ಆ ಸ್ಟಾರ್ ನಟನ ದ್ವೇಷದ ಕಾರಣದಿಂದ ಮೂರು ಸಿನೆಮಾಗಳನ್ನು ಕಳೆದುಕೊಂಡ್ರಂತೆ ಫೈರ್ ಬ್ರಾಂಡ್ ಕಸ್ತೂರಿ……!

Follow Us :

ಒಂದು ಕಾಲದಲ್ಲಿ ಸ್ಟಾರ್‍ ನಟಿಯಾಗಿ ಸದ್ದು ಮಾಡಿದ ಕಸ್ತೂರಿ ಇದೀಗ ಗೃಹಲಕ್ಷ್ಮಿ ಎಂಬ ತೆಲುಗು ಸೀರಿಯಲ್ ಮೂಲಕ ದೊಡ್ಡ ಅಭಿಮಾನಿ ಬಳಗ ಸಾಧಿಸಿಕೊಂಡಿದ್ದಾರೆ. ಆಕೆಯನ್ನು ಕಸ್ತೂರಿ ಇಂಡಸ್ಟ್ರಿಯಲ್ಲಿ ಫೈರ್‍ ಬ್ರಾಂಡ್ ಎಂದು ಹೇಳಲಾಗುತ್ತದೆ. ಯಾವುದೇ ವಿಚಾರವಿದ್ದರೂ ಸಹ ಆಕೆ ನೇರವಾಗಿಯೇ ತಮ್ಮ ಅಭಿಪ್ರಾಯವನ್ನು ಹೇಳಿಬಿಡುತ್ತಾರೆ.ಇದೀಗ ಆಕೆ ಓರ್ವ ಸ್ಟಾರ್‍ ನಟನ ದ್ವೇಷದಿಂದ ಮೂರು ಸಿನೆಮಾಗಳನ್ನು ಕಳೆದುಕೊಂಡೆ ಎಂದು ಹೇಳಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸೌತ್ ನಲ್ಲಿ ಫೈರ್‍ ಬ್ರಾಂಡ್ ಎಂದೇ ಕರೆಯಲಾಗುವ ನಟಿ ಕಸ್ತೂರಿ ನಟಿಸಿದ್ದು, ಕೆಲವೇ ಸಿನೆಮಾಗಳಲ್ಲಾದರೂ ಒಳ್ಳೆಯ ಖ್ಯಾತಿ ಪಡೆದುಕೊಂಡರು. ಆಕೆಯ ನಟನೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಪಡೆದುಕೊಂಡರು. ಅತೀ ಕಡಿಮೆ ವಯಸ್ಸಿನಲ್ಲೇ ಆಕೆ ಮದುವೆಯಾದರು. ಮದುವೆಯಾದ ಬಳಿಕ ಸಿನಿರಂಗದಿಂದ ದೂರವೇ ಉಳಿದಿದ್ದರು. ಸಿನೆಮಾಗಳಿಂದ ದೂರವಾದ ಬಳಿಕ ಆಕೆ ವಿದೇಶದಲ್ಲಿ ಸೆಟಲ್ ಆದರು. ಇತ್ತೀಚಿಗಷ್ಟೆ ಆಕೆ ಮತ್ತೆ ಬಣ್ಣದ ಲೋಕಕ್ಕೆ ರೀ ಎಂಟ್ರಿ ಕೊಟ್ಟರು. ಸೀರಿಯಲ್ ಹಾಗೂ ವೆಬ್ ಸಿರೀಸ್ ಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಬ್ಯುಸಿಯಾಗಿರುವ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸಿನಿರಂಗದ ಸೆಲೆಬ್ರೆಟಿಗಳ ಜೊತೆಗೆ ಸಿನಿರಂಗದ ಬಗ್ಗೆ ಸಹ ಕೆಲವೊಂದು ಕಾಮೆಂಟ್ಸ್ ಮಾಡುತ್ತಾ ಸುದ್ದಿಯಾಗುತ್ತಿರುತ್ತಾರೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಕಸ್ತೂರಿ ಶಂಕರ್‍, ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ನಾನು ಬ್ಯಾಕ್ ಟು ಬ್ಯಾಕ್ ಸಿನೆಮಾಗಳನ್ನು ಮಾಡುವ ಸಮಯದಲ್ಲಿ ಓರ್ವ ಸ್ಟಾರ್‍ ನಟನ ಮೂರು ಸಿನೆಮಾಗಳನ್ನು ಒಪ್ಪಿಕೊಂಡಿದ್ದೆ. ಅದರಲ್ಲಿ ಮೊದಲ ಸಿನೆಮಾ ಶುರುವಾಗಿತ್ತು. ಸಿನೆಮಾದ ಶೂಟಿಂಗ್ ಸಮಯದಲ್ಲಿ ನನಗೆ ಕಿರಕುಳ ಕೊಡಲು ಆರಂಭಿಸಿದ. ಆತ ತನ್ನ ಲಿಮಿಟ್ಸ್ ದಾಟಿ ವರ್ತನೆ ಮಾಡಿದ. ಇದಕ್ಕೆ ನಾನು ವಿರೋಧ ಮಾಡಿದೆ. ಈ ಕಾರಣದಿಂದ ಉಳಿದ ಎರಡೂ ಸಿನೆಮಾಗಳಿಂದ ನನ್ನನ್ನು ತೆಗೆದು ಹಾಕಿಸಿದ. ಆ ಎರಡೂ ಸಿನೆಮಾಗಳು ಮಿಸ್ ಆಗಿದ್ದಕ್ಕೆ ನನಗೆ ಏನು ನೋವು ಪಟ್ಟಿಲ್ಲ. ಅದು ಸಹ ನನ್ನ ಒಳ್ಳೆಯದಕ್ಕೆ ಎಂದುಕೊಂಡೆ. ನನಗೆ ಮನಸ್ಸಿನಲ್ಲಿ ಬೈದುಕೊಂಡು, ಮೇಲೆ ನಗುತ್ತಾ ಮಾತನಾಡಿಸುವುದು ಬರೊಲ್ಲ ಎಂದು ಹೇಳಿದ್ದು ಆಕೆಯ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.