Film News

ಕನ್ನಡ ಸಿನಿರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಹೃದಯಾಘಾತದಿಂದ ನಿಧನ….!

ಕನ್ನಡ ಸಿನಿರಂಗದ ಹಿರಿಯ ನಟ ಕಂ ನಿರ್ಮಾಪಕ ದ್ವಾರಕೀಶ್ ಹೃದಯಾಘಾತದಿಂದ ಇಂದು (ಏ.16) ರಂದು ನಿಧನರಾಗಿದ್ದಾರೆ. 81 ವರ್ಷದ ದ್ವಾರಕೀಶ್ ರವರ ಸಾವು ಕನ್ನಡ ಸಿನಿರಂಗಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ನೀಡಿದ ದ್ವಾರಕೀಶ್ ರವರು ಇಹಲೋಕ ತ್ಯೆಜಿಸಿದ ಸುದ್ದಿ ತಿಳಿಯುತ್ತದೇ ಅನೇಕರು ಕಂಬನಿ ಮಿಡಿದಿದ್ದಾರೆ. ಸಿನಿರಂಗದ ಸೆಲೆಬ್ರೆಟಿಗಳು ಸೇರಿದಂತೆ ರಾಜಕೀಯ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

ಕನ್ನಡ ಸಿನಿರಂಗದಲ್ಲಿ ಪ್ರಚಂಡ ಕುಳ್ಳ ಎಂದೇ ಖ್ಯಾತಿ ಪಡೆದುಕೊಂಡ ದ್ವಾರಕೀಶ್ ರವರು ನಿಧನ ಹೊಂದಿದ್ದ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ಹಿಂದೆ ಸಹ ದ್ವಾರಕೀಶ್ ರವರು ಮೃತ ಪಟ್ಟ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡಿತ್ತು. ಇದೀಗ ಈಗ ಅವರ ಕುಟುಂಬದಿಂದಲೇ ಅವರು ಮೃತಪಟ್ಟ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇನ್ನೂ ದ್ವಾರಕೀಶ್ ರವರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸಿನೆಮಾ ಸೆಲೆಬ್ರೆಟಿಗಳು, ಸಿಎಂ, ಡಿಸಿಎಂ, ಮಾಜಿ ಸಿಎಂ, ಸಚಿವರುಗಳು ಸಂತಾಪ ಸೂಚಿಸುತ್ತಿದ್ದಾರೆ. ಇನ್ನೂ ಕುಟುಂಬಸ್ಥರು ಹೇಳುವ ಪ್ರಕಾರ ದ್ವಾರಕೀಶ್ ರವರಿಗೆ ರಾತ್ರಿ ಲೂಸ್ ಮೋಷನ್ ಆಗಿತ್ತಂತೆ. ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಗ್ಗೆ ಕಾಫಿ ಕುಡಿದು ಎರಡು ಗಂಟೆಯ ಕಾಲ ಮಲಗುತ್ತೇನೆ ಎಂದು ನಿದ್ದೇ ಮಾಡಿದವರು, ಮತ್ತೆ ಎದ್ದೇ ಇಲ್ಲ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ದಿವಂಗತ ದ್ವಾರಕೀಶ್ ರವರು 1964 ರಲ್ಲಿ ವೀರ ಸಂಕಲ್ಪ ಎಂಬ ಸಿನೆಮಾದ ಕನ್ನಡ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ನಟರಾಗಿ, ಹಾಸ್ಯ ನಟರಾಗಿ, ಪೋಷಕ ನಟನಾಗಿ ಕನ್ನಡ ಸಿನಿ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಸಂಪಾದಿಸಿಕೊಂಡರು. ಪ್ರಚಂಡ ಕುಳ್ಳನಾಗಿ , ಕಿಟ್ಟಿಯಾಗಿ ಫೇಮಸ್ ಆಗಿದ್ದರು. ದ್ವಾರಕೀಶ್ ರವರು ವಿಷ್ಣುವರ್ಧನ್ ಅಭಿನಯದ ಬಹುತೇಏಕ ಸಿನೆಮಾಗಳಲ್ಲಿ ನಟಿಸಿದ್ದರು. ಬಳಿಕ ಅವರು ನಿರ್ಮಾಪಕರಾಗಿಯೂ ಸಹ ಕೆಲವೊಂದು ಸಿನೆಮಾಗಳನ್ನು ನಿರ್ದೇಶನ ಮಾಡಿದ್ದರು. ಇದೀಗ ಅವರ ನಿಧನ ಸುದ್ದಿ ಕನ್ನಡ ಸಿನಿರಂಗಕ್ಕೆ ತುಂಬಲಾರದ ನಷ್ಟ ಎಂದೇ ಹೇಳಬಹುದಾಗಿದೆ.

Most Popular

To Top