Film News

ಗಂಭೀರ ಸ್ಥಿತಿಯಲ್ಲಿ ಸೀನಿಯರ್ ನಟ ಶರತ್ ಬಾಬು ಆರೋಗ್ಯ, ವೆಂಟಿಲೇಟರ್ ನಲ್ಲಿ ಚಿಕಿತ್ಸೆ….!

ಸೌತ್ ಸಿನಿರಂಗದ ಸೀನಿಯರ್‍ ನಟ ಶರತ್ ಬಾಬು ಅನೇಕ ಸಿನೆಮಾಗಳ ಮೂಲಕ ತನ್ನದೇ ಆದ ಅಭಿಮಾನಿಗಳನ್ನು ಪಡೆದುಕೊಂಡರು. ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸಿದ್ದಾರೆ. ಕೆಲವು ದಿನಗಳಿಂದ ಅವರ ಆರೋಗ್ಯ ಹದೆಗಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಪರಿಸ್ಥಿತಿ ತುಂಭಾ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಅವರು ವೆಂಟಿಲೇಟರ್‍ ಮೂಲಕವೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಶರತ್ ಬಾಬು ಗುರಿಯಾಗಿದ್ದರು. ಚೆನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ. ಏ.20 ರಂಉದ ಬೆಂಗಳೂರಿನಿಂದ ಹೈದರಾಬಾದ್ ಗೆ ಕರೆದುಕೊಂಡು ಗಚ್ಚಿಬೌಲಿನಲ್ಲಿ ಏಐಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶರತ್ ಬಾಬು ಮಲ್ಟಿ ಆರ್ಗಾನ್ ಫೈಲ್ಯೂರ್‍ ನಿಂದ ಬಳಲುತ್ತಿದ್ದಾರೆ. ಲಿವರ್‍, ಕಿಡ್ನಿ ಸೇರಿದಂತೆ ಅನೇಕ ಅವಯವಗಳು ಕೆಟ್ಟಿವೆಯಂತೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಸುಮಾರು ಸಿನೆಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ಪಡೆದುಕೊಂಡ ಶರತ್ ಬಾಬು ಶೀಘ್ರವಾಗಿ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ನಟ ಶರತ್ ಬಾಬು ಶ್ರೀಕಾಕುಳಂ ಜಿಲ್ಲೆಯಲ್ಲಿ ಜನಿಸಿದರು. ಆತನ ನಿಜವಾದ ಹೆಸರು ಸತ್ಯಂಬಾಬು ದೀಕ್ಷಿತುಲು ಎಂದು. ರಾಮರಾಜ್ಯಂ ಎಂಬ ಸಿನೆಮಾದ ಮೂಲಕ 1973 ರಲ್ಲಿ ಬೆಳ್ಳಿತೆರೆಗೆ ಪರಿಚಯವಾದರು. ಸುಮಾರು ಐದು ದಶಕಗಳಿಂದ ಸುಮಾರು ಇನ್ನೂರಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಹಿರೋ ಆಗಿ, ವಿಲನ್ ಆಗಿ ಹಾಗೂ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಕೊನೆಯದಾಗಿ ತೆಲುಗಿನ ಪವನ್ ಕಲ್ಯಾಣ್ ರವರ ವಕೀಲ್ ಸಾಭ್ ಸಿನೆಮಾದಲ್ಲಿ ನಟಿಸಿದ್ದರು.  ಇನ್ನೂ ಕಳೆದ 1974 ರಲ್ಲಿ ಹಾಸ್ಯ ನಟಿ ರಮಾಪ್ರಭರವರನ್ನು ಮದುವೆಯಾದರು. ಬಳಿಕ 1988 ರಲ್ಲಿ ವಿಚ್ಚೇದನ ಪಡೆದುಕೊಂಡರು. ಬಳಿಕ ಸ್ನೇಹ ನಂಬಿಯಾರ್‍ ಎಂಬಾಕೆಯನ್ನು 1990 ರಲ್ಲೊ ವಿವಾಹವಾದರು ಆಕೆಯೊಂದಿಗೆ ಸಹ 2011 ರಲ್ಲಿ ವಿಚ್ಚೇದನ ಪಡೆದುಕೊಂಡರು.

Most Popular

To Top