9 ತಿಂಗಳ ಹೆತ್ತಮಗುವನ್ನು ಬಿಟ್ಟು, ದೇಶದ ಸೇವೆಗೆ ಹೊರಟ ಮಹಿಳೆ, ಮಹಿಳಾ ಜವಾನ್ ಸ್ಟೋರಿ ವೈರಲ್…..!

Follow Us :

ಇಂದು ನಾವು ಸಂತೋಷದಿಂದ ಪ್ರಾಣದ ಭಯ ಬಿಟ್ಟು ಜೀವನ ಸಾಗಿಸುತ್ತಿದ್ದೇವೆ ಎಂದರೇ ಅದು ಗಡಿ ಕಾಯುವ ಯೋಧರಿಂದ ಮಾತ್ರ. ತಮ್ಮ ಕುಟುಂಬವನ್ನು ಬಿಟ್ಟು ಗಡಿಯಲ್ಲಿ ನಮ್ಮನ್ನು ಕಾಯುವ ಕೆಲಸ ಮಾಡುತ್ತಿರುತ್ತಾರೆ. ಇದೀಗ ಬಿ.ಎಸ್‌.ಎಫ್ ಯೋಧೆಯೊಬ್ಬರು ತನ್ನ 9 ತಿಂಗಳ ಹಸುಗೂಸನ್ನು ಬಿಟ್ಟು ಸೇವೆಗೆ ತೆರಳುತ್ತಿರುವ ವಿಡಿಯೋ ಒಂದು ಎಲ್ಲರನ್ನೂ ಸೆಳೆಯುತ್ತಿದೆ. ಎಲ್ಲರ ಕಣ್ಣಲ್ಲೂ ನೀರು ಬರುವಂತೆ ಮಾಡುತ್ತಿದೆ.

ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ವಿಡಿಯೋಗಳು ಅನೇಕರಿಗೆ ಕಣ್ಣಿರು ತರಿಸುತ್ತಿರುತ್ತದೆ. ಇದೀಗ ಬಿ.ಎಸ್.ಎಫ್. ನಲ್ಲಿ ಕೆಲಸ ಮಾಡುತ್ತಿರುವ ಓರ್ವ ಮಹಿಳಾ ಕಾನಿಸ್ಟೇಬಲ್ ಮತ್ತೆ ಕೆಲಸಕ್ಕೆ ಹಾಜರಾಗುವ ವೇಳೆ ತನ್ನ 9 ತಿಂಗಳ ಹಸುಗೂಸನ್ನು ಬಿಟ್ಟು ಹೋಗುವಂತಹ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಕಂಡ ಅನೇಕರು ಕಣ್ಣೀರಾಕಿದ್ದಾರೆ. ಕುಟುಂಬಕ್ಕೆ ದೂರವಾಗಿ ಯಾವುದೇ ಸ್ವಾರ್ಥವಿಲ್ಲದೇ ದೇಶ ಸೇವೆ ಮಾಡುತ್ತಿರುವ ವೀರ ಸೈನಿಕರ ತ್ಯಾಗವನ್ನು ಎಲ್ಲರನ್ನೂ ಭಾವೋದ್ವೇಗಕ್ಕೆ ಗುರಿಮಾಡಿದೆ.

ಇದೀಗ ತನ್ನ ಮಗುವನ್ನು ಬಿಟ್ಟು ಸೇವೆಗೆ ಹೊರಟ ಬಿ.ಎಸ್.ಎಫ್ ಮಹಿಳಾ ಯೋಧಳ ವಿಡಿಯೋ ವೈರಲ್ ಆಗಿದೆ. ಟ್ವಿಟರ್‍ ನಲ್ಲಿ ಈ ವಿಡಿಯೋ ಶೇರ್‍ ಆದ ಕೂಡಲೇ ಭಾರಿ ವೀಕ್ಷಣೆ ಕಾಣುತ್ತಿದೆ. ನಮ್ಮ ಸೈನಿಕರ ಮೇಲೆ ಅಪಾರವಾದ ಪ್ರೀತಿಯನ್ನು, ಗೌರವವನ್ನು ತೋರಿಸುತ್ತಾ ಕೃತಜ್ಞತೆಗಳನ್ನು ತಿಳಿಸುತ್ತಾ ಸ್ಪಂಧಿಸುತ್ತಿದ್ದಾರೆ. ಇನ್ನೂ ಮಹಿಳಾ ಯೋಧಳಾದ ಆಕೆ ತಮ್ಮ ಮಗುವನ್ನು ಬಿಟ್ಟು ಹೋಗುವಂತಹ ವಿಡಿಯೋ ಎಲ್ಲರ ಹೃದಯ ಕಲುಕುವಂತಿದೆ. ಇನ್ನೂ ದೇಶ ಸೇವೆಗಾಗಿ ಅವರು ಎದುರಿಸುವಂತಹ ಸವಾಲುಗಳು ಹಾಗೂ ದೇಶಕ್ಕಾಗಿ ಅವರು ಮಾಡುವಂತಹ ತ್ಯಾಗಕ್ಕೆ ಎಲ್ಲಕಡೆಯಿಂದ ಗೌರವ ದೊರೆಯುತ್ತಿದೆ. ಇದೀಗ ಮಹಿಳಾ ಬಿಎಸ್‌ಎಫ್ ಸೈನಿಕಳ ವಿಡಿಯೋ ನಿಸ್ವಾರ್ಥ ಸೇವೆಗೆ ಮತ್ತೊಂದು ನಿರ್ದಶನ ಎಂದೇ ಹೇಳಬಹುದಾಗಿದೆ.