ಸಂಬಂಧಗಳ ಬಗ್ಗೆ ಸೀನಿಯರ್ ನಟಿ ಸದಾ ಆಸಕ್ತಿಕರವಾದ ಕಾಮೆಂಟ್ಸ್, ಸಿಂಗಲ್ ಲೈಫ್ ಈಸ್ ಬೆಟರ್ ಎಂದ ನಟಿ……!

ಸೌತ್ ಸಿನಿರಂಗದಲ್ಲಿ ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ನಟಿಯರ ಸಾಲಿಗೆ ನಟಿ ಸದಾ ಸಹ ಸೇರುತ್ತಾರೆ. ಆಕೆ ಜಯಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡರು. ಈ ಸಿನೆಮಾಗಾಗಿ ಆಕೆಗೆ ಉತ್ತಮ ನಟಿ ಎಂಬ ಅವಾರ್ಡ್ ಸಹ ದೊರೆತಿದೆ. ಸೌಂದರ್ಯದ ಜೊತೆಗೆ ಅಭಿನಯದಲ್ಲೂ ಸೈ ಎನ್ನಿಸಿಕೊಂಡ ಈಕೆ ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಆಕೆ ಸಂಬಂಧಗಳ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ಅವು ವೈರಲ್ ಆಗುತ್ತಿವೆ.

ನಟಿ ಸದಾ ನಾರ್ತ್ ಮೂಲದ ನಟಿಯಾದರೂ ಸಹ ಹೆಚ್ಚಾಗಿ ಸೌತ್ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಸೌತ್ ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿದ್ದಾರೆ. ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದ ಈಕೆ ತೆಲುಗಿನ ಜಯಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಿರ್ದಶಕ ತೇಜ ಆಕೆಗೆ ಮೊದಲ ಅವಕಾಶ ನೀಡಿದರು. ಈ ಸಿನೆಮಾ ಒಳ್ಳೆಯ ಹಿಟ್ ಪಡೆದುಕೊಂಡು ಆಕೆಗೆ ಒಳ್ಳೆಯ ಕ್ರೇಜ್ ಸಹ ದೊರಕಿಸಿಕೊಟ್ಟಿತ್ತು. ಬಳಿಕ ಆಕೆ ಅಪರಿಚಿತುಡು ಎಂಬ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡರು. ಈ ಸಿನೆಮಾದ ಬಳಿಕ ಆಕೆ ಸ್ಟಾರ್‍ ನಟಿಯಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಬಳಿಕ ಬಂದಂತಹ ಸಿನೆಮಾಗಳು ಆಕೆಗೆ ಭಾರಿ ನಿರಾಸೆ ಮೂಡಿಸಿತ್ತು. ಇದರಿಂದಾಗಿ ಆಕೆ ಸಿನೆಮಾಗಳಿಂದ ದೂರ ಉಳಿದರು.

ಇನ್ನೂ ಸದಾ ಸಿನೆಮಾಗಳಿಂದ ದೂರವಾದರೂ ಸಹ ಅಭಿಮಾನಿಗಳೊಂದಿಗೆ ಸೋಷಿಯಲ್ ಮಿಡಿಯಾ ಮೂಲಕ ಟಚ್ ನಲ್ಲೇ ಇರುತ್ತಿದ್ದರು. ನಲವತ್ತರ ವಯಸ್ಸಿನ ಗಡಿಯಲ್ಲಿರುವ ಸದಾ ಇನ್ನೂ ಮದುವೆಯಾಗಿಲ್ಲ. ಅನೇಕ ಬಾರಿ ಆಕೆಗೆ ಮದುವೆಯ ಬಗ್ಗೆ ಪ್ರಶ್ನೆಗಳು ಬಂದರೂ ಆಕೆ ಉತ್ತರ ನೀಡದೇ ತಪ್ಪಿಸಿಕೊಳ್ಳುತ್ತಿದ್ದರು. ಇದೀಗ ಆಕೆ ಮದುವೆಯ ಸಂಬಂಧದ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ನಮ್ಮ ಜೀವನದಲ್ಲಿ ಕೆಲವರಿಗೆ ದೂರವಾಗಿಯೇ ಇರಬೇಕು, ಜೀವನ ತುಂಬಾ ಚಿಕ್ಕದು. ಬಲವಂತವಾಗಿ ಬಂಧಗಳಲ್ಲಿ ಇರುವುದಕ್ಕಿಂತ ಒಂಟಿಯಾಗಿ ಇರುವುದೇ ಲೆಸು ಎಂಬ ಅರ್ಥದಲ್ಲಿ ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ಸದಾ ಹಂಚಿಕೊಂಡ ಕಾಮೆಂಟ್ ಗಳು ಸಖತ್ ವೈರಲ್ ಆಗಿದೆ.

ಇನ್ನೂ ಸಿನೆಮಾಗಳಿಂದ ಕೊಂಚ ಗ್ಯಾಪ್ ತೆಗೆದುಕೊಂಡ ಬಳಿಕ ಸದಾ ವೆಬ್ ಸಿರೀಸ್ ಗಳಲ್ಲಿ ನಟಿಸುತ್ತಿದ್ದಾರೆ. ಹಲೋ ವರ್ಲ್ಡ್ ಎಂಬ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ  ಬಂದಿದ್ದರು. ಇದರ ಜೊತೆಗೆ ಆಕೆ ಕಿರುತೆರೆಯ ಮೇಲೂ ಸಹ ಸದ್ದು ಮಾಡುತ್ತಿರುತ್ತಾರೆ. ಆಕೆ ಢಿ ಎಂಬ ಡ್ಯಾನ್ಸ್ ಶೋ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಾರೆ. ಇದರ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ.