Film News

ಟಾಲಿವುಡ್ ನಟ ರವಿತೇಜ ವಿರುದ್ದ ಫೈರ್ ಆದ ಯಶ್ ಫ್ಯಾನ್ಸ್, ರವಿತೇಜ ಕ್ಷಮೆ ಕೋರಲಿ ಎಂದ ಯಶ್ ಫ್ಯಾನ್ಸ್…..!

ಕೆಜಿಎಫ್ ಸಿನೆಮಾದ ಮೂಲಕ ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಇಡೀ ದೇಶವ್ಯಾಪಿ ಫೇಂ ಪಡೆದುಕೊಂಡ ನಟ ರಾಕಿಂಗ್ ಸ್ಟಾರ್‍ ಯಶ್ ರವರ ಬಗ್ಗೆ ತೆಲುಗು ಮಾಸ್ ಮಹಾರಾಜ ರವಿತೇಜ ರವರು ಟೈಗರ್‍ ನಾಗೆಶ್ವರ್‍ ರಾವ್ ಸಿನೆಮಾದ ಪ್ರಮೋಷನ್ ವೇಳೆ ಹಗುರವಾಗಿ ಮಾತನಾಡಿದ್ದಾರೆ ಎಂದು ಯಶ್ ಫ್ಯಾನ್ಸ್ ರವಿತೇಜಾ ರವರ ವಿರುದ್ದ ಕಿಡಿಕಾರಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ರವಿತೇಜ ರವರು ಯಶ್ ರವರಲ್ಲಿ ಕ್ಷಮೆ ಕೋರಲಿ ಎಂಬ ಆಕ್ರೋಷ ಕೇಳಿಬರುತ್ತಿದೆ.

ತೆಲುಗು ಸ್ಟಾರ್‍ ನಟ ರವಿತೇಜ ಸದ್ಯ ಟೈಗರ್‍ ನಾಗೇಶ್ವರ್‍ ರಾವ್ ಸಿನೆಮಾದ ಪ್ರಮೋಷನ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಯಶ್ ಹೆಸರನ್ನು ರವಿತೇಜ ಬಳಸಿಕೊಂಡಿದ್ದಾರೆ. ಯಶ್ ಬಗ್ಗೆ ರವಿತೇಜ ಹಗುರವಾಗಿ ಮಾತನಾಡಿದ್ದಾರೆ ಎಂಬ ವಾದ ಜೋರಾಗಿದೆ. ಪ್ರಮೋಷನ್ ವೇಳೆ ರವಿತೇಜ ಯಶ್ ನನಗೆ ಯಾರು ಅಂತಾ ಗೊತ್ತೇ ಇರಲಿಲ್ಲ. ಕೆಜಿಎಫ್ ಸಿನೆಮಾ ಸಿಗೋಕೆ ಯಶ್ ತುಂಬಾ ಲಕ್ಕಿ ಎಂಬ ಅರ್ಥದಲ್ಲಿ ಮಾತನಾಡಿದ್ದರು. ರವಿತೇಜ ರವರ ಈ ಹೇಳಿಕೆಯೇ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಮಾತುಗಳ ಬಗ್ಗೆ ಯಶ್ ಫ್ಯಾನ್ಸ್ ರವಿತೇಜ ರವರ ಬಗ್ಗೆ ಫೈರ್‍ ಆಗುತ್ತಿದ್ದಾರೆ. ಕೆಜಿಎಫ್ ಸಿನೆಮಾಗೂ ಮುಂಚೆಯೇ ಯಶ್ ದೊಡ್ಡ ಸ್ಟಾರ್‍ ಆಗಿದ್ದರು. ಸುಮಾರು ಆರು ವರ್ಷಗಳ ಕಾಲ ಕೆಜಿಎಫ್ ಸಿನೆಮಾಗಾಗಿ ಯಶ್ ತುಂಬಾನೆ ಪರಿಶ್ರಮ ಪಟ್ಟಿದ್ದಾರೆ. ಆದ್ದರಿಂದ ಯಶ್ ರವರಲ್ಲಿ ರವಿತೇಜ ಕ್ಷಮೆ ಕೇಳಬೇಕು ಎಂದು ಯಶ್ ಫ್ಯಾನ್ಸ್ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಆಂಕರ್‍ ಪ್ರಶ್ನೆಗಳನ್ನು ಕೇಳಿದ್ದು ಅದಕ್ಕೆ ರವಿತೇಜ ಉತ್ತರಿಸಿದ್ದಾರೆ. ಪ್ರಭಾಸ್, ರಾಮ್ ಚರಣ್, ರಾಜಮೌಳಿ, ಯಶ್, ದಳಪತಿ ವಿಜಯ್ ರವರುಗಳಿಂದ ತಾವು ಏನನ್ನು ಕದಿಯುತ್ತೀರಿ ಎಂದು ಪ್ರಶ್ನೆ ಎದುರಾಗಿತ್ತು. ಅದಕ್ಕೆ ರವಿತೇಜ ಉತ್ತರಿಸುತ್ತಾ ಪ್ರಭಾಸ್ ರವರಿಂದ ಅಪಿಯರೆನ್ಸ್, ರಾಮ್ ಚರಣ್ ರವರಿಂದ ಡ್ಯಾನ್ಸ್, ರಾಜಮೌಳಿ ರವರಿಂದ ವಿಷನ್, ವಿಜಯ್ ರವರಿಂದ ಡ್ಯಾನ್ಸ್ ಕದಿಯುತ್ತೇನೆ. ಆದರೆ ನಾನು ಯಶ್ ರವರನ್ನು ಕೆಜಿಎಫ್ ಸಿನೆಮಾದಲ್ಲಿ ಮಾತ್ರ ನೋಡಿದ್ದು, ಅಂತಹ ಸಿನೆಮಾದಲ್ಲಿ ನಟಿಸಲು ಅವರು ಲಕ್ಕಿ ಆಗಿದ್ದರು ಎಂದು ರವಿತೇಜ ಹೇಳಿದ್ದರು. ಇದೇ ಮಾತು ಇದೀಗ ವಿವಾದಕ್ಕೆ ಗುರಿಯಾಗಿದೆ.

