ಬಹುನಿರೀಕ್ಷಿತ UI ಸಿನೆಮಾದ ಟೀಸರ್ ಔಟ್, ಸಿನೆಮಾದ ಮೇಲೆ ದುಪ್ಪಟ್ಟು ನಿರೀಕ್ಷೆ ಹುಟ್ಟಿಸಿದ ಟೀಸರ್…..!

Follow Us :

ಸ್ಟಾರ್‍ ನಟ ಉಪೇಂದ್ರ ಸುಮಾರು ವರ್ಷಗಳ ಬಳಿಕ ನಿರ್ದೇಶನ ಮಾಡುತ್ತಿದ್ದಾರೆ. ರಿಯಲ್ ಸ್ಟಾರ್‍ ಎಂದೇ ಕರೆಯಲಾಗುವ ನಟ ಉಪೇಂದ್ರ ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ರೀತಿಯ ಸಿನೆಮಾಗಳನ್ನು ನಿರ್ದೇಶನ ಮಾಡಿದ್ದಾರೆ.  ಇದೀಗ ಅವರು ಸುಮಾರು ವರ್ಷಗಳ ಬಳಿಕ UI ಎಂಬ ಸಿನೆಮಾ ನಿರ್ದೇಶನ ಮಾಡುತ್ತಿದ್ದು, ಈ ಸಿನೆಮಾ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಸೌತ್ ನಲ್ಲೂ ಸಹ ಭಾರಿ ನಿರೀಕ್ಷೆ ಮೂಡಿಸಿದೆ. ಈ ಸಿನೆಮಾದ ಟೀಸರ್‍ ಇದೀಗ ಬಿಡುಗಡೆಯಾಗಿದ್ದು, ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿಸಿದೆ.

ನಟ ಕಂ ನಿರ್ದೇಶಕ ಉಪೇಂದ್ರ ರವರು ವಿಭಿನ್ನವಾದ ಸಿನೆಮಾಗಳನ್ನು ಮಾಡುವುದರಲ್ಲಿ ನಿಸ್ಸೀಮರು ಎಂದೇ ಹೇಳಬಹುದಾಗಿರೆ. ಸದ್ಯ UI ಸಿನೆಮಾದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನೆಮಾದ ಪೋಸ್ಟರ್‍ ಬಿಡುಗಡೆಯಾದಾಗಲೂ ಉಪೇಂದ್ರ ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದರು. ಆ ಟೈಟಲ್ ನೋಡಿ ತುಂಬಾನೆ ವಿಚಿತ್ರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ಇದೀಗ ಟೀಸರ್‍ ಬಿಡುಗಡೆಯಾಗಿದ್ದು, ಮತಷ್ಟು ವಿಚಿತ್ರವಾಗಿದೆ ಎಂದು ನೋಡುಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಟೀಸರ್‍ ಬಿಡುಗಡೆಯಾಗಿದ್ದು, ಆರಂಭದಲ್ಲೇ ಇದು AI ಪ್ರಪಂಚವಲ್ಲ, UI ಪ್ರಪಂಚ ಎಂಬ ಧ್ವನಿ ಬರುತ್ತದೆ. ಆಡಂ ಈವ್ ಎಂಬ ಎರಡು ಪಾತ್ರವಿದ್ದು, ಇದರಿಂದು ಮುಂದೆ ಹೋಗೋ ವಿಡಿಯೋ ಕಾಡಿನಿಂದ ದೊಡ್ಡ ನಗರಕ್ಕೆ ಹೋಗುತ್ತದೆ. ಅದರಲ್ಲಿ ವಿಚಿತ್ರ ಮನುಷ್ಯರಿದ್ದಾರೆ. ಜೊತೆಗೆ ದೊಡ್ಡ ದೊಡ್ಡ ಕಾರ್ಖಾನೆಗಳೂ ಸಹ ಇದೆ. ರವಿಶಂಕರ್‍ ಹಾಗೂ ಅಚ್ಯುತ್ ರವರು ತುಂಬಾನೆ ವಿಭಿನ್ನರಾಗಿ ಕಾಣಿಸಿಕೊಂಡಿದ್ದಾರೆ. ಕೆಲವರು ಮಾಸ್ಕ್ ಹಾಕಿರೋವರು, ಮತ್ತೆ ಕೆಲವರು ಜೋಕರ್‍ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಲವು ಮಂದಿ ಒಂದು ಕೇಜ್ ನಲ್ಲಿ ಬಂಧಿಯಾಗಿದ್ದು, ಕಾಪಾಡುವಂತೆ ಕಿರುಚಾಡುತ್ತಿರುತ್ತಾರೆ. ಮತ್ತೆ ಯಾರೋ ಯಾರಿಗೋ ಹೊಡೆಯುತ್ತಿರುತ್ತಾರೆ. ಅಷ್ಟರಲ್ಲಿ ಕೊಂಬುಗಳಿರುವಂತಹ ಕುದುರೆಯನ್ನು ಏರಿ ಉಪೇಂದ್ರ ಬರುತ್ತಾರೆ. ಇದನ್ನೆಲ್ಲಾ ನೋಡುತ್ತಿದ್ದರೇ ಕಲಿಯುಗದ ಕಥೆಯನ್ನು ಹೇಳುತ್ತಿದ್ದಾರೆ ಎಂಬ ಭಾವನೆ ಮೂಡುತ್ತದೆ. ನಗರೀಕರಣ, ಕೈಗಾರೀಕರಣಗಳ ಮೂಲಕ ಪ್ರಪಂಚ ಎತ್ತ ಸಾಗುತ್ತಿದೆ. ಅರಣ್ಯ, ಬೆಟ್ಟ-ಗುಡ್ಡ ಮಾನವನ ದುರಾಸೆಗೆ ನಾಶವಾಗುತ್ತಿದ್ದು, ಅದನ್ನು ತಡೆಯಲು ಕಲ್ಕಿ ರೂಪದಲ್ಲಿ ಉಪೇಂದ್ರ ಬರುತ್ತಾನೆ. ಕೆಟ್ಟದನ್ನು ಅಳಿಸಿ, ಒಳ್ಳೆಯದನ್ನು ಉಳಿಸುತ್ತಾನೆ ಎಂಬ ಥೀಮ್ ನಲ್ಲಿ ಈ ಸಿನೆಮಾ ಮಾಡಿರುತ್ತಾರೆ ಉಪೇಂದ್ರ ಎಂದು ಹೇಳಲಾಗುತ್ತಿದೆ. ಆದರೆ ಉಪೇಂದ್ರ ಮಾತ್ರ ಯಾವ ರೀತಿಯ ಸಿನೆಮಾ ಮಾಡುತ್ತಾರೆ ಎಂಬುದನ್ನು ಊಹಿಸುವುದು ಕಷ್ಟಸಾಧ್ಯ ಎಂದೇ ಹೇಳಬಹುದಾಗಿದೆ. ಇನ್ನೂ ಟೀಸರ್‍ ನೋಡಿದ ಬಳಿಕ ಸಿನೆಮಾದ ಮೇಲೆ ನಿರೀಕ್ಷೆ ದುಪ್ಪಟ್ಟು ಆಗಿದೆ ಎನ್ನಲಾಗುತ್ತಿದೆ.