Film News

ಮೋಹಕತಾರೆ ರಮ್ಯಾ ಮೃತಪಟ್ಟಿದ್ದಾರೆಂಬ ವದಂತಿ, ಬಗ್ಗೆ ಗರಂ ಆದ್ರಾ ರಮ್ಯಾ, ಟ್ವೀಟ್ ಮೂಲಕ ಸಿಕ್ತು ಸ್ಪಷ್ಟನೆ…..!

ಮೋಹಕ ತಾರೆ ರಮ್ಯಾ ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್‍ ಅಭಿನಯದ ಅಭಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ಪಡೆದುಕೊಂಡರು. ಸುಮಾರು ವರ್ಷಗಳ ಬಳಿಕ ರಮ್ಯಾ ಇದೀಗ ಮತ್ತೆ ಬಣ್ಣದ ಲೋಕದತ್ತ ಮುಖ ಮಾಡಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದಾರೆ. ಇದೀಗ ಆಕೆ ಮೃತಪಟ್ಟಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ಸುದ್ದಿಗೆ ರಮ್ಯಾ ಸ್ಪಷ್ಟನೆ ಕೊಟ್ಟಿದ್ದಾರೆ.

ಚಂದನವನದ ಮೋಹಕ ತಾರೆ ನಟಿ ರಮ್ಯಾ ಅಭಿ ಸಿನೆಮಾದ ಮೂಲಕ ಆಕೆ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದು, ಕುತ್ತು ಎಂಬ ತಮಿಳು ಸಿನೆಮಾದ ಮೂಲಕ ಕಾಲಿವುಡ್ ಗೆ ಎಂಟ್ರಿ ಕೊಟ್ಟರು. ತಮಿಳಿನಲ್ಲಿ ಈ ಸಿನೆಮಾ ಭರ್ಜರಿಯಾಗಿ ಪ್ರದರ್ಶನಗೊಂಡಿತ್ತು. ಕಾಲಿವುಡ್ ನಲ್ಲಿ ರಮ್ಯಾರವರನ್ನು ಕುತ್ತು ರಮ್ಯಾ ಎಂತಲೇ ಕರೆಯುತ್ತಾರೆ. ಎಕ್ಸ್ ಕ್ಯೂಸ್ ಮಿ, ಆಕಾಶ್, ಅರಸು, ಜೊತೆ ಜೊತೆಯಲಿ, ಅಮೃತಧಾರೆ ಸೇರಿದಂತೆ ಅನೇಕ ಹಿಟ್ ಸಿನೆಮಾಗಳು ಆಕೆಯ ಖಾತೆಯಲ್ಲಿವೆ. ಆಕೆ 2016ರಲ್ಲಿ ತೆರೆಕಂಡ ನಾಗರಹಾವು ಸಿನೆಮಾದಲ್ಲಿ ಕಾಣಿಸಿಕೊಂಡರು. ಈ ಸಿನೆಮಾದ ಬಳಿಕ ಆಕೆ ಸುಮಾರು ಆರು ವರ್ಷಗಳ ಕಾಲ ಬಣ್ಣದ ಲೋಕದಿಂದ ದೂರವೇ ಉಳಿದಿದ್ದರು. ಆದರೆ ಇದೀಗ ಮತ್ತೆ ಆಕೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ನಿನ್ನೆಯಷ್ಟೆ ರಮ್ಯಾ ಮೃತಪಟ್ಟಿದ್ದಾರೆ ಎಂಬ ಟ್ವೀಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು.

ಇನ್ನೂ ಯರೋ ಕಿಡಿಗೇಡಿಗಳು ರಮ್ಯಾ ಮೃತಪಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದು, ಕಡಿಮೆ ಸಮಯದಲ್ಲೇ ಈ ಟ್ವೀಟ್ ಭಾರಿ ಸಂಚಲನ ಸೃಷ್ಟಿಸಿತ್ತು. ರಮ್ಯಾ ಅಭಿಮಾನಿಗಳು ಸೇರಿದಂತೆ ಅನೇಕರು ಆತಂಕಕ್ಕೆ ಗುರಿಯಾಗಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಕೆಲವರು ರಮ್ಯಾ ಸಾವಿನ ಸುಳ್ಳು ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಮ್ಯಾಗೆ ಯಾವುದೇ ತೊಂದರೆಯಿಲ್ಲ. ಆಕೆ ಆರೋಗ್ಯಕರವಾಗಿದ್ದಾರೆ. ಶೀಘ್ರದಲ್ಲೇ ಆಕೆ ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ ಎಂದು ರಮ್ಯಾ ಆಪ್ತ ಮೂಲಗಳಿಂದ ಮಾಹಿತಿ ಬಂದಿದೆ ಎಂದು ಸಹ ಹೇಳಲಾಗುತ್ತಿದೆ. ಇನ್ನೂ ತಮಿಳುನಾಡು ಕಾಂಗ್ರೇಸ್ ಐಟಿ ಸೆಲ್ ನ ಚೇರ್‍ ಮೆನ್ ಕೆ.ಟಿ.ಲಕ್ಷ್ಮೀಕಾಂತನ್ ಸಹ ರಮ್ಯಾ ಆರೋಗ್ಯವಾಗಿದ್ದಾರೆ. ಕೆಲವು ಟಿವಿ ಚಾನಲ್ ಗಳಲ್ಲಿ ಸುಳ್ಳು ಸುದ್ದಿ ಪ್ರಸಾರವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ರಮ್ಯಾ ಮೃತಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿ ಕಡಿಮೆ ಸಮಯದಲ್ಲೇ ಭಾರಿ ಸದ್ದು ಮಾಡಿತ್ತು. ಈ ಸುದ್ದಿಗೆ ರಮ್ಯಾ ಗರಂ ಆಗಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ರಮ್ಯಾ ಈ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ ಎನ್ನಲಾಗಿದೆ. ರಮ್ಯಾ ಸದ್ಯ ವಿದೇಶಿ ಪ್ರವಾಸದಲ್ಲಿದ್ದಾರೆ. ಇನ್ನೂ ರಮ್ಯಾ ಶೀಘ್ರದಲ್ಲೇ ಕನ್ನಡ ಸಿನೆಮಾಗಳ ಮೂಲಕ ಕನ್ನಡದ ಸಿನಿರಸಿಕರನ್ನು ರಂಜಿಸಲಿದ್ದಾರೆ.

Most Popular

To Top