Film News

48ನೇ ವಯಸ್ಸಿನಲ್ಲಿ ಮದುವೆಯಾಗುವ ಮನಸ್ಸಾಗಿದೆ ಎಂದ ಸೀನಿಯರ್ ನಟಿ ನಗ್ಮಾ…..!

ದಶಕಗಳ ಹಿಂದೆ ತನ್ನ ಗ್ಲಾಮರ್‍ ಮೂಲಕ ಸಿನಿರಂಗವನ್ನು ಆಳಿದಂತಹ ನಟಿಯರಲ್ಲಿ ನಗ್ಮಾ ಮೊದಲಿಗರು ಎಂದೇ ಹೇಳಬಹುದಾಗಿದೆ. ಸೌತ್ ಅಂಡ್ ನಾರ್ತ್‌ನಲ್ಲಿ ಸಹ ಅನೇಕ ಬ್ಲಾಕ್ ಬ್ಲಸ್ಟರ್‍ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ನಗ್ಮಾ ಕಾಲ್ ಶೀಟ್ಸ್ ಗಾಗಿ ದೊಡ್ಡ ಪ್ರೊಡ್ಯೂಸರ್‍ ಗಳು ಹಾಗೂ ನಿರ್ದೇಶಕರು ಸಾಲುಗಟ್ಟಿ ನಿಂತಿದ್ದರು. ಜೊತೆಗೆ ಅಂದಿನ ಕಾಲದಲ್ಲೇ ನಗ್ಮಾ ಬಿಕಿನಿಯನ್ನು ಸೌತ್ ಸಿನೆಮಾಗೆ ಪರಿಚಯಿಸಿದರು. ಇನ್ನೂ ನಗ್ಮಾಗೆ 48 ವಯಸ್ಸಾದರೂ ಸಹ ಇನ್ನೂ ಮದುವೆಯಾಗಿಲ್ಲ. ಇದೀಗ ಆಕೆಗೆ ಮದುವೆಯಾಗುವ ಬಯಕೆಯಾಗಿದೆಯಂತೆ.

ಕಳೆದ 1990 ರಲ್ಲಿ ಭಾಗಿ ಎಂಬ ಹಿಂದಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಾಲಿವುಡ್ ಸಿನೆಮಾದ ಮೂಲಕ ಎಂಟ್ರಿ ಕೊಟ್ಟರು ತೆಲುಗು ಸಿನೆಮಾಗಳ ಮೂಲಕ ಸ್ಟಾರ್‍ ಡಂ ಪಡೆದುಕೊಂಡರು. ಚಿರಂಜೀವಿ, ನಾಗಾರ್ಜುನ್, ಬಾಲಕೃಷ್ಣ, ವೆಂಕಟೇಶ್ ಸೇರಿದಂತೆ ಹಲವು ಸ್ಟಾರ್‍ ಗಳ ಜೊತೆಗೆ ನಟಿಸಿ ಫೇಂ ಪಡೆದುಕೊಂಡರು. ಸಿನಿರಂಗದಲ್ಲಿ ಅನೇಕ ವರ್ಷಗಳ ಕಾಲ ಬಹುಬೇಡಿಕೆಯುಳ್ಳ ನಟಿಯಾಗಿದ್ದ ನಗ್ಮಾ ಅಂದು ಅನೇಕ ನಟರೊಂದಿಗೆ ಅಫೈರ್‍ ಕುರಿತಂತೆ ಸಹ ಸುದ್ದಿಯಾಗಿದ್ದರು. ರವಿ ಕಿಷನ್, ಗಂಗೂಲಿ, ಶರತ್ ಕುಮಾರ್‍ ಸೇರಿದಂತೆ ಅನೇಕ ಸ್ಟಾರ್‍ ಗಳ ಜೊತೆಗೆ ಆಕೆ ಡೇಟಿಂಗ್ ನಡೆಸಿದ್ದರು ಎಂಬ ರೂಮರ್‍ ಗಳು ಜೋರಾಗಿಯೇ ಕೇಳಿಬಂದಿದ್ದವು. ಜೊತೆಗೆ ಅಂದಿನ ಕಾಲದಲ್ಲಿ ಸ್ಟಾರ್‍ ಹಿರೋಯಿನ್ ಗಳಲ್ಲಿ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟಿಯಾಗಿ ಸಹ ಫೇಂ ಪಡೆದುಕೊಂಡಿದ್ದರು ಎನ್ನಲಾಗಿತ್ತು.

ಇನ್ನೂ ನಗ್ಮಾ ಗೆ ಸದ್ಯ 48 ವರ್ಷ ವಯಸ್ಸಾಗಿದೆ. ಆದರೆ ಇನ್ನೂ ಆಕೆ ಮದುವೆಯಾಗಿಲ್ಲ. ಈ ಹಿಂದೆ ನಟ ಶರತ್ ಕುಮಾರ್‍, ರವಿ ಕಿಷನ್, ಮನೋಜ್ ತಿವಾರಿ ಜೊತೆಗೆ ನಗ್ಮಾಗೆ ಅಫೈರ್‍ ಇತ್ತು ಎಂಬ ರೂಮರ್‍ ಗಳು ಕೇಳಿಬಂದಿತ್ತು. ಇದೀಗ ಆಕೆ ಮತ್ತೊಮ್ಮೆ ಮದುವೆಯ ಬಗ್ಗೆ ಸ್ಪಂದಿಸಿದ್ದಾರೆ. ಮದುವೆಯಾಗಬೇಕೆಂಬ ಬಯಕೆ ಇನ್ನೂ ನನಗೆ ಇದೆ. ಮದುವೆ ಬೇಡ ಎಂಬ ನಿಯಮ ನಾನು ಇಟ್ಟುಕೊಂಡಿಲ್ಲ. ಮದುವೆಯಾಗಬೇಕು, ಮಕ್ಕಳನ್ನು ಹೆರಬೇಕು, ನನಗೂ ಒಂದು ಕುಟುಂಬ ಬೇಕು ಎಂದು ಅನ್ನಿಸುತ್ತಿದೆ. ಕಾಲ ಕೂಡಿ ಬಂದರೇ ನನಗೂ ಮದುವೆ ಆಗುತ್ತದೆಯೇನೋ ನೋಡಬೇಕು ಎಂದು ನಗ್ಮಾ ಹೇಳಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ನಟಿಯಾಗಿ ರಿಟೈರ್‍ ಆದ ಬಳಿಕ ನಗ್ಮಾ ಅತ್ತೆಯ ಪಾತ್ರಗಳನ್ನು ಮಾಡುತ್ತಿದ್ದರು. ಅಲ್ಲರಿ ರಾಮುಡು ಸಿನೆಮಾದಲ್ಲಿ ಜೂನಿಯರ್‍ ಎನ್.ಟಿ.ಆರ್‍ ರವರಿಗೆ ಅತ್ತೆಯಾಗಿ ನಟಿಸಿದರು. 2008 ರ ಬಳಿಕ ಆಕೆ ಸಿನೆಮಾಗಳಲ್ಲಿ ನಟಿಸಲಿಲ್ಲ. ಕಳೆದ 2015 ರಲ್ಲಿ ನಗ್ಮಾ ಆಲ್ ಇಂಡಿಯಾ ಮಹಿಳಾ ಕಾಂಗ್ರೇಸ್ ಜನರಲ್ ಸೆಕ್ರೆಟರಿಯಾಗಿ ಆಯ್ಕೆಯಾಗಿದ್ದಾರೆ.

Most Popular

To Top