ಇನ್ನೂ ಈ ಕಾಮೆಂಟ್ ಬಗ್ಗೆ ಯಶ್ ಫ್ಯಾನ್ಸ್ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ. ರವಿತೇಜ ರವರೇ ನಿಮ್ಮ ಮೇಲೆ ನಮಗೆ ತುಂಬಾನೆ ಗೌರವವಿದೆ. ಬಳಕೆ ಮಾಡುವಂತಹ ಪದಗಳು ತುಂಬಾ ಮುಖ್ಯವಾಗಿರುತ್ತದೆ. ಅವು ನಿಮಗೆ ನೋವನ್ನು ಉಂಟು ಮಾಡಬಹುದು. ಯಶ್ ರವರ ಬಗ್ಗೆ ನಿಮ್ಮಂತಹ ಹಿರಿಯ ನಟರಿಂದ ಅಂತಹ ಮಾತು ಕೇಳಿ ತುಂಬಾ ಬೇಸರವಾಗುತತ್ತಿದೆ. ಸಾಮಾನ್ಯ ಕುಟುಂಬದಿಂದ ಬಂದಂತಹ ಯಶ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಅವರು ತುಂಬಾನೆ ಪ್ರತಿಭಾವಂತರು, ವಿನಯವಂತರು ಹಾಗೂ ಶ್ರಮಜೀವಿಯಾಗಿದ್ದಾರೆ. ಕೆಜಿಎಫ್ ಸಿನೆಮಾ ಪಡೆದಿದ್ದಕ್ಕೆ ನಾವು ಲಕ್ಕಿ ಎಂದು ಅವರು ಫ್ಯಾನ್ಸ್ ಯಶ್ ರವರನ್ನು ಕೊಂಡಾಡುತ್ತಿದ್ದಾರೆ.

Most Popular

To Top