Film News

ಕೆಜಿಎಫ್ ಸ್ಟಾರ್ ಯಶ್ ಹುಟ್ಟುಹಬ್ಬದಂದು ದುರಂತ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಯಶ್ ಅಭಿಮಾನಿಗಳಲ್ಲಿ ಮನವಿ…..!

ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್‍ ಯಶ್ ರವರ ಹುಟ್ಟುಹಬ್ಬದಂದೇ ದುರಂತವೊಂದರು ಸಂಭವಿಸಿದೆ. ಯಶ್ ಹುಟ್ಟುಹಬ್ಬದ ನಿಮಿತ್ತ ಕಟೌಟ್ ಹಾಕುವ ಸಮಯದಲ್ಲಿ ಮೂವರು ಯಶ್ ಅಭಿಮಾನಿಗಳು ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೊರಣಗಿ ಎಂಬ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ದುರ್ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ  ಹನುಮಂಥರ ಹಿರಜನ, ಮುರಳಿ ನಡುವಿನಮನಿ ಹಾಗೂ ನವೀನ್ ಗಾಜಿ ರವರು ಮೃತಪಟ್ಟಿದ್ದಾರೆ.

ನಟ ಯಶ್ ಹುಟ್ಟುಹಬ್ಬದ ನಿಮಿತ್ತ ಗದಗದ ಲಂಕೇಶ್ವರ ತಾಲೂಕಿನ ಸೂರಣಗಿ ಎಂಬ ಗ್ರಾಮದಲ್ಲಿ ಕಟೌಟ್ ಹಾಕಲು ಹೋದಾಗ ಈ ದುರ್ಘಟನೆ ನಡೆದಿದೆ. ಹನುಮಂತ ಹರಿಜನ (21), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (19) ಎಂಬುವರು ವಿದ್ಯುತ್ ಶಾಕ್​ನಿಂದ ಸಾವನ್ನಪ್ಪಿದ್ದರು. ಇದೇ ಸಮಯದಲ್ಲಿ ಅಲ್ಲೇ ನಿಂತುಕೊಂಡಿದ್ದ ಮಂಜುನಾಥ್ ಹರಿಜನ, ದೀಪಕ್​ ಹರಿಜನ ಹಾಗೂ ಪ್ರಕಾಶ್​ ಮ್ಯಾಗೇರಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹತ್ತಿರದ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ಮೃತ ಅಂತ್ಯಕ್ರಿಯೆ ಗ್ರಾಮದಲ್ಲಿ ನೆರವೇರಿಸಲಾಗಿದೆ. ಯಶ್ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಬೇಕೆಂದು ಕೆಲ ಫ್ಯಾನ್ಸ್ ಪಟ್ಟು ಹಿಡಿದಿದ್ದರು. ಇನ್ನೂ ಗದಗದ ಜಿಲ್ಲಾಧಿಕಾರಿ ವೈಶಾಲಿ ಮೃತ ಯುವಕರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಈ ನಡುವೆ ಸಿಎಂ ಸಿದ್ದರಾಮಯ್ಯ ಮೃತರ ಕುಟುಂಬಸ್ಥರಿಗೆ 2 ಲಕ್ಷ ಪರಿಹಾರ ಸಹ ಘೋಷಣೆ ಮಾಡಿದ್ದಾರೆ.

ಇನ್ನೂ ಅಭಿಮಾನಿಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ವಿಶೇಷ ವಿಮಾನದ ಮೂಲಕ ಹಬ್ಬಳಿಗೆ ಬಂದ ಯಶ್, ಅಲ್ಲಿಂದ ಕಾರಿನಲ್ಲಿ ನೇರವಾಗಿ ಸೂರಣಗಿ ಗ್ರಾಮಕ್ಕೆ ತೆರಳಿದರು. ಮೃತರಾದ ಹನುಮಂತ ಹರಿಜನ, ಮುರಳಿ ನಡವಿನಮನಿ ಹಾಗೂ ನವೀನ್ ಗಾಜಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಇಂತಹ ಘಟನೆಗಳು ನಡೆಯಬಾರದು. ಈ ರೀತಿಯಾಗುತ್ತೆ ಅಂತಾನೆ ನಾನು ಸರಳವಾಗಿ ಹುಟ್ಟುಹಬ್ಬ ಆಚರಿಸಲು ತೀರ್ಮಾನ ಮಾಡಿದ್ದೇನೆ. ಮೃತರ ಕುಟುಂಬಕ್ಕೆ ಏನು ಅಗತ್ಯವೋ ಅದನ್ನು ಮಾಡುತ್ತೇವೆ. ಏನೇ ಪರಿಹಾರ ಕೊಟ್ಟರು ಮಗ ವಾಪಸ್ ಬರ್ತಾನಾ. ನನ್ನ ಮೇಲೆ ಅಭಿಮಾನ ತೋರಿಸುವುದಾದರೇ ನಿಮ್ಮ ಬದುಕಿನಲ್ಲಿ ಖುಷಿಯಾಗಿರಿ, ನಮ್ಮ ಬಗ್ಗೆ ಯೋಚನೆ ಮಾಡದೇ ಖುಷಿಯಾಗಿರಿ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಲ್ಲ ಬಿಡಿ ಎಂದು ಮನವಿ ಮಾಡಿದ್ದಾರೆ.

ಈ ರೀತಿಯ ಅಭಿಮಾನ ಬೇಡವೇ ಬೇಡ. ಕಾರಿನಲ್ಲಿ ಹೋಗುವಾಗ ಬೈಕ್ ನಲ್ಲಿ ಚೇಸ್ ಮಾಡುವುದು ಬೇಡ. ಈಗ ನಾನು ಬರುವಾಗಲೂ ಸಹ ಕೆಲವರು ಬೈಕ್ ನಲ್ಲಿ ಚೇಸ್ ಮಾಡಿಕೊಂಡು ಬರ್ತಿದ್ರು, ಕಟೌಟ್ ಕಟ್ಟಬೇಡಿ ಎಂದರೇ ಬೇಜಾರು ಮಾಡಿಕೊಳ್ಳೀರಿ. ನಾನು ನಮ್ಮ ಕುಟುಂಬದೊಂದಿಗೆ ಗೋವಾದಲ್ಲಿದ್ದೆ. ಈ ಸುದ್ದಿ ಕೇಳಿದಾಗ ತುಂಬಾನೆ ಬೇಜಾರು ಆಯ್ತು. ನನಗೆ ಹುಟ್ಟುಹಬ್ಬ ಅಂದ್ರೇನೆ ಭಯ ಆಗಿಬಿಟ್ಟಿದೆ ಎಂದು ಹೇಳಿದ್ದಾರೆ.

Most Popular

To Top