Film News

ರಜನಿಕಾಂತ್ ಸೇರಿದಂತೆ ಎಲ್ಲರ ಕಣ್ಣಲ್ಲಿ ನೀರು ತರಿಸಿದ ಮೀನಾ ಪುತ್ರಿ, ಎಮೋಷನಲ್ ಆಗಿ ಮಾತನಾಡಿದ ಮೀನಾ ಪುತ್ರಿ….!

ಸೌತ್ ಸಿನಿರಂಗದಲ್ಲಿ ದಶಕಗಳ ಹಿಂದೆ ಸ್ಟಾರ್‍ ನಟಿಯಾಗಿ ಫೇಂ ಪಡೆದುಕೊಂಡ ನಟಿ ಮೀನಾ ಸ್ಟಾರ್‍ ನಟರ ಅನೇಕ ಸಿನೆಮಾಗಳಲ್ಲಿ ನಟಿಸುವ ಮೂಲಕ ದೊಡ್ಡ ಅಭಿಮಾನಿ ಬಳಗ ಗಳಿಸಿಕೊಂಡಿದ್ದರು. ಸ್ಟಾರ್‍ ನಟಿಯಾಗಿ ಸೆಕೆಂಡ್ ಇನ್ನೀಂಗ್ಸ್ ನಲ್ಲೂ ಸಹ ಕೆಲವೊಂದು ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ನಟಿ ಮೀನಾ ರವರ ಪತಿ ವಿದ್ಯಾಸಾಗರ್‍ ಅನಾರೋಗ್ಯ ಕಾರಣದಿಂದ ಮೃತಪಟ್ಟಿದ್ದರು. ಬಳಿಕ ಆ ನೋವನ್ನು ಮರೆಯಲು ಸಿನೆಮಾಗಳಲ್ಲಿ ನಟಿಸುತ್ತಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಕಳೆದ 2009 ರಲ್ಲಿ ಬೆಂಗಳೂರ ಮೂಲದ ಉದ್ಯಮಿ ವಿದ್ಯಾಸಾಗರ್‍ ಎಂಬಾತನನ್ನು ಮದುವೆಯಾದರು. ಅವರಿಬ್ಬರಿಗೂ ನೈನಿಕಾ ಎಂಬ ಹೆಣ್ಣು ಮಗು ಸಹ ಇದೆ. ಇನ್ನೂ ಮೀನಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟು 40 ವರ್ಷ ಪೂರ್ಣಗೊಂಡಿದ್ದು, ಅದರ ಅಂಗವಾಗಿ ಕಳೆದ ತಿಂಗಳಲ್ಲಿ ಚೆನೈನಲ್ಲಿ ಮೀನಾ ರವರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ತಮಿಳಿನ ಅನೇಕ ಸೆಲೆಬ್ರೆಟಿಗಳು ಭಾಗಿಯಾಗಿದ್ದರು. ಈ ವೇಳೆ ಮೀನಾ ಪುತ್ರಿ ನೈನಿಕಾ ಎಮೋಷನಲ್ ಸ್ಪೀಚ್ ನೀಡಿದ್ದು, ಆ ಮಾತುಗಳನ್ನು ಕೇಳಿದ ಕಾರ್ಯಕ್ರಮದಲ್ಲಿದ್ದ ಅನೇಕರು ಕಣ್ಣೀರಾಕಿದ್ದಾರೆ. ಈ ಸಂಬಂಧ ವಿಡಿಯೋ ಒಂದನ್ನು ರಿಲೀಸ್ ಮಾಡಲಾಗಿದೆ.

ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡಿದ ನೈನಿಕಾ, ಅಮ್ಮಾ ನೀನನ್ನು ನಾನು ಈ ಸ್ಥಾನದಲ್ಲಿ ನೋಡಿ ಗರ್ವ ಪಡುತ್ತಿದ್ದೇನೆ. ನೀನು ನಟಿಯಾಗಿ ಕಷ್ಟಪಡುತ್ತಿದ್ದೀಯಾ, ಅದೇ ರೀತಿ ತಾಯಿಯಾಗಿ ನನ್ನನ್ನು ಪ್ರತಿಕ್ಷಣ ಜಾಗ್ರತೆಯಿಂದ ನೋಡಿಕೊಳ್ಳುತ್ತೀಯಾ. ಈ ಹಿಂದೆ ನಾನು ನೀನು ಶಾಪಿಂಗ್ ಮಾಲ್ ಗೆ ಹೋದಾಗ, ನಿಮಗೆ ತಿಳಿಸದೇ ನಾನು ಇನ್ನೊಂದು ಶಾಪ್ ಗೆ ಹೋಗಿ ಚಾಕ್ಲೇಟ್ ತಿನ್ನುತ್ತಾ ಕುಳಿತುಕೊಂಡಿದ್ದೆ. ಆ ವೇಳೆ ನೀನು ಎಷ್ಟು ಗಾಬರಿಯಾಗಿದ್ದೆ ಎಂಬುದು ನನಗೀಗ ಅರ್ಥವಾಗುತ್ತಿದೆ. ಅದಕ್ಕಾಗಿ ನನನ್ನು ಕ್ಷಮಿಸಿ. ತಂದೆ ಮರಣದ ಬಳಿಕ ನೀನು ಡಿಪ್ರೆಷನ್ ಗೆ ಗುರಿಯಾಗಿದ್ದೆ. ಮಾನಸಿಕವಾಗಿ ನೋವನ್ನು ಪಡುತ್ತಿದ್ದಿಯಾ. ಇನ್ನು ಮುಂದೆ ನಾನು ನಿನ್ನನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತೇನೆ. ಇನ್ನೂ ಇತ್ತಿಚಿಗೆ ನಮ್ಮ ತಾಯಿಯ ಬಗ್ಗೆ ಕೆಲವೊಂದು ಫೇಕ್ ಸುದ್ದಿಗಳು ಹರಿದಾಡುತ್ತಿವೆ. ಇನ್ನೂ ಮುಂದೆ ಆ ರೀತಿಯಾಗಿ ಬರೆಯಬೇಡಿ. ನಮ್ಮ ತಾಯಿ ಸಹ ಒಬ್ಬ ಮನುಷ್ಯಳೇ ಅಲ್ಲವೇ ಎಂದು ಎಮೋಷನಲ್ ಆಗಿದ್ದಾರೆ.

ಇನ್ನೂ ನೈನಿಕಾಳ ಈ ಎಮೋಷನಲ್ ಸ್ಪೀಚ್ ಕೇಳಿದ ರಜನಿಕಾಂತ್ ಕಣ್ಣೀರಾಕಿದ್ದಾರೆ. ಅಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿದ್ದ ಬೋನಿ ಕಪೂರ್‍, ರಾಧಿಕಾ, ಸಂಘವಿ, ಸ್ನೇಹ, ಪ್ರಭುದೇವ ಸೇರಿದಂತೆ ಇನಷ್ಟು ಕಲಾವಿದರು ಭಾಗಿಯಾಗಿದ್ದರು. ಎಲ್ಲರೂ ಮೀನಾ ಪುತ್ರಿ ನೈನಿಕಾ ಸ್ಪೀಚ್ ಗೆ ಕಣ್ಣೀರಾಕಿದ್ದಾರೆ.

Most Popular

To Top