ಶೀಘ್ರದಲ್ಲೇ ರಶ್ಮಿಕಾ ವಿಜಯ್ ರವರೂ ಸಹ ಲಾವಣ್ಯ ವರುಣ್ ತೇಜ್ ರಂತೆ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರೆಯೇ?

Follow Us :

ಇತ್ತೀಚಿಗೆ ಸಿನೆಮಾ ಸೆಲೆಬ್ರೆಟಿಗಳು ಪ್ರೀತಿ, ಮದುವೆ, ಎಂಗೇಜ್ ಮೆಂಟ್ ಗಳು ಜೋರಾಗಿಯೇ ನಡೆಯುತ್ತಿವೆ. ಸುಮಾರು ದಿನಗಳಿಂದ ಡೇಟಿಂಗ್ ನಲ್ಲಿದ್ದು, ಏನು ಇಲ್ಲ ಎಂದು ಹೇಳುತ್ತಲೇ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಕೆಲವು ದಿನಗಳ ಹಿಂದೆಯಷ್ಟೆ ಎಂಗೇಜ್ ಮೆಂಟ್ ಮಾಡಿದಕೊಂಡರು. ಸುಮಾರು ಆರು ವರ್ಷಗಳಿಂದ ಈ ಜೋಡಿ ಪ್ರೀತಿ ಮಾಡಿಕೊಳ್ಳುತ್ತಿದ್ದರಂತೆ. ಇದೀಗ ಅಧಿಕೃತವಾಗಿ ಈ ಜೋಡಿ ಸಪ್ತಪದಿ ತುಳಿಯಲಿದೆ. ಅವರ ಹಾದಿಯಲ್ಲೇ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ರವರು ಸಹ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.

ಸುಮಾರು ವರ್ಷಗಳಿಂದ ನ್ಯಾಷನಲ್ ಕ್ರಷ್ ರಶ್ಮಿಕಾ ಹಾಗೂ ರೌಡಿ ಹಿರೋ ವಿಜಯ್ ದೇವರಕೊಂಡ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಗಳು ಹರಿದಾಡುತ್ತಲೇ ಇದೆ. ಅವರಿಬ್ಬರ ಕಾಂಬಿನೇಷನ್ ನಲ್ಲಿ ಬಂದಂತಹ ಗೀತಾ ಗೋವಿಂದಂ ಸಿನೆಮಾದ ಬಳಿಕ ಇಬ್ಬರ ನಡುವೆ ಲವ್ ಶುರುವಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅನೇಕ ಬಾರಿ ಅವರಲ್ಲಿ ಕೇಳಿದರೂ ಸಹ ಎಲ್ಲವೂ ಸುಳ್ಳು ರೂಮರ್‍ ಗಳು ಎಂದು ತಳ್ಳಿಹಾಕಿದ್ದರು. ಅದೇ ರೀತಿ ಮೆಗಾ ಪ್ರಿನ್ಸ್ ವರುಣ್ ಹಾಗೂ ಲಾವಣ್ಯ ತ್ರಿಪಾಠಿ ರವರೂ ಸಹ ಅನೇಕ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಆದರೆ ಈ ಬಗ್ಗೆ ಕೇಳಿದರೇ ಎಲ್ಲಾ ಸುಳ್ಳು ನಾವಿಬ್ಬರೂ ಸ್ನೇಹಿತರು ಎಂದು ಹೇಳುತ್ತಿದ್ದರು. ಇದೀಗ ರಶ್ಮಿಕಾ ಹಾಗೂ ವಿಜಯ್ ಸಹ ಅದೇ ರೀತಿ ಹೇಳುತ್ತಿದ್ದಾರೆ. ಆದರೆ ಇಬ್ಬರೂ ಶೀಘ್ರದಲ್ಲೇ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೀಗ ವೈರಲ್ ಆಗುತ್ತಿದೆ.

ಇನ್ನೂ ಸುಮಾರು ವರ್ಷಗಳ ಹಿಂದೆಯೇ ರಶ್ಮಿಕಾ ಹಾಗೂ ನಟ ರಕ್ಷಿತ್ ಶೆಟ್ಟಿ ಎಂಗೇಜ್ ಮೆಂಟ್ ನಡೆದಿತ್ತು. ಬಳಿಕ ಕೆಲವೊಂದು ಕಾರಣಗಳಿಂದ ಈ ಎಂಗೇಜ್ ಮೆಂಟ್ ಮುರಿದು ಬಿತ್ತು. ಬಳಿಕ ರಶ್ಮಿಕಾ ಟಾಲಿವುಡ್ ನಲ್ಲಿ ವಿಜಯ್ ದೇವರಕೊಂಡ ಜೊತೆಗೆ ಸಿನೆಮಾಗಳನ್ನು ಮಾಡಿದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದವು. ಅದರಲ್ಲೂ ಡಿಯರ್‍ ಕಾಮ್ರೆಡ್ ಸಿನೆಮಾದ ಬಳಿಕ ಅವರಿಬ್ಬರ ಪ್ರೀತಿ ಹೆಚ್ಚಾಯ್ತು ಎಂಬ ಸುದ್ದಿ ಜೋರಾಯಿತು. ಇನ್ನೂ ಅನೇಕ ಬಾರಿ ಈ ಜೋಡಿ ವೆಕೇಷನ್ ಗಳಿಗೆ ಹೋಗಿದ್ದಾರೆ. ಮಿಡಿಯಾ ಕಣ್ಣಿಗೆ ಬೀಳದಂತೆ ಸ್ಟಾರ್‍ ಹೋಟೆಲ್ ಗಳಲ್ಲಿ ಭೇಟಿ ಯಾಗುತ್ತಿದ್ದಾರೆ. ಜತೆಗೆ ರಶ್ಮಿಕಾ ಇತ್ತಿಚಿಗೆ ವಿಜಯ್ ದೇವರಕೊಂಡ ರವರ ಮನೆಗೆ ಹೋಗುತ್ತಿರುತ್ತಾರೆ ಎಂದು ಹೇಳಲಾಗುತ್ತಿದೆ. ಮುಂದಿನ ವರ್ಷ ಇವರ ಮದುವೆ ನಡೆಯಲಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದೆ.

ಇನ್ನೂ ರಶ್ಮಿಕಾ ಮಂದಣ್ಣ ಕಡಿಮೆ ಸಮಯದಲ್ಲೇ ಸೌತ್ ಅಂಡ್ ನಾರ್ತ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡರು. ಸಾಲು ಸಾಲು ಸಿನೆಮಾಗಳು ಆಕೆಯ ಕೈಯಲ್ಲಿವೆ. ಪುಷ್ಪಾ ಸಿನೆಮಾದ ಬಳಿಕ ಆಕೆಗೆ ಸರಿಯಾದ ಹಿಟ್ ಸಿಗಲಿಲ್ಲವಾದರೂ ಆಕೆಗೆ ಅವಕಾಶಗಳು ಮಾತ್ರ ಕಡಿಮೆಯಾಗಿಲ್ಲ. ಸದ್ಯ ಆಕೆ ಪುಷ್ಪಾ-2 ಹಾಗೂ ಯಾನಿಮಲ್ ಸೇರಿದಂತೆ ಮತಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ವಿಜಯ್ ದೇವರಕೊಂಡ ಸಹ ಖುಷಿ ಸಿನೆಮಾದ ಜೊತೆಗೆ ಕೆಲವು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.