Film News

ಸೋಷಿಯಲ್ ಮಿಡಿಯಾ ಸ್ಟಾರ್ ಅನ್ನು ನಟಿ ಮಾಡಿದ ವರ್ಮಾ, ರೀಲ್ಸ್ ಮಾಡುವ ಹುಡುಗಿಯೊಂದಿಗೆ ಸಿನೆಮಾ ಘೋಷಣೆ ಮಾಡಿದ ವರ್ಮಾ….!

ಕೆಲವು ದಿನಗಳ ಹಿಂದೆಯಷ್ಟೆ ಸೋಷಿಯಲ್ ಮಿಡಿಯಾದಲ್ಲಿ ಕೇರಳ ಮೂಲದ ಯುವತಿಯೊಬ್ಬರು ರೀಲ್ಸ್ ಮಾಡಿ ತುಂಬಾನೆ ಫೇಮಸ್ ಆಗಿದ್ದರು. ಆಕೆಯ ರೀಲ್ಸ್ ಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಹ ಫಿದಾ ಆಗಿ ಆಕೆಯೊಂದಿಗೆ ಸಿನೆಮಾ ಮಾಡಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ಇದೀಗ ಆಕೆಯೊಂದಿಗೆ ಸಿನೆಮಾ ಮಾಡುತ್ತಿದ್ದು, ಈ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್‍ ರಿಲೀಸ್ ಮಾಡಿದ್ದು, ಈ ಸಿನೆಮಾದ ಪೋಸ್ಟರ್‍ ತುಂಬಾನೆ ವಿಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ.

ಕೇರಳ ಮೂಲದ ಯುವತಿಯೊಬ್ಬರು ಸೀರೆಯನ್ನು ಧರಿಸಿ ವಿವಿಧ ರೀತಿಯ ರೀಲ್ಸ್ ಗಳನ್ನು ಮಾಡಿದ್ದಾರೆ. ಯುವತಿ ಸೀರೆಯಲ್ಲಿ ಮಾಡಿದ ರೀಲ್ಸ್ ಕಂಡ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇಂಪ್ರೆಸ್ ಆಗಿದ್ದರು. ಈ ಸಂಬಂಧ ಆ ಯುವತಿಯ ರೀಲ್ಸ್ ಬಗ್ಗೆ ಮಾತನಾಡಿ ಆರ್‍.ಜಿ.ವಿ ಸೀರೆ ಎಷ್ಟು ಸುಂದರವಾಗಿರುತ್ತದೆ ಎಂದು ಆಕೆಯನ್ನು ನೋಡಿದ ಮೇಲೆ ತಿಳಿಯಿತು. ಎಲ್ಲರೂ ಸೀರೆ ಸುಂದರವಾಗಿರುತ್ತದೆ ಎಂದು ಹೇಳುತ್ತಿದ್ದರು. ಆದರೆ ನಾನು ಅದನ್ನು ನಂಬಿರಲಿಲ್ಲ. ಆದರೆ ಈ ವಿಡಿಯೋ ನೋಡಿದ ಬಳಿಕ ನನ್ನ ನಿರ್ಧಾರ ಬದಲಾಗಿದೆ. ಯಾರಾದರೂ ಆಕೆಯನ್ನು ಹುಡುಕಿಕೊಡಿ. ಆಕೆಯೊಂದಿಗೆ ಸೀರೆ ಎಂಬ ಸಿನೆಮಾ ಮಾಡಲು ನಿರ್ಧರಿಸಿದ್ದೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಕೇರಳ ಮೂಲದ ಶ್ರೀಲಕ್ಷ್ಮೀ ಸತೀಶ್ ಎಂಬ ಯುವತಿಯ ರೀಲ್ಸ್ ಗೆ ಆರ್‍.ಜಿ.ವಿ ಫಿದಾ ಆಗಿ ನಿಮಗೆ ಇಷ್ಟ ಇದ್ದರೇ ನನ್ನ ಸಿನೆಮಾದಲ್ಲಿ ನಟಿಸಿ, ಹಿರೋಯಿನ್ ಮಾಡುತ್ತೀನಿ ಎಂದು ಹೇಳಿದ್ದರು.

ಅದರಂತೆ ವರ್ಮಾ ನಿರ್ದೇಶನದಲ್ಲಿ ನಟಿಸಲು ಶ್ರೀಲಕ್ಷ್ಮೀ ಸತೀಶ್ ಸಹ ಒಪ್ಪಿಕೊಂಡಿದ್ದಾರೆ. ಇದೀಗ ಆಕೆ ನಟಿಸಲಿರುವ ಸಿನೆಮಾ ಸಹ ಘೋಷಣೆ ಮಾಡಿದ್ದಾರೆ. ಸಿನೆಮಾದ ಫಸ್ಟ್ ಲುಕ್ ಜೊತೆಗೆ ಟೈಟಲ್ ಸಹ ರಿವೀಲ್ ಮಾಡಿದ್ದಾರೆ. ಈ ಸಿನೆಮಾಗೆ ವರ್ಮಾ Saree ಎಂದು ಟೈಟಲ್ ಇಟ್ಟಿದ್ದಾರೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್‍ ಸಿನೆಮಾ ಎಂದು ತಿಳಿಸಿದ್ದಾರೆ ವರ್ಮಾ. ಡಿ.21 ಇಂಟರ್‍ ನ್ಯಾಷನಲ್ Saree ಡೇ ಆಗಿದ್ದು ಅದರ ಅಂಗವಾಗಿ ವರ್ಮಾ ಈ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್‍ ಬಿಡುಗಡೆ ಮಾಡಿದ್ದಾಗಿ ತಿಳಿಸಿದ್ದಾರೆ. ಈ ಸಿನೆಮಾದ ಪೋಸ್ಟರ್‍ ಸಹ ತುಂಬಾನೆ ವಿಭಿನ್ನವಾಗಿದೆ ಎಂದು ಹೇಳಬಹುದಾಗಿದೆ.

ಕೇರಳ ಮೂಲದ ಶ್ರೀಲಕ್ಷ್ಮೀ ಸತೀಶ್ ಸೋಷಿಯಲ್ ಮಿಡಿಯಾದಲ್ಲಿ ಸೀರೆಯಲ್ಲಿ ಪೊಟೋಶೂಟ್ಸ್, ರೀಲ್ಸ್ ಮಾಡುತ್ತಾ ಫೇಂ ಪಡೆದುಕೊಂಡಿದ್ದರು. ವರ್ಮಾ ಆಕೆಯ ರೀಲ್ಸ್ ನೋಡಿ ಫಿದಾ ಗಿದ್ದು, ಆಕೆಯ ಹುಡುಕಾಟ ಸಹ ನಡೆಸಿದ್ದರು. ಇದೀಗ ಆಕೆಯೊಂದಿಗೆ ಸಿನೆಮಾ ಮಾಡುತ್ತಿದ್ದಾರೆ. ಆರ್‍.ಜಿ.ವಿ. ಡೆನ್ ಬ್ಯಾನರನಡಿ ವರ್ಮಾ ಈ ಸಿನೆಮಾ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಈ ಸಿನೆಮಾದ ಫಸ್ಟ್ ಲುಕ್ ಪೋಸ್ಟರ ಸಖತ್ ಸದ್ದು ಮಾಡುತ್ತಿದೆ.

Most Popular

To Top