Film News

ಚೆಕ್ ಬೌನ್ಸ್ ಕೇಸ್, ಅಮಿಷಾ ಪಟೇಲ್ ಪರ ವಕೀಲ ಗೈರು, ಕೋರ್ಟ್ ಆಕೆಗೆ ವಿಧಿಸಿದ ದಂಡ ಎಷ್ಟು ಗೊತ್ತಾ?

ಇತ್ತೀಚಿಗೆ ಅನೇಕ ನಟಿಯರು ವಿವಿಧ ಪ್ರಕರಣಗಳಲ್ಲಿ ಸಿಲುಕಿಕೊಂಡು ಕೋರ್ಟ್ ಮೆಟ್ಟಿಲುಗಳನ್ನು ತುಳಿಯುತ್ತಿದ್ದಾರೆ. ಅದರಲ್ಲೂ ಚೆಕ್ ಬೌನ್ಸ್ ಕೇಸ್ ಗಳಲ್ಲಿ ಅನೇಕ ನಟಿಯರು ಕೋರ್ಟ್ ಸುತ್ತುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ ಅಮಿಷಾ ಪಟೇಲ್ ಸಹ ಚೆಕ್ ಬೌನ್ಸ್ ಕೇಸ್ ನಲ್ಲಿ ಸಿಲುಕಿಕೊಂಡಿದ್ದು, ಜೂ.17 ರಂದು ಕೋರ್ಟ್‌ಗೆ ಹಾಜರಾಗಿದ್ದರು. ಈ ವೇಳೆ ಆಕೆ ಕ್ಯಾಮೆರಾ ಕಣ್ಣುಗಳಿಗೆ ಬೀಳದಂತೆ ಮುಖ ಮುಚ್ಚಿಕೊಂಡು ಹೋಗಿದ್ದರು. ಇದೀಗ ಆಕೆಯ ಪರ ವಕೀಲ ಗೈರು ಹಾಜರಿಯಾದ ಹಿನ್ನೆಲೆಯಲ್ಲಿ ಆಕೆಗೆ ಕೋರ್ಟ್ ದಂಡ ವಿಧಿಸಿದೆ ಎಂದು ತಿಳಿದು ಬಂದಿದೆ.

ಉದ್ಯಮಿ ಹಾಗೂ ಸಿನೆಮಾ ನಿರ್ಮಾಪಕ ಅಜಯ್ ಕುಮಾರ್‍ ಅಮಿಷಾ ಪಟೇಲ್ ವಿರುದ್ದ ಚೆಕ್ ಬೌನ್ಸ್ ಕೇಸ್ ದಾಖಲು ಮಾಡಿದ್ದರು. ಈ ಹಿಂದೆ ಸಿನೆಮಾ ನಿರ್ಮಾಣ ಮಾಡುತ್ತೇನೆ ಎಂದು ಅಮಿಷಾ ಪಟೇಲ್ ಆತನ ಬಳಿ 2.5 ಕೋಟಿ ಸಾಲ ಪಡೆದುಕೊಂಡಿದ್ದರಂತೆ. ಬಳಿಕ ಆಕೆ ಆ ಸಿನೆಮಾ ಪೂರ್ಣಗೊಳಿಸದೇ, ಆತನ ಸಾಲ ಸಹ ತೀರಿಸಲಿಲ್ಲ ಎಂದು ಕೋರ್ಟ್‌ನಲ್ಲಿ ಪ್ರಕರಣ ದಾಖಲು ಮಾಡಿದ್ದರು. ಅಸಲು ಬಡ್ಡಿ ಎರಡೂ ಸೇರಿ 3 ಕೋಟಿ ಕೊಡಿಸಿಕೊಡಬೇಕೆಂದು ಕೋರ್ಟ್ ಮೊರೆ ಹೋಗಿದ್ದರು. ಇನ್ನೂ ಕೇಸು ವಿಚಾರಣಾ ಹಂತದಲ್ಲಿರುವಾಗ ಆಕೆ ವಾಯಿದೆಗೆ ಹಾಜರಾಗಿರಲಿಲ್ಲ. ಈ ಕಾರಣದಿಂದ ಜಡ್ಜ್ ಆಕೆಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದರು. ಇದರಿಂದ ಏಪ್ರಿಲ್ ಮಾಹೆಯಲ್ಲಿ ಆಕೆ ಕೋರ್ಟ್‌ನಲ್ಲಿ ಶರಣಾಗಿದ್ದರು. ವಿಚಾರಣೆಯ ಬಳಿಕ ಆಕೆಗೆ ಷರತ್ತುಬದ್ದ ಬೈಯಲ್ ಸಹ ಮಂಜೂರು ಮಾಡಲಾಗಿತ್ತು.

ಇನ್ನೂ ಇತ್ತೀಚಿಗೆ ಈ ಕೇಸ್ ಬಗ್ಗೆ ವಿಚಾರಣೆ ನಡೆದಿದ್ದು, ಅಜಯ್ ಕುಮಾರ್‍ ಸಿಂಗ್ ಪರವಾಗಿ ಸ್ಯಾಕ್ಷ್ಯ ಹೇಳಲು ಕಂಪನಿ ವ್ಯವಸ್ಥಾಪಕ ಟಿಂಕು ಸಿಂಗ್ ಹಾಜರಾಗಿದ್ದರು. ಆದರೆ ಅಮೀಷಾ ಪಟೇಲ್ ಪರ ವಕೀಲ ಟಿಂಕು ಸಿಂಗ್ ರನ್ನು ವಿಚಾರಣೆ ನಡೆಸಬೇಕಿತ್ತು. ಆದರೆ ಆತ ಹಾಜರಾಗಿರಲಿಲ್ಲ. ಇದರಿಂದಾಗಿ ಸಾಕ್ಷಿಯನ್ನು ವಿಚಾರಣೆ ನಡೆಸಲು ಸಮಯ ಕೋರಲಾಗಿತ್ತು.ಇದರಿಂದ ಅಸಹನೆಗೆ ಗುರಿಯಾದ ಜಡ್ಜ್ ಅಮಿಷಾ ಪಟೇಲ್ ಗೆ 500 ರೂಪಾಯಿ ದಂಡ ವಿಧಿಸಿ ಮುಂದಿನ ವಿಚಾರಣೆಯನ್ನು ಆಗಸ್ಟ್ 7 ಕ್ಕೆ ಮುಂದೂಡಲಾಯಿತು ಎಂದು ತಿಳಿದು ಬಂದಿದೆ.

ಕಳೆದ 2000 ರಲ್ಲಿ ಕಹೋನಾ ಪ್ಯಾರ್‍ ಹೈ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅಮಿಷಾ ಪಟೇಲ್ ಅನೇಕ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡರು. ಕೆರಿಯರ್‍ ಆರಂಭ ಚೆನ್ನಾಗಿಯೇ ಇದ್ದರೂ ಸಹ ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಗಳನ್ನು ಸಹ ಪಡೆದುಕೊಂಡರು. ಸದ್ಯ ಆಕೆ ಆಗಾಗ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸೊಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಸದ್ಯ ಆಕೆ ಗದರ್‍ 2 ಎಂಬ ಸಿನೆಮಾದಲ್ಲಿ ಸನ್ನಿ ಡಿಯೋಲ್ ಜೊತೆಗೆ ನಟಿಸುತ್ತಿದ್ದಾರೆ. ಇನ್ನೂ ಈ ಸಿನೆಮಾ ಇದೇ ಆಗಸ್ಟ್ 11 ರಂದು ರಿಲೀಸ್ ಆಗಲಿದೆ.

Most Popular

To Top