Film News

ಬಾಲಿವುಡ್ ನ ವಾರ್-2 ಸಿನೆಮಾಗಾಗಿ ಜೂನಿಯರ್ ಎನ್.ಟಿ.ಆರ್ ಗೆ ಭಾರಿ ಸಂಭಾವನೆ?

RRR ಸಿನೆಮಾದ ಬಳಿಕ ಗ್ಲೋಬಲ್ ಲೆವೆಲ್ ನಲ್ಲಿ ಕ್ರೇಜ್ ಪಡೆದುಕೊಂಡ ಜೂನಿಯರ್‍ ಎನ್.ಟಿ.ಆರ್‍ ರವರ ಮುಂದಿನ ಸಿನೆಮಾಗಳ ಮೇಲೆ ಭಾರಿ ನಿರೀಕ್ಷೆ ಹುಟ್ಟಿದೆ. ಅದರಲ್ಲೂ RRR ಸಿನೆಮಾದ ನಾಟು ನಾಟು ಹಾಡು ಆಸ್ಕಾರ್‍ ಅವಾರ್ಡ್ ಪಡೆದುಕೊಂಡ ಬಳಿಕ ಮತಷ್ಟು ಕ್ರೇಜ್ ವರ್ಲ್ಡ್ ವೈಡ್ ಹೆಚ್ಚಾಯಿತು. ಇದೀಗ ಜೂನಿಯರ್‍ ಎನ್.ಟಿ.ಆರ್‍ ಹಾಗೂ ಕೊರಟಾಲ ಶಿವ ಕಾಂಬಿನೇಷನ್ ನಲ್ಲಿ NTR30 ಸಿನೆಮಾ ಸೆಟ್ಟೇರಿದೆ. ಇದರ ಜೊತೆಗೆ ಬಿಗ್ ಪ್ರಾಜೆಕ್ಟ್ ಆದ ಯಷ್ ರಾಜ್ ಫಿಲಂಸ್ ಸ್ಪೈ ಯೂನಿವರ್ಸ್ ನಲ್ಲೂ ಸಹ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದ್ದು, ಈ ಸಿನೆಮಾಗಾಗಿ ಎನ್.ಟಿ.ಆರ್‍ ಭಾರಿ ಮೊತ್ತದ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಖ್ಯಾತ ನಿರ್ಮಾಣ ಸಂಸ್ಥೆ ಯಷ್ ರಾಜ್ ಫಿಲಂಸ್ ನಿರ್ಮಾಣ ಮಾಡಲಿರುವ ಸ್ಪೈ ಯೂನಿವರ್ಸ್‌ನ ವಾರ್‍ ಎಂಬ ಸಿನೆಮಾ ಭಾರಿ ಸಕ್ಸಸ್ ಕಂಡಿತ್ತು. ವಾರ್‍ ಮೊದಲ ಭಾಗದಲ್ಲಿ ಬಾಲಿವುಡ್ ಸ್ಟಾರ್‍ ಗಳಾದ ಹೃತಿಕ್ ರೋಷನ್ ಹಾಗೂ ಟೈಗರ್‍ ಶ್ರಾಫ್ ನಟಿಸಿದ್ದರು. ಇದೀಗ ಅದರ ಸೀಕ್ವೆಲ್ ವಾರ್‍-2 ಸಿನೆಮಾದಲ್ಲಿ ಹೃತಿಕ್ ರೋಷನ್ ನಟಿಸಲಿದ್ದಾರೆ. ಆದರೆ ಟೈಗರ್‍ ಶ್ರಾಫ್ ಬದಲಿಗೆ ಯಂಗ್ ಟೈಗರ್‍ ಎನ್.ಟಿ.ಆರ್‍ ನಟಿಸಲಿದ್ದಾರೆ. ಈ ಸಿನೆಮಾವನ್ನು ಅಯಾನ್ ಮುಖರ್ಜಿ ನಿರ್ದೇಶನ ವಹಿಸಲಿದ್ದಾರೆ. ಈ ಹಿಂದೆ ವಾರ್‍-2 ಸಿನೆಮಾಗೆ ಪ್ರಭಾಸ್ ಹಾಗೂ ವಿಜಯ್ ದೇವರಕೊಂಡ ಹೆಸರುಗಳು ಕೇಳಿಬಂದಿದ್ದವು. ಆದರೆ ಕೊನೆಗೆ ಈ ಸಿನೆಮಾಗಾಗಿ ಜೂನಿಯರ್‍ ಎನ್.ಟಿ.ಆರ್‍ ರವರನ್ನು ಫೈನಲ್ ಮಾಡಲಾಗಿದೆ ಎನ್ನಲಾಗಿದೆ.

ಇನ್ನೂ ವಾರ್‍-2 ಸಿನೆಮಾಗಾಗಿ ಜೂನಿಯರ್‍ ಎನ್.ಟಿ.ಆರ್‍ ರವರನ್ನು ಆಯ್ಕೆ ಮಾಡಲಾಗಿದ್ದು, ಈ ಸಿನೆಮಾಗಾಗಿ ಭಾರಿ ಮೊತ್ತದ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರಂತೆ. ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಈ ಸಿನೆಮಾಗಾಗಿ ಜೂನಿಯರ್‍ ಎನ್.ಟಿ.ಆರ್‍ ಬರೊಬ್ಬರಿ ನೂರು ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇನ್ನೂ RRR ಸಿನೆಮಾಗಾಗಿ ಜೂನಿಯರ್‍ ಎನ್.ಟಿ.ಆರ್‍ 45 ಕೋಟಿ ಸಂಭಾವನೆ ಪಡೆದುಕೊಂಡಿದ್ದರು. ಈ ಸಿನೆಮಾದ ಬಳಿಕ ಅವರು ತಮ್ಮ ಸಂಭಾವನೆಯನ್ನು ನೂರು ಕೋಟಿಗೆ ಏರಿಸಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣದಿಂದ ವಾರ್‍-2 ಸಿನೆಮಾಗಾಗಿ ಜೂನಿಯರ್‍ ಎನ್.ಟಿ.ಆರ್‍ ಭಾರಿ ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಸೌತ್ ನಲ್ಲಿ ಪ್ರಭಾಸ್, ವಿಜಯ್ ದಳಪತಿ, ರಜನಿಕಾಂತ್ ರವರು ನೂರು ಕೋಟಿ ಸಂಭಾವನೆ ಪಡೆಯುವಂತಹ ನಟರಾಗಿದ್ದಾರೆ. ಬಾಲಿವುಡ್ ನಲ್ಲಂತೂ ಅನೇಕ ನಟರು ನೂರು ಕೋಟಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ನಟರ ಸಾಲಿಗೆ ಜೂನಿಯರ್‍ ಎನ್.ಟಿ.ಆರ್‍ ಸಹ ಸೇರಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಅವರ ಅಭಿಮಾನಿಗಳು ಸಹ ಪುಲ್ ಖುಷಿಯಾಗಿದ್ದಾರೆ.

Most Popular

To Top