Film News

ಮಾದಕ ನಟಿ ಸಿಲ್ಕ್ ಸ್ಮಿತ ಮರಣದ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಸೀನಿಯರ್ ನಟಿ……!

ಸೌತ್ ಸಿನಿರಂಗದಲ್ಲಿ ಮಾದಕ ನಟಿ ಎಂಬ ಖ್ಯಾತಿ ಪಡೆದುಕೊಂಡು ಅನೇಕ ಸಿನೆಮಾಗಳ ಮೂಲಕ ಸದ್ದು ಮಾಡಿದ ನಟಿ ಸಿಲ್ಕ್ ಸ್ಮಿತಾ, ಗ್ರಾಮೀಣ ಭಾಗದಿಂದ ಬಂದು ಇಡೀ ಸೌತ್ ಸಿನಿರಂಗವನ್ನು ಶೇಕ್ ಮಾಡಿದ್ದರು. ಅನೇಕ ಸಿನೆಮಾಗಳಲ್ಲಿ ರೊಮ್ಯಾಂಟಿಕ್ ಪಾತ್ರಗಳ ಮೂಲಕವೇ ಸ್ಟಾರ್‍ ಡಮ್ ಪಡೆದುಕೊಂಡರು. ಭಾರಿ ನಿರೀಕ್ಷೆಯಿಂದ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ವಯಸ್ಸಿನಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟರು. ಆಕೆಯ ಮರಣದ ಮೇಲೆ ಅನೇಕ ರೂಮರ್‍ ಗಳು ಅಂದು ಕೇಳಿಬಂದವು. ಇದೀಗ ಆಕೆಯ ಮರಣದ ಬಗ್ಗೆ ಸೀನಿಯರ್‍ ನಟಿ ಕಾಕಿನಾಡ ಶ್ಯಾಮಲ ಕೆಲವೊಂದು ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ.

