮಿ ಶೆಟ್ಟಿ ಇದೀಗ ಹಂಚಿಕೊಂಡ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ. ಪೋಲ್ ಡ್ಯಾನ್ಸ್ ಮಾಡುತ್ತಾ ಕಾಣಿಸಿಕೊಂಡ ಭೂಮಿಯನ್ನು ಬಿಂದಾಸ್ ಬ್ಯೂಟಿ ಎಂದೇ ನೆಟ್ಟಿಗರು ಕರೆಯುತ್ತಿದ್ದಾರೆ.

ಕನ್ನಡದ ಕಿನ್ನರಿ ಸೀರಿಯಲ್ ಮೂಲಕ ಫೇಂ ಪಡೆದುಕೊಂಡ ನಟಿ ಭೂಮಿ ಶೆಟ್ಟಿ ಬಿಗ್ ಬಾಸ್ ಬಳಿಕ ಕಿರುತೆರೆಯಲ್ಲಿ ತುಂಬಾ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಸೋಷಿಯಲ್ ಮಿಡಿಯಾದಲ್ಲಂತೂ ತುಂಬಾನೆ ಸಕ್ರಿಯರಾಗಿದ್ದಾರೆ. ಆಕೆಯ ಹೊಸ ಹೊಸ ಪೊಟೋಶೂಟ್ಸ್, ಬೈಕ್ ರೈಡ್ ಮಾಡುವ ವಿಡಿಯೋಗಳು ಹಂಚಿಕೊಂಡು ಸುದ್ದಿಯಾಗುತ್ತಿರುತ್ತಾರೆ. ಇದೀಗ ಆಕೆ ಪೋಲ್ ಡ್ಯಾನ್ಸ್ ಮಾಡುತ್ತಾ ಕಾಣಿಸಿಕೊಂಡಿದ್ದು, ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ಸದ್ದು ಮಾಡುತ್ತಿದೆ. ಬ್ಲಾಕ್ ಬಾಟಂ ಹಾಗೂ ಆಲೀವ್ ಕಲರ್‍ ಸ್ಪೋರ್ಟ್ ಬ್ರಾ ಧರಿಸಿದ ಭೂಮಿ ಪೋಲ್ ಡ್ಯಾನ್ಸ್ ಕಲಿಕೆಯ ವಿಡಿಯೋ ಹಂಚಿಕೊಂಡಿದ್ದಾರೆ. ಈ ಡ್ಯಾನ್ಸ್ ಕಲಿತ ಆಕೆ ಎರಡನೇ ದಿನವೇ ಮೈಂಡ್ ಬ್ಲಾಕ್ ಆಗುವಂತಹ ಮೂವ್ ಗಳಿಂದ ನೆಟ್ಟಿಗರನ್ನು ಶಾಕ್ ಆಗುವಂತೆ ಮಾಡಿದ್ದಾರೆ.

ಇನ್ನೂ ಭೂಮಿ ಶೆಟ್ಟಿ ಈ ವಿಡಿಯೋ ಜೊತೆಗೆ ಇಂಟ್ರಸ್ಟಿಂಗ್ ವಿಚಾರವನ್ನು ಸಹ ಹಂಚಿಕೊಂಡಿದ್ದಾರೆ. ಇದು ನನ್ನ ಎರಡನೇ ತರಗತಿ ಎಂದರೇ ನೀವು ನಂಬುತ್ತೀರಾ. ನನ್ನ ಮೊದಲ ದಿನದಲ್ಲಿ ನನ್ನ ದೇಹವನ್ನು ತೋರಿಸಲು ಹಿಂಜರಿಯುತ್ತಿದ್ದೆ. ಕಾರಣ ಅದನ್ನು ನಾನು ಎಳೆಯಲು ಸಾದ್ಯವಿಲ್ಲ ಎಂದು ಭಾವಿಸಿದ್ದೆ. ಆದರೆ ನೀವು ಪೋಲ್ ಮೇಲೆ ಅಭ್ಯಾಸ ಮಾಡಲು ಶುರು ಮಾಡಿದಾಗ ಒಳಗಿನಿಂದಲೇ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ಅನುಭವ ಪಡೆಯುತ್ತೀರಿ. ಈಗ ನಾನು ಏನು ಬೇಕಾದರೂ ಮಾಡಬಲ್ಲೆ ಎಂದೂ ಸಹ ಅನ್ನಿಸುತ್ತದೆ. ಮುಂದಿನ ಕ್ಷಣದಿಂದ ಪೋಲ್ ಜೊತೆಗೆ ರೊಮ್ಯಾನ್ಸ್ ಮಾಡುತ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಭೂಮಿ ಶೆಟ್ಟಿ ಸುಲಭವಾಗಿ ಪೋಲ್ ಹಿಡಿದು ಇಡೀ ದೇಹವನ್ನು ಗಾಳಿಯಲ್ಲಿ ಸುತ್ತುತ್ತಿರುವುದು ಹಾಗೂ ಕಾಲಿನ ಸಹಾಯದಿಂದ ಪೊಲ್ ಗೆ ಸುತ್ತುವುದು ಸೇರಿದಂತೆ ಕಲವೊಂದು ಮೂಮೆಂಟ್ ಗಳನ್ನು ಕಾಣಬಹುದಾಗಿದೆ. ಜೊತೆಗೆ ಆಕೆಯ ಪೋಲ್ ಡ್ಯಾನ್ಸ್ ನೋಡಿ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದು, ಭೂಮಿ ಶೆಟ್ಟಿಯನ್ನು ಬಿಂದಾಸ್ ಬ್ಯೂಟಿ, ಸೂಪರ್‍ ಬ್ಯೂಟಿ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Most Popular

To Top