Film News

ಭಾರಿ ಬಜೆಟ್ ನಲ್ಲಿ ಪ್ಯಾನ್ ಇಂಡಿಯಾ ಸಿನೆಮಾ, ರಿಷಭ್ – ವಿಜಯ್ ದೇವರಕೊಂಡ ಕಾಂಬಿನೇಷನಲ್ಲಿ ಕ್ರೇಜಿ ಸಿನೆಮಾ….!

ಇತ್ತೀಚಿಗೆ ಸಿನರಿಂಗದಲ್ಲಿ ಭಾಷಾ ಬೇಧವಿಲ್ಲದೇ ಮಲ್ಟಿ ಸ್ಟಾರರ್‍ ಸಿನೆಮಾಗಳು ಸೆಟ್ಟೇರುತ್ತಿವೆ. ಕ್ರೇಜಿ ಕಾಂಬಿನೇಷನ್ ಗಳು ಸಿನಿರಸಿಕರನ್ನು ಆಶ್ಚರ್ಯಪಡಿಸುತ್ತಿವೆ. ಇದೀಗ ಸೌತ್ ಸಿನಿರಸಿಕರು ಆಶ್ಚರ್ಯಪಡುವಂತಹ ಮತ್ತೊಂದು ಕ್ರೇಜಿ ಕಾಂಬಿನೇಷನ್ ಸೆಟ್ಟೇರಲಿದೆ. ಸ್ಯಾಂಡಲ್ ವುಡ್ ಸ್ಟಾರ್‍ ಡೈರೆಕ್ಟರ್‍ ಕಂ ಹಿರೋ ರಿಷಭ್ ಶೆಟ್ಟಿ ಹಾಗೂ ತೆಲುಗು ರೌಡಿ ಹಿರೋ ವಿಜಯರ್‍ ದೇವರಕೊಂಡ ಕಾಂಬಿನೇಷನ್ ನಲ್ಲಿ ಭಾರಿ ಬಜೆಟ್ ನಲ್ಲಿ ಸಿನೆಮಾ ಒಂದು ಬರಲಿದೆ ಎಂಬ ಸುದ್ದಿಯೊಂದು ಸೌತ್ ಸಿನಿರಂಗದಲ್ಲಿ ಕೇಳಿಬರುತ್ತಿದೆ.

ಈಗಾಗಲೇ ಸೌತ್ ಅಂಡ್ ನಾರ್ತ್‌ನಲ್ಲೂ ಅನೇಕ ಸ್ಟಾರ್‍ ಗಳ ಕಾಂಬಿನೇಷನ್ ನಲ್ಲಿ ಸಿನೆಮಾಗಳು ಮೂಡಿಬರುತ್ತಿವೆ. ಜೊತೆಗೆ ಪ್ಯಾನ್ ಇಂಡಿಯಾ ಸಿನೆಮಾಗಳು ಬಂದ ಮೇಲಂತೂ ಭಾಷಬೇದವಿಲ್ಲದೇ ಮಲ್ಟಿ ಸ್ಟಾರರ್‍ ಸಿನೆಮಾಗಳು ಬರುತ್ತಿವೆ. ಕನ್ನಡದಲ್ಲಿ ಈಗಾಗಲೇ ಅನೇಕ ಪ್ಯಾನ್ ಇಂಡಿಯಾ ಸಿನೆಮಾಗಳು ಬಂದಿದ್ದು, ಭಾರಿ ಮೆಚ್ಚುಗೆ ಸಹ ಪಡೆದುಕೊಂಡಿವೆ. ಕೆಜಿಎಫ್ ಸಿನೆಮಾದ ಬಳಿಕವಂತೂ ಇಡೀ ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಸಹ ಅದರ ಹವಾ ಹರಡಿತ್ತು. ಇನ್ನೂ ರಿಷಭ್ ಶೆಟ್ಟಿಯವರ ಕಾಂತಾರ ಸಿನೆಮಾ ಸಹ ಪ್ಯಾನ್ ಇಂಡಿಯಾ ಸಿನೆಮಾ ಆಗಿ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಈ ಸಿನೆಮಾದ ಬಳಿಕ ರಿಷಭ್ ರವರಿಗೆ ಅನೇಕ ಆಫರ್‍ ಗಳೂ ಸಹ ಹರಿದುಬಂದಿವೆ. ಈ ಹಾದಿಯಲ್ಲೇ ಟಾಲಿವುಡ್ ಸ್ಟಾರ್‍ ನಿರ್ಮಾಪಕ ಅಲ್ಲು ಅರವಿಂದ್ ರವರೂ ಸಹ ಸಾರ್ವಜನಿಕವಾಗಿಯೇ ಅವರ ಮುಂದಿನ ಸಿನೆಮಾದ ಆಫರ್‍ ಸಹ ನೀಡಿದ್ದರು. ಇದೀಗ ಹೊಸ ಸುದ್ದಿಯೊಂದು ಕೇಳಿಬರುತ್ತಿದೆ.

ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿಯವರ ಕಾಂತಾರ ಸಿನೆಮಾ ಭಾರಿ ಸಕ್ಸಸ್ ಕಂಡು ಕೊಂಡ ಹಿನ್ನೆಲೆಯಲ್ಲಿ ಅವರ ಮುಂದಿನ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿದೆ. ಆದರೆ ಅವರ ಮುಂದಿನ ಸಿನೆಮಾದ ಬಗ್ಗೆ ಇನ್ನೂ ಅಧಿಕೃತವಾದ ಮಾಹಿತಿ ಇಲ್ಲ ಆದರೆ ಕಾಂತಾರ ಪ್ರೀಕ್ವೆಲ್ ಗಾಗಿ ಲೊಕೇಷನ್ ಹುಡುಕಾಟ ಹಾಗೂ ಕಥೆ ಸಹ ಸಿದ್ದಪಡಿಸುತ್ತಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಈ ನಡುವೆ ಸೌತ್ ಸಿನಿರಂಗದಿಂದ ಸುದ್ದಿಯೊಂದು ಕೇಳಿಬರುತ್ತಿದೆ. ರಿಷಭ್ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್ ನಲ್ಲಿ ಸಿನೆಮಾ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಆದರೆ ರಿಷಭ್ ನಿರ್ದೇಶನದಲ್ಲಿ ವಿಜಯ್ ನಟಿಸುತ್ತಾರಾ ಅಥವಾ ರಿಷಭ್ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ನಟಿಸುವ ಸಿನೆಮಾ ಬರಲಿದೆಯಾ ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಇನ್ನೂ ಈ ಬಗ್ಗೆ ಎಲ್ಲೂ ಸಹ ಅಧಿಕೃತ ಪ್ರಕಟನೆ ಸಹ ಇಲ್ಲ. ಆದರೆ ಈ ಸುದ್ದಿ ಮಾತ್ರ ಸೌತ್ ಸಿನಿವಲಯರಲ್ಲಿ ಸಖತ್ ವೈರಲ್ ಆಗುತ್ತಿದೆ.

ಸದ್ಯ ವಿಜಯ್ ದೇವರಕೊಂಡ ಖುಷಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಸುಮಾರು ದಿನಗಳ ಹಿಂದೆಯೇ ಈ ಸಿನೆಮಾದ ಶೂಟಿಂಗ್ ಆರಂಭವಾಗಿತ್ತು. ಕೆಲವೊಂದು ಕಾರಣಗಳಿಂದ ಸಿನೆಮಾದ ಶೂಟಿಂಗ್ ಸ್ಥಗಿತಗೊಂಡಿತ್ತು. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಸಮಂತಾ ಸಹ ಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಶೂಟೀಂಗ್ ಸಹ ಭರದಿಂದ ಸಾಗಿದೆ. ಇದೀಗ ರಿಷಭ್ ಹಾಗೂ ವಿಜಯ್ ಕಾಂಬಿನೇಷನ್ ನಲ್ಲಿ ಸಿನೆಮಾ ಬರಲಿದೆ ಎಂಬ ಸುದ್ದಿ ಮಾತ್ರ ವಿವಿಧ ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.

Most Popular

To Top