Film News

ಪಾಪ ರಾಖಿ ಸಾವಂತ್ ಜೀವನದಲ್ಲಿ ಏನಾಗ್ತಿದೆ, ಈ ಬಾರಿಯೂ ಸಹ ಮದುವೆಯ ಬಗ್ಗೆ ಗೊಂದಲ?

ಬಾಲಿವುಡ್ ನಲ್ಲಿ ವಿಭಿನ್ನ ನಟಿಯೆಂದೆ ಖ್ಯಾತಿ ಪಡೆದುಕೊಂಡ ಬಿಗ್ ಭಾಸ್ ಖ್ಯಾತಿಯ ರಾಖಿ ಸಾವಂತ್ ಲವ್, ಮ್ಯಾರೆಜ್ ಮೊದಲಾದ ಕಾರಣಗಳಿಂದ ಸದಾ ಸುದ್ದಿಯಾಗುತ್ತಲೇ ಇರುತ್ತಾರೆ. ಸುಮಾರು ದಿನಗಳಿಂದ ರಾಖಿ ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ಎಂಬಾಂತನೊಂದಿಗೆ ಪ್ರೇಮ ಪಯಣ ಸಾಗಿಸಿ ರಿಜಿಸ್ಟರ್‍ ಮದುವೆಯಾಗಿದ್ದಾರೆ ಎಂದು ಕೆಲವೊಂದು ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಹರಿದಾಡಿದೆ. ಆದರೆ ಅದನ್ನೂ ಆದಿಲ್ ಮಾತ್ರ ಮದುವೆಯಾಗಿಲ್ಲ ಎಂದು ಈ ಸುದ್ದಿಯನ್ನು ಅಲ್ಲಗೆಳೆಯುತ್ತಿದ್ದಾರೆ. ಆದರೆ ಈಗ ಹರಿದಾಡುತ್ತಿರುವ ಪೊಟೋಗಳನ್ನು ನೋಡಿದರೇ ಇಬ್ಬರೂ ರಿಜಿಸ್ಟರ್‍ ಮ್ಯಾರೇಜ್ ಆಗಿದ್ದಾರೆ ಎಂದು ತಿಳಿಯಬಹುದಾಗಿದೆ.