ದಿವಂಗತ ನಟಿ ಸಿಲ್ಕ್ ಸ್ಮಿತಾ ನಿಜವಾದ ಹೆಸರು ವಿಜಯ ಲಕ್ಷ್ಮಿ. ಆಕೆ ಗಂಡನ ಮನೆಯವರ ಕಿರುಕುಳ ತಾಳಲಾರದೆ ಚೆನೈಗೆ ಓಡಿಹೋದರು. ಕೈಯಲ್ಲಿ ಹಣವಿಲ್ಲ , ಗೊತ್ತಿರುವಂತಹವರು ಯಾರೂ ಇರಲಿಲ್ಲ. ಜೊತೆಗೆ ಆಕೆಗೆ ವಿದ್ಯೆ ಸಹ ಇರಲಿಲ್ಲ. ಆದರೆ ಬದುಕಬೇಕೆಂಬ ಕಠಿಣ ಚಲದಿಂದ ಆಕೆ ಸಿನೆಮಾ ರಂಗದತ್ತ ಮುಖ ಮಾಡಿದರು. ಹಂತಹಂತವಾಗಿ ತುಂಬಾ ಕಷ್ಟಗಳನ್ನು ಎದುರಿಸಿ ಸಿನಿಮಾಗಳಲ್ಲಿ ನಟಿಸಿದರು. ಕಡಿಮೆ ಸಮಯದಲ್ಲೇ  ಅನೇಕ ಸಿನೆಮಾಗಳಲ್ಲಿ ನಟಿಸಿದ್ದರು. ಆಕೆಯ ಕೆರಿಯರ್‍ ಉತ್ತುಂಗ ಶಿಖರಕ್ಕೆ ಹೋಗುತ್ತಿದ್ದ ಸಮಯದಲ್ಲೇ ಆಕೆ ಇಹಲೋಕ ತ್ಯೆಜಿಸಿದರು. 1996, sep 23 ರಂದು ಆಕೆ ಚೆನೈನಲ್ಲಿರುವ ತನ್ನ ನಿವಾಸದಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟರು. ಆಕೆ ಮೃತಪಟ್ಟಾಗ ಆಕೆಯ ವಯಸ್ಸು ಕೇವಲ 35 ವರ್ಷ. ಆಕೆಯ ಮರಣದ ಬಗ್ಗೆ ಅನೇಕ ರೂಮರ್‍ ಗಳು ಸಹ ಅಂದು ಕೇಳಿಬಂದವು. ಇದೀಗ ಆಕೆಯೊಂದಿಗೆ ಒಳ್ಳೆಯ ಅನುಬಂಧವಿದ್ದ ಸೀನಿಯರ್‍ ನಟಿ ಕಾಕಿನಾಡ ಶ್ಯಾಮಲ ಸಿಲ್ಕ್ ಸ್ಮಿತಾ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ ಸಿಲ್ಕ್ ಸ್ಮಿತಾ ಮರಣದ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡ ಸೀನಿಯರ್‍ ನಟಿ ಶ್ಯಾಮಲ ಸಿಲ್ಕ್ ಸ್ಮಿತಾ ಸ್ವಂತವಾಗಿ ನಿರ್ಮಾಣ ಮಾಡಿದ ಒಂದು ಸಿನೆಮಾಗೆ ನಾನು ಫೈನಾನ್ಸ್ ಸಹ ಮಾಡಿದ್ದೆ. ಆದರೆ ಆ ಸಿನೆಮಾ ಫ್ಲಾಪ್ ಆಗಿತ್ತು. ಇದರಿಂದ ಸಿಲ್ಕ್ ಸ್ಮಿತಾ ಹಣ, ಆಸ್ತಿಯನ್ನೂ ಸಹ ಕಳೆದುಕೊಂಡರು. ಸಾಲದ ಸುಳಿಯಲ್ಲಿ ಸಿಲುಕಿದ್ದಳು. ಆದರೆ ಆಕೆ ತಾನು ಮಾಡಿದ ಎಲ್ಲಾ ಸಾಲವನ್ನು ಸಹ ತೀರಿಸಿದರು. ಸಿಲ್ಕ್ ಸ್ಮಿತಾ ತುಂಬಾ ಒಳ್ಳೆಯ ವ್ಯಕ್ತಿತ್ವ ಹೊಂದಿರುವ ಮನಸ್ಸಿನವರು. ಆಕೆ ಪರದೆಯ ಮೇಲೆ ಕಾಣಿಸುವುದೇ ಬೇರೆ, ನಿಜ ಜೀವನದಲ್ಲಿ ಕಾಣಿಸುವುದೇ ಬೇರೆ. ತುಂಬ ಪ್ರಾಮಾಣಿಕರಾಗಿದ್ದರು. ಸಾಲ ತೀರಿಸಿ ಬಳಿಕ ಆಕೆ ಮತ್ತೆ ಎದ್ದು ನಿಂತರು. ಆದರೆ ಅದೇ ಸಮಯದಲ್ಲಿ ಆಕೆ ಮೃತಪಟ್ಟರು.

ಇನ್ನೂ ಆಕೆಯ ಮರಣವನ್ನು ಕೆಲವರು ಆತ್ಮಹತ್ಯೆ ಎಂತಲೂ, ಮತ್ತೆ ಕೆಲವರು ಹತ್ಯೆ ಎಂದು ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿದರು. ಆದರೆ ನಿಜ ಏನು ಎಂಬುದು ಮಾತ್ರ ಆ ದೇವರಿಗೆ ಮಾತ್ರ ಗೊತ್ತು ಎಂದು ಶ್ಯಾಮಲ ಹೇಳಿದ್ದಾರೆ. ಇನ್ನೂ ಕಳೆದ 2011 ರಲ್ಲಿ ಸಿಲ್ಕ್ ಸ್ಮಿತಾ ಬಯೋಪಿಕ್ ತೆರೆಯ ಮೇಲೆ ತರಲಾಯಿತು. ಡರ್ಟಿ ಪಿಕ್ವರ್‍ ಎಂಬ ಹೆಸರಿನಲ್ಲಿ ಸಿಲ್ಕ್ ಸ್ಮಿತಾ ಬಯೋಪಿಕ್ ತೆರೆಗೆ ತರಲಾಗಿದ್ದು, ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ನಟಿಸಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡಿತ್ತು.

Most Popular

To Top