News

ಡೈವೋರ್ಸ್ ಕೊಡ್ತೀಯಾ ಇಲ್ಲ, ಅಶ್ಲೀಲ ವಿಡಿಯೋ ವೈರಲ್ ಮಾಡಬೇಕಾ ಎಂದು ಪತ್ನಿಗೆ ಬ್ಲಾಕ್ ಮೇಲ್ ಮಾಡಿ ಪತಿ, ಮುಂದೇನಾಯ್ತು ಗೊತ್ತಾ?

ಗಂಡ ಹೆಂಡತಿ ವಿಚ್ಚೇದನ ಪಡೆಯಲು ಅನೇಕರು ಕೋರ್ಟ್ ಮೊರೆ ಹೋಗುತ್ತಾರೆ. ಕೆಲವು ಕಡೆ ನ್ಯಾಯ ಪಂಚಾಯತಿಯ ಮೂಲಕ ಬೇರೆಯಾಗುತ್ತಾರೆ. ಆದರೆ ಇಲ್ಲೊಬ್ಬ ಭೂಪ ತನ್ನ ಪತ್ನಿಯೊಂದಿಗೆ ವಿಚ್ಚೇದನ ಪಡೆಯಲು ಮಾಡಿದ್ದ ಕೆಲಸವೇ ಬೇರೆಯಾಗಿದೆ. ಡಿವೋರ್ಸ್ ಕೊಡ್ತೀಯಾ ಇಲ್ಲಾ ಅಶ್ಲೀಲ ವಿಡಿಯೋ ವೈರಲ್ ಮಾಡಬೇಕಾ ಎಂದು ಪತ್ನಿಗೆ ಬ್ಲಾಕ್ ಮೈಲ್ ಮಾಡಿದ್ದಾನೆ. ಈ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ಸದ್ಯ ಆತ ಪೊಲೀಸರ ಅತಿಥಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಬೆಳಗಾವಿ ಮೂಲದ ಕಿರಣ್ ಪಾಟೀಲ್ ಎಂಬಾತ ತನ್ನ ಪತ್ನಿಯಿಂದ ದೂರವಾಗಲು ವಿಚ್ಚೇದನ ಕೊಡುವಂತೆ ಕಾಟ ಕೊಟ್ಟಿದ್ದಾನೆ. ಪತ್ನಿ ಎಷ್ಟೇ ಬುದ್ದಿವಾದ ಹೇಳಿದರೂ ಆತ ಕೇಳಿರಲಿಲ್ಲವಂತೆ. ಇದರಿಂದ ಕೋಪಗೊಂಡ ಕಿರಣ್ ಪತ್ನಿಯೊಂದಿಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ, ಪೊಟೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ಬಳಿಕ ವಿಚ್ಚೇದನ ಕೊಡ್ತೀಯಾ ಅಥವಾ ಅಶ್ಲೀಲ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಮಾಡಬೇಕಾ ಎಂದು ಪತ್ನಿಗೆ ಬೆದರಿಕೆ ಹಾಕಿದ್ದಾರೆ. ಈ ಕಾರಣದಿಂದ ಆಕೆ ಆಘಾತಕ್ಕೆ ಒಳಗಾಗಿದ್ದಾಳೆ. ಪತ್ನಿಗೆ ತುಂಬಾನೆ ಬುದ್ದಿವಾದ ಸಹ ಹೇಳಿದ್ದಾಳೆ. ಆದರೆ ಆಕೆಯ ಮಾತುಗಳನ್ನು ಪತಿ ಕಿರಣ್ ಕೇಳಲಿಲ್ಲವಂತೆ.

ಇದರಿಂದ ಆಕ್ರೋಷಗೊಂಡ ಪತ್ನಿ ತನ್ನ ಪತಿಯ ವಿರುದ್ದ ಬೆಳಗಾವಿ ಸೈಬರ್‍ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನೂ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಿರಣ್ ಪಾಟೀಲ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಪತ್ನಿಯ ದೂರಿನ ಮೇರೆಗೆ ಪೊಲೀಸರು ಕಿರಣ್ ನನ್ನು ಬಂಧಿಸಲು ಮನೆಗೆ ಬಂದಾಗ ಆತ ಆತ್ಮಹತ್ಯೆ ಮಾಡಿಕೊಳ್ಳುವ ಹೈಡ್ರಾಮಾ ಮಾಡಿದ್ದಾನೆ. ಬಳಿಕ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಜೈಲಿಗೆ ಹಾಕಿದ್ದಾರೆ. ಒಟ್ಟಿನಲ್ಲಿ ಅಗ್ನಿಸಾಕ್ಷಿಯಾಗಿ ಮದುವೆಯಾದಂತಹ ಪತಿಯೇ ಪತ್ನಿಗೆ ಬ್ಲಾಕ್ ಮೇಲ್ ಮಾಡಿದ್ದು, ನಾಗರೀಕ ಸಮಾಜ ತಲೆತಗ್ಗಿಸುವಂತಹ ಘಟನೆ ಇದಾಗಿದೆ ಎನ್ನಬಹುದು.

Most Popular

To Top