Film News

ಸೌತ್ ಸಿನಿರಂಗದಲ್ಲಿ ಮತ್ತೋರ್ವ ನಟಿಯ ಅಬ್ಬರ? ರುಕ್ಮಿಣಿ ವಸಂತ್ ಗೆ ಹರಿದು ಬರುತ್ತಿವೆ ಭಾರಿ ಆಫರ್ಸ್, ರಶ್ಮಿಕಾ ಮಂದಣ್ಣ ರನ್ನು ಹಿಂದೆಯಾಕುತ್ತಾರಾ?

ಸದ್ಯ ಸೌತ್ ಸಿನಿರಂಗದಲ್ಲಿ ಕನ್ನಡ ನಟಿಯರ ಹವಾ ಜೋರಾಗಿಯೇ ನಡೆಯುತ್ತಿದೆ ಎನ್ನಬಹುದು. ಮೊದಲನೇ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ರಶ್ಮಿಕಾ ಮಂದಣ್ಣ ಕನ್ನಡ ಸಿನೆಮಾದ ಮೂಲಕ ಸದ್ಯ ಸೌತ್ ಅಂಡ್ ನಾರ್ತ್‌ನಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಅದೇ ರೀತಿ ಕ್ರೇಜಿ ಬ್ಯೂಟಿ ಶ್ರೀಲೀಲಾ ಸಹ ಸೌತ್ ನಲ್ಲಿ ಭಾರಿ ಬೇಡಿಕೆಯುಳ್ಳ ನಟಿಯಾಗಿ ಹೊರಹೊಮ್ಮಿದ್ದಾರೆ. ಇದೀಗ ಮತ್ತೋರ್ವ ಕನ್ನಡದ ನಟಿ ರುಕ್ಮಿಣಿ ವಸಂತ್ ಸಹ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದು, ಆಕೆ ಸಹ ಸೌತ್ ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಲಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಸದ್ಯ ಸೌತ್ ಸಿನಿರಂಗದಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ನಟಿಯರ ಹೆಸರುಗಳಲ್ಲಿ ರುಕ್ಮಿಣಿ ವಸಂತ್ ಸಹ ಒಬ್ಬಾರಾಗಿದ್ದಾರೆ. ಟಾಲಿವುಡ್ ಹಾಗೂ ಕಾಲಿವುಡ್ ಸಿನಿರಂಗದಲ್ಲಿ ಆಕೆಯ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುವಂತೆ ಆಕೆಯನ್ನು ನಿರ್ಮಾಪಕ ನಿರ್ದೇಶಕರು ಸಂಪರ್ಕ ಮಾಡುತ್ತಿದ್ದಾರೆ. ಕಳೆದ ವರ್ಷ ತೆರೆಕಂಡ ಕನ್ನಡ ಸೂಪರ್‍ ಹಿಟ್ ಸಿನೆಮಾ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಸಪ್ತಸಾಗರದಾಚೆ ಎಲ್ಲೋ ಸೈಡ್-ಬಿ ಸಿನೆಮಾದಲ್ಲೂ ಸಹ ನಟಿಸಿದ್ದು, ಆಕೆಯ ನಟನೆಯ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡರು. ಇದೀಗ ರುಕ್ಮಿಣಿ ವಸಂತ್ ಎಲ್ಲರನ್ನು ತನ್ನತ್ತ ಆಕರ್ಷಣೆ ಮಾಡುತ್ತಿದ್ದಾರೆ.

ನ್ಯಾಷನಲ್ ಕ್ರಷ್ ರಶ್ಮಿಕಾ ರವರನ್ನು ಸಹ ನಟ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಪರಿಚಯಿಸಿದರು. ಸದ್ಯ ರಶ್ಮಿಕಾ ಸೌತ್ ಅಂಡ್ ನಾರ್ತ್ ಸಿನಿರಂಗಗಳ ಬಹುಬೇಡಿಕೆ ನಟಿಯಾಗಿದ್ದಾರೆ. ಸದ್ಯ ಸ್ಟಾರ್‍ ನಟಿಯಾಗಿರುವ ರಶ್ಮಿಕಾ ಭಾರಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ಅದೇ ರಕ್ಷಿತ್ ಶೆಟ್ಟಿ ರುಕ್ಮಿಣಿ ವಸಂತ್ ರವರನ್ನೂ ಸಹ ಪರಿಚಯಿಸಿದ್ದು, ಈಕೆ ಸಹ ರಶ್ಮಿಕಾರನ್ನು ಮಿರಿಸುವಂತಹ ನಟಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಸದ್ಯ ರುಕ್ಮಿಣಿ ವಸಂತ್ ರವರಿಗೆ ಟಾಲಿವುಡ್, ಕಾಲಿವುಡ್ ನಲ್ಲಿ ಆಫರ್‍ ಗಳು ಹರಿದು ಬರುತ್ತಿವೆ. ತಮಿಳಿನ ಬಿಗ್ ಪ್ರಾಜೆಕ್ಟ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕಾಲಿವುಡ್ ಸ್ಟಾರ್‍ ನಟ ಶಿವ ಕಾರ್ತಿಕೇಯನ್ ಹಾಗೂ ಸ್ಟಾರ್‍ ನಿರ್ದೇಶಕ ಮುರುಗದಾಸನ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನೆಮಾಗೆ ರುಕ್ಮಿಣಿ ವಸಂತ್ ನಾಯಕಿಯಾಗಿದ್ದಾರೆ. ಇದರ ಜೊತೆಗೆ ಆಕೆ ವಿಜಯ್ ದೇವರಕೊಂಡ ರವರ VD12 ಹಾಗೂ ರವಿತೇಜ ಹಾಗೂ ಅನುದೀಪ್ ಕಾಂಬಿನೇಷನ್ ನಲ್ಲಿ ಸೆಟ್ಟೇರಲಿರುವ ಸಿನೆಮಾದಲ್ಲೂ ರುಕ್ಮಿಣಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಅಧಿಕೃತ ಮಾಹಿತಿಯಷ್ಟೆ ಹೊರಬರಬೇಕಿದೆ.

Most Popular

To Top