ಇನ್ನೂ ಆದಿಲ್ ಮದುವೆಯ ಬಗ್ಗೆ ನೀಡಿದ ಹೇಳಿಕೆಯಿಂದಾಗಿ ರಾಖಿ ಕೋಪಗೊಂಡಿದ್ದಾರಂತೆ. ಈ ಬಗ್ಗೆ ಆಕೆ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗುತ್ತಿದೆ. ರಾಖಿ ಹೇಳುವಂತೆ ಆದಿಲ್ ಜೊತೆ ಕಳೆದು ಏಳು ತಿಂಗಳ ಹಿಂದೆಯೇ ಮದುವೆಯಾಗಿದ್ದೆ. ಮದುವೆಯ ಬಗ್ಗೆ ಹೊರಗಡೆ ಹೇಳದಂತೆ ಆದಿಲ್ ಬೆದರಿಸಿದ್ದ, ಆದಿಲ್ ನನ್ನು ನಾನು ಸುಮಾರು ವರ್ಷಗಳ ಹಿಂದೆಯೇ ಭೇಟಿಯಾಗಿದ್ದು, ಕಳೆದ ವರ್ಷ ಜುಲೈ ಮಾಹೆಯಲ್ಲಿ ಮದುವೆಯಾಗಿದ್ದೆವು. ಮದುವೆ ಬಗ್ಗೆ ಹೊರಗಡೆ ತಿಳಿದರೇ ಆದಿಲ್ ತಂಗಿಗೆ ಹುಡುಗ ಸಿಗುವುದಿಲ್ಲ ಎಂದು ನನಗೆ ನಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸದಂತೆ ಬೆದರಿಸಿದ್ದ. ನನ್ನ ಹೆಸರನ್ನು ಹೇಳುವುದಕ್ಕೂ ಸಹ ಆದಿಲ್ ಗೆ ನಾಚಿಕೆಯಂತೆ. ಹೀಗೆ ಅನೇಕ ವಿಚಾರಗಳನ್ನು ರಾಖಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ನಾನು ಆದಿಲ್ ಪತ್ನಿಯಾಗಿರಬೇಕು ಎಂದು ಬಯಸುತ್ತೇನೆ. ಆದರೆ ಆದಿಲ್ ಮಾತ್ರ ಮದುವೆಯಾಗಿಲ್ಲ ಎಂದು ಏಕೆ ಹೇಳುತ್ತಿದ್ದಾನೆ ತಿಳಿಯುತ್ತಿಲ್ಲ. ನಾನು ಹಿಂದೂ ಹುಡುಗಿ ಎಂಬ ಕಾರಣದಿಂದ ಆತ ಹೀಗೆ ಮಾಡುತ್ತಿರಬಹುದೇನೋ. ಸದ್ಯ ನನ್ನ ಸ್ಥಿತಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತಿದೆ. ಮದುವೆಯಾಗಿದ್ದರೂ ಸಹ ಅದನ್ನು ನಿರ್ಭಯದಿಂದ ಹೇಳಿಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲ. ನಾನು ಬಿಗ್ ಬಾಸ್ ಶೋ ನಲ್ಲಿದ್ದಾಗಲೇ ನಮ್ಮ ಮದುವೆ ನಡೆದಿತ್ತು. ಆದಿಲ್ ಮಾತುಗಳನ್ನು ಕೇಳಿ ನಾನು ಇಷ್ಟು ದಿನ ಸುಮ್ಮನಿದ್ದೆ. ಇನ್ನು ನಾನು ಸುಮ್ಮನಿರಲು ಸಾಧ್ಯವಿಲ್ಲ. ಆದಿಲ್ ನನಗೆ ಮೋಸ ಮಾಡುತ್ತಿದ್ದಾನೆ ಎಂಬ ಭಾವನೆ ಬರುತ್ತಿದೆ. ಇನ್ನೂ ನನ್ನ ಮದುವೆ ಬ್ರೇಕಪ್ ಆಗುತ್ತಲೇ ಇದೆ. ಆದರೆ ಈ ಬಾರಿ ಆ ರೀತಿಯಾಗಲು ನಾನು ಇಷ್ಟಪಡುವುದಿಲ್ಲ. ಇನ್ನೂ ತುಂಬಾ ಹೇಳೋದು ಬಾಕಿಯಿದೆ. ಸಮಯ ಬಂದಾಗ ಎಲ್ಲ ವಿಚಾರಗಳನ್ನು ತಿಳಿಸುತ್ತೇನೆ ಎಂದಿದ್ದಾರೆ.

ಇನ್ನೂ ಆದಿಲ್ ಮದುವೆ ಸುದ್ದಿಯನ್ನು ಸುಳ್ಳು ಸುದ್ದಿ ಎಂದು ತಳ್ಳಿಹಾಕಿದ್ದಾರೆ. ಈ ಹಿಂದೆ ರಾಖಿ ಜೊತೆಯಲ್ಲಿ ನಾನು ಇರುವುದಕ್ಕೆ ನನಗೆ ಅನೇಕ ಬೆದರಿಕೆ ಕರೆಗಳೂ ಸಹ ಬರುತ್ತಿವೆ ಎಂದೂ ಸಹ ಹೇಳಿಕೊಂಡಿದ್ದರು. ಇನ್ನೂ ರಾಖಿಗೆ ಆದಿಲ್ ದುಬೈನಲ್ಲಿ ದುಬಾರಿ ಬೆಲೆ ಗಿಫ್ಟ್ ಗಳನ್ನೂ ಸಹ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ರಾಖಿ ಜೀವನದಲ್ಲಿ ಏನೆಲ್ಲಾ ಸನ್ನಿವೇಶಗಳು ಎದುರಾಗಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top