ಹಾಲಿವುಡ್ ಸಿನೆಮಾದಲ್ಲಿ ಸಮಂತಾ, ಇಂಗ್ಲೇಡ್ ಯುವಕನೊಂದಿಗೆ ರೊಮ್ಯಾನ್ಸ್ ಮಾಡಲಿದ್ದಾರಂತೆ ಸ್ಯಾಮ್…..!

Follow Us :

ಸ್ಟಾರ್‍ ನಟಿ ಸಮಂತಾ ಇದೀಗ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಕೆ ಕೊನೆಯದಾಗಿ ಶಾಕುಂತಲಂ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಡಿಜಾಸ್ಟರ್‍ ಆಗಿದೆ. ಆದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಬದಲಿಗೆ ದಿನೇ ದಿನೇ ಹೆಚ್ಚಾಗುತ್ತಿದೆ. ಸೌತ್ ನಲ್ಲಿ ಸ್ಟಾರ್‍ ನಟಿಯಾಗಿ ಮುನ್ನುಗ್ಗುತ್ತಿರುವ ಸ್ಯಾಮ್ ಫ್ಯಾಮಿಲಿ ಮ್ಯಾನ್ ವೆನ್ ಸಿರೀಸ್ ಮೂಲಕ ಬಾಲಿವುಡ್ ಗೆ ಪರಿಚಯವಾದರು. ಇದೀಗ ಹಾಲಿವುಡ್ ನಲ್ಲೂ ಸಹ ಆಕೆ ನಟಿಸುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಸಿನೆಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ.

ನಟಿ ಸಮಂತಾ ಶೀಘ್ರದಲ್ಲೇ ಚೆನೈ ಸ್ಟೋರಿ ಎಂಬ ಇಂಗ್ಲೀಷ್ ಸಿನೆಮಾದಲ್ಲಿ ನಟಿಸಲಿದ್ದಾರೆ. ಇಂಗ್ಲೇಡ್ ಮೂಲದ ಯುವಕ ಹಾಗೂ ಚೆನೈ ಮೂಲದ ಯುವತಿಯ ನಡುವೆ ನಡೆಯುವಂತಹ ಪ್ರೇಮ ಕಥೆಯನ್ನು ಈ ಸಿನೆಮಾ ಹೊಂದಿದೆ ಎನ್ನಲಾಗಿದೆ. ಈ ಸಿನೆಮಾದಲ್ಲಿ ಸಮಂತಾ ಗೆ ಜೋಡಿಯಾಗಿ ಇಂಗ್ಲೇಡ್ ಮೂಲದ ವಿವೇಕ ಕಲೋರಾ ಎಂಬಾತ ಹಿರೋ ಆಗಿ ನಟಿಸಲಿದ್ದಾರೆ. ಈ ಸಿನೆಮಾವನ್ನು ಫಿಲಿಪ್ ಜಾನ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಈ ಸಿನೆಮಾದ ಶೂಟಿಂಗ್ ಶೀಘ್ರದಲ್ಲೇ ಆರಂಭ ಸಹ ಆಗಲಿದೆ ಎಂದು ತಿಳಿದುಬಂದಿದೆ. ಇನ್ನೂ ಸಮಂತಾ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲೂ ನಟಿಸಿದ್ದು, ಸ್ಪೈ ಅಂಡ್ ಆಕ್ಷನ್ ಥ್ರಿಲ್ಲರ್‍ ಆಗಿ ಈ ಸಿರೀಸಿ ಬರಲಿದೆ. ಈ ಸಿನೆಮಾಗಾಗಿ ಸಮಂತಾ ತುಂಬಾನೆ ಕಸರತ್ತುಗಳನ್ನು ಮಾಡಿದ್ದಾರೆ. ಸಿಟಾಡೆಲ್ ಇಂಟರ್‍ ನ್ಯಾಷನಲ್ ವರ್ಷನ್ ನಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದು, ಅವರ ಪಾತ್ರದಲ್ಲಿ ಇಂಡಿಯನ್ ವರ್ಷನ್ ನಲ್ಲಿ ಸಮಂತಾ ನಟಿಸಿದ್ದಾರೆ.

ಇನ್ನೂ ಸಿಟಾಡೆಲ್ ವೆಬ್ ಸಿರೀಸ್ ಅಮೇಜಾನ್ ಪ್ರೈಂ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಎಪಿಸೋಡ್ ಗಳಂತೆ ಈ ಸಿರೀಸ್ ಸ್ಟ್ರೀಮಿಂಗ್ ಆಗುತ್ತಿದೆ. ಇನ್ನೂ ಇದೇ ಸಿರೀಸ್ ಅನ್ನು ಇಂಡಿಯನ್ ವರ್ಷನ್ ನಲ್ಲಿ ಸಮಂತಾ ನಟಿಸಿದ್ದಾರೆ. ಇದೇ ವೆಬ್ ಸಿರೀಸ್ ಅನ್ನು ಸಮಂತಾ ತೆಗೆದಿದ್ದು ಯಾಕೆ ಎಂಬ ಪ್ರಶ್ನೆಗಳು ಎದುರಾಗುತ್ತಿದೆ. ಇದಕ್ಕೆ ಕಾರಣ ಪ್ರಿಯಾಂಕಾ ಚೋಪ್ರಾ ರವರ ಸಿಟಾಡೆಲ್ ತೆಲುಗಿನಲ್ಲೂ ಸಹ ರಿಲೀಸ್ ಆಗಿದೆ. ಎಲ್ಲರೂ ಈ ಸಿರೀಸ್ ಅನ್ನು ತೆಲುಗಿನಲ್ಲಿ ನೋಡಿದ್ದಾರೆ. ಹಾಗಿರುವಾಗ ಮತ್ತೆ ಈ ಸಿರೀಸ್ ಏಕೆ ಎಂದು ಅನೇಕರು ಸಮಂತಾರವರಿಗೆ ಸೋಷಿಯಲ್ ಮಿಡಿಯಾ ಮೂಲಕ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಸಮಂತಾ ಆ ಸಿಟಾಡೆಲ್ ಗೂ ನಮ್ಮ ಸಿಟಾಡೆಲ್ ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು.

ಇನ್ನೂ ಸಮಂತಾ ಕೊನೆಯದಾಗಿ ಶಾಕುಂತಲಂ ಎಂಬ ಪೌರಾಣಿಕ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಸದ್ಯ ಆಕೆ ಶಿವಾ ನಿರ್ವಾಣ ನಿರ್ದೇಶನದಲ್ಲಿ ಖುಷಿ ಎಂಬ ಸಿನೆಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ನಟಿಸುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದ್ದು, ಅಂದುಕೊಂಡ ಸಮಯಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ.