Film News

ನನ್ನ ಮೊದಲ ಆದ್ಯತೆ ಕನ್ನಡಕ್ಕೆ, ಟಾಲಿವುಡ್ ಗೆ ಹೋದೆ ಎಂದ ಮಾತ್ರಕ್ಕೆ ಕನ್ನಡ ಮರೆಯಲ್ಲ ಎಂದ ಆಶಿಕಾ ರಂಗನಾಥ್….!

ಸದ್ಯ ಸೌತ್ ಸಿನಿರಂಗದಲ್ಲಿ ಕನ್ನಡ ನಟಿಯರ ಹವಾ ಜೋರಾಗಿದೆ ಎನ್ನಬಹುದಾಗಿದೆ. ರಶ್ಮಿಕಾ, ಪೂಜಾಹೆಗ್ಡೆ, ಶ್ರೀಲೀಲಾ ರವರು ಈಗಾಗಲೇ ತಮ್ಮ ಚಾಪನ್ನು ಮೂಡಿಸಿದ್ದಾರೆ. ಬಿಗ್ ಬಜೆಟ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿ ಕೆರಿಯರ್‍ ಸಾಗಿಸಯತ್ತಿದ್ದಾರೆ. ಈ ಸಾಲಿಗೆ ಸ್ಯಾಂಡಲ್ ವುಡ್ ನ ಮಿಲ್ಕಿ ಬ್ಯೂಟಿ ಎಂತಲೇ ಕರೆಯಲಾಗುವ ಆಶಿಕಾ ರಂಗನಾಥ್ ಸಹ ಟಾಲಿವುಡ್ ಗೆ ಅಮಿಗೋಸ್ ಎಂಬ ಸಿನೆಮಾದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಆಕೆಗೆ ಸೌತ್ ನಲ್ಲಿ ಅನೇಕ ಆಫರ್‍ ಗಳು ಹರಿದುಬರುತ್ತಿವೆ. ಆಶಿಕಾ ಇದೀಗ ತೆಲುಗು ರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಕನ್ನಡ ಸಿನೆಮಾಗಳಿಂದ ದೂರವಾಗುತ್ತಾರಾ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದು, ಇದಕ್ಕೆ ಆಶಿಕಾ ರಂಗನಾಥ್ ಕ್ಲಾರಿಟಿ ಕೊಟ್ಟಿದ್ದಾರೆ.

ಸ್ಯಾಂಡಲ್ ವುಡ್ ಬಹುಬೇಡಿಕೆ ನಟಿ ಆಶಿಕಾ ರಂಗನಾಥ್ ಅಮಿಗೋಸ್ ಸಿನೆಮಾದ ಮೂಲಕ ತೆಲುಗು ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಅಮಿಗೋಸ್ ಸಿನೆಮಾ ಸಹ ಪಾಸಿಟೀವ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದು, ಆಶಿಕಾ ಈ ಸಿನೆಮಾದ ಬಳಿಕ ಕನ್ನಡ ಸಿನೆಮಾಗಳಿಂದ ದೂರವಾಗುತ್ತಾರೆ ಎಂಬ ಅನುಮಾನಗಳು ಅನೇಕರನ್ನು ಕಾಡುತ್ತಿದ್ದು, ಇದಕ್ಕೆ ಆಶಿಕಾ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಲೈವ್ ವಿಡಿಯೋ ದಲ್ಲಿ ಆಕೆ ತಾನು ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ವಿಡಿಯೋದಲ್ಲಿ ಮಾತನಾಡುತ್ತಾ ತೆಲುಗು ಸಿನೆಮಾಗಳಲ್ಲಿ ನಟಿಸಿದ ಬಳಿಕ ಕನ್ನಡ ಮರೆಯಬೇಡಿ, ಸ್ಯಾಂಡಲ್ ವುಡ್ ಬಿಟ್ಟು ಹೋಗಬೇಡಿ ಎಂದು ಅನೇಕ ಕನ್ನಡಿಗರು ನನಗೆ ಹೇಳುತ್ತಿದ್ದಾರೆ. ನೀವೆಲ್ಲರೂ ಒಂದು ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ನನ್ನ ಮಾತೃಭಾಷೆ ಕನ್ನಡ, ನಾನು ಮಾತಾಡೋದು ಕನ್ನಡ ಭಾಷೆಯನ್ನು, ನನ್ನ ಮಾತೃ ಭಾಷೆಯನ್ನು ಮರೆಯುವುದು ಅಸಾಧ್ಯ ಎಂದಿದ್ದಾರೆ.

ಅಷ್ಟೇಅಲ್ಲದೇ ನಾನು ಹುಟ್ಟಿದಾಗಿನಿಂದ ಕನ್ನಡ ಭಾಷೆಯನ್ನು ಮಾತನಾಡಿಕೊಂಡು ಬೆಳೆದಿರುವುದು. ಇನ್ನು ಮುಂದೆ ಸಹ ಕನ್ನಡವನ್ನೇ ಮಾತನಾಡುತ್ತೇನೆ. ಕೆರಿಯರ್‍ ವಿಚಾರ ಅಂತ ಬಂದಾಗ ನಾವು ಎಲ್ಲಿ ಕೆಲಸ ಮಾಡುತ್ತಿರುತ್ತೇವೆ ಅಲ್ಲಿನ ಭಾಷೆಯನ್ನು ಕಲಿಯಬೇಕು. ಇನ್ನೂ ಅನೇಕರು ಪ್ರಬುದ್ದರಾಗಿ ಸಂದೇಶಗಳನ್ನು ಮಾಡುತ್ತಿರುತ್ತಾರೆ. ನಟ ಹಾಗೂ ನಟಿಯರ ಬಗ್ಗೆ ಕನ್ನಡಿಗರಿಗೆ ಕೊಂಚ ಹೆಚ್ಚು ಪೊಸೆಸೀವ್ ಆಗಿರುತ್ತಾರೆ. ಒಳ್ಳೆಯ ಸಿನೆಮಾಗಳನ್ನು ಮಾಡಿ ಎಲ್ಲಾ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡುತ್ತೇನೆ. ನಿಮ್ಮ ಪ್ರೀತಿ, ಅಭಿಮಾನ ನನ್ನ ಮೇಲೆ ಸದಾ ಹಿಗೇಯೆ ಇರಬೇಕು ಎಂದು ಆಶಿಕಾ ವಿಡಿಯೋ ಮೂಲಕ ತಾನು ಕನ್ನಡದ ಬಗ್ಗೆ ಹೊಂದಿರುವ ಅಭಿಮಾನದ ಬಗ್ಗೆ ತಿಳಿಸಿದ್ದಾರೆ.

ಇನ್ನೂ ನಟಿ ಆಶಿಕಾ ರಂಗನಾಥ್ ಕನ್ನಡ ಸಿನಿರಂಗದಲ್ಲಿ ಮಿಲ್ಕಿ ಬ್ಯೂಟಿ ಎಂತಲೇ ಕರೆಯಲಾಗುತ್ತದೆ. ಕನ್ನಡದಲ್ಲಿ ಅನೇಕ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಗತವೈಭವ ಎಂಬ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಇನ್ನೂ ಶರಣ್ ಜೊತೆಗೆ ಅವತಾರ ಪುರುಷ-2 ಸಿನೆಮಾದಲ್ಲೂ ನಟಿಸಲಿದ್ದಾರೆ ಎನ್ನಲಾಗುತ್ತಿತ್ತು. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಹೊರಬರಲಿದೆ.

Most Popular

To